ನ್ಯೂಸ್

ಬೆಂಗಳೂರಿನಲ್ಲಿ ಲೇಡಿ ಗ್ಯಾಂಗ್ ಅಟ್ಟಹಾಸ; ಪರಿಚಯಸ್ಥ ವ್ಯಕ್ತಿಯನ್ನೇ ಅಮಾನುಷವಾಗಿ ಥಳಿಸಿದ ಗ್ಯಾಂಗ್| Viral vedeo

ಬೆಂಗಳೂರು : ಮಹಿಳೆಯೊಬ್ಬಳು ಇತರ ಕೆಲವು ಗೂಂಡಾಗಳೊಂದಿಗೆ ಸೇರಿ ವ್ಯಕ್ತಿಯೋರ್ವನಿಗೆ ಮನಸೋಇಚ್ಛೆ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಘಟನೆ ಬೆಂಗಳೂರಿನ ಅಮೃತಹಳ್ಳಿಯಲ್ಲಿ ನಡೆದದ್ದು ಎಂದು ಹೇಳಲಾಗಿದ್ದು, ವ್ಯಾಪಾರದ ಪೈಪೋಟಿಗಾಗಿ ಮಹಿಳೆಯ ನೇತೃತ್ವದ ತಂಡವೊಂದು ಸಲೂನ್ ಮಾಲೀಕನನ್ನು ಅಪಹರಿಸಿ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.

ಮಹಿಳೆಯೊಬ್ಬಳು ಕೈಯಲ್ಲಿ ‌ಸಿಗರೇಟ್ ಹಿಡಿದುಕೊಂಡು ರೌಡಿಯಂತೆ ವರ್ತಿಸುತ್ತಾ ಆ ವ್ಯಕ್ತಿ ಮುಖಕ್ಕೆ‌ ಹೊಡೆದು ಹಲ್ಲೆ ಮಾಡಿದ್ದಾರೆ. ಪಕ್ಕದಲ್ಲಿ ನಿಂತ್ತಿದ್ದ ಇಬ್ಬರು ವ್ಯಕ್ತಿಗಳು ಕೂಡ ಹಲ್ಲೆ ಮಾಡಿ ದರ್ಪ ತೋರಿದ್ದಾರೆ. ಕೈಮುಗಿದು ಬೇಡಿಕೊಂಡರು ಬಿಡದೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ.

ಸಂಜು ಎಂಬಾತ ರಾಯಲ್ ಸಲೂನ್ ಮತ್ತು ಸ್ಪಾವನ್ನು ನಡೆಸುತ್ತಿದ್ದ. ರಾತ್ರಿ ಎಂಟು ಗಂಟೆ ಸುಮಾರಿಗೆ ಎಂಟ್ರಿ ಕೊಟ್ಟ ಕಾವ್ಯ, ಸ್ಮೀತಾ, ಮೊಹಮ್ಮದ್ ಹಾಗೂ ಇನ್ನಿಬ್ಬರು ಬಂದು ಏಕಾಏಕಿ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ನಂತರ ಕಾರ್ ನಲ್ಲಿ ಕಿಡ್ನಾಪ್ ಮಾಡಿಕೊಂಡು ದಾಸರಹಳ್ಳಿ ಕಡೆ ಸುತ್ತಾಡಿಸಿ ಬಿಯರ್ ಬಾಟಲ್, ಡ್ರಾಗರ್, ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ ಎಂದು ಕಿಡ್ನಾಪ್​ಗೆ ಒಳಗಾದ ಸಂಜು ಅವರ ಪತ್ನಿ ತಕ್ಷಣ ‌ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ.

(ಏಜೆನ್ಸೀಸ್)

ಕಾವ್ಯ ಜೊತೆ ಸಂಜು ಸ್ಪಾನಲ್ಲಿ ಮ್ಯಾನೇಜರ್ ಆಗಿ ಸುಮಾರು ಎಂಟು ವರ್ಷಗಳಿಂದ ಕೆಲಸ ಮಾಡುತ್ತಿದ್ದನಂತೆ. ಇತ್ತೀಚಿಗೆ ಸ್ಪಾ ಮಾರಾಟ ಮಾಡಿ ಬೇರೆ ಕಡೆ ಓಪನ್ ಮಾಡಿದ್ರಂತೆ. ಇದರಿಂದ ಬೇಸತ್ತ ಕಾವ್ಯ ಅಂಡ್ ಗ್ಯಾಂಗ್ ಏಕಾಏಕಿ ಸ್ಪಾ ಒಳಗೆ ‌ನುಗ್ಗಿ ಹಲ್ಲೆ ಮಾಡಿ ಕಿಡ್ನಾಪ್ ಮಾಡಿದ್ದಾರೆ. ಸದ್ಯ ಪೊಲೀಸರು ಮೂವರನ್ನ ಅರೆಸ್ಟ್ ಮಾಡಿ ತನಿಖೆ ನಡೆಸುತ್ತಿದ್ದಾರೆ. ಇನ್ನೂ ಘಟನೆಗೆ ನಿಖರ ಕಾರಣ ಪೊಲೀಸರ ತನಿಖೆಯ ಬಳಿಕ ಗೊತ್ತಾಗಬೇಕಿದೆ.