ನ್ಯೂಸ್

ನಾಯಿ ಕದ್ದ ಕಳ್ಳರಿಂದ ಆ ಸಾಕು ಪ್ರಾಣಿಯ ಒಡತಿ ವಿರುದ್ಧ ದೂರು!

ಲಾಸ್ ಏಂಜಲೀಸ್: ಖ್ಯಾತ ಗಾಯಕಿ ಲೇಡಿ ಗಾಗಾ ಕಾನೂನು ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ಲೇಡಿ ಗಾಗಾರ ಸಾಕು ನಾಯಿಗಳಾದ ಕೋಜಿ ಮತ್ತು ಗುಸ್ತಾವ್‌ಗಳನ್ನು ಮಹಿಳೆ ಜೆನ್ನಿಫರ್ ಮ್ಯಾಕ್‌ಬೈಡ್ ಹಿಂದಿರುಗಿಸಿ ಕೊಟ್ಟಿದ್ದಾರೆ. ಆದರೆ ಈಕೆ ನಾಯಿಗಳನ್ನು ಕದಿಯುವುದಕ್ಕೆ ಸಹಾಯ ಮಾಡಿದ್ದಾಳೆ ಎಂದು ಹೇಳಲಾಗುತ್ತಿದೆ. ನಾಯಿ ಹಿಂತಿರುಗಿಸಿದ ಮೇಲೆ 5,00,000 ಡಾಲರ್ ಬಹುಮಾನವನ್ನು ಪಾವತಿಸದೇ ಇದ್ದದ್ದಕ್ಕಾಗಿ ಈ ಮಹಿಳೆ ಲೇಡಿ ಗಾಗಾ ವಿರುದ್ಧವೇ ಮೊಕದ್ದಮೆ ಹೂಡಿದ್ದಾರೆ.

ಮಹಿಳೆ ಮೆಕ್‌ಬ್ರೆಡ್‌ನ ವಕೀಲರು ಶುಕ್ರವಾರ "ಯಾವುದೇ ಪ್ರಶ್ನೆಗಳನ್ನು ಕೇಳಲಾಗುವುದಿಲ್ಲ ಎಂದು ಹೇಳಿದ್ದ ಲೇಡಿ ಗಾಗಾ ಬಹುಮಾನದ ಮೊತ್ತವನ್ನು ಪಾವತಿಸಲು ವಿಫಲರಾದರು. ಗಾಗಾ ಒಪ್ಪಂದದ ಉಲ್ಲಂಘನೆ, ಸುಳ್ಳು ಭರವಸೆ ಮತ್ತು ತಪ್ಪು ನಿರೂಪಣೆಯಿಂದ ವಂಚನೆ ಮಾಡಿದ್ದಾರೆ ಎಂದು ವಾದ ಮಾಡಿದ್ದಾರೆ.

ಗಾಗಾ ನಾಯಿಗಳ ಕಳ್ಳತನದ ಮೇಲೆ ಬಂಧಿಸಲ್ಪಟ್ಟ ಮತ್ತು ಆರೋಪ ಹೊರಿಸಲಾದ ಐದು ಜನರಲ್ಲಿ ಮ್ಯಾಕ್‌ಡ್ ಕೂಡ ಒಬ್ಬರು. ಲಾಸ್‌ ಏಂಜಲೀಸ್‌ ಪೋಲೀಸ್‌ ಡಿಪಾರ್ಟೆಂಟ್ (LAPD) ಪ್ರಕಾರ, ಮ್ಯಾಕ್​ಬ್ರೆಡ್​ ಈ ಅಪರಾಧದಲ್ಲಿ ಸಹಾಯಕಿ ಆಗಿದ್ದಳು ಎಂದು ಹೇಳಲಾಗಿದೆ. (ಏಜೆನ್ಸೀಸ್​)