ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಾಲಯ 2019-20ನೇ ಸಾಲಿನ ಆರ್ಥಿಕ ವರ್ಷದಲ್ಲಿ 98.92 ಕೋಟಿ ರೂ.ಆದಾಯ ಗಳಿಸಿದ್ದು, ಇದು ಶತಕೋಟಿ ರೂ. ತಲುಪುವುದು ಕರೊನಾ ಹಾವಳಿಯಿಂದಾಗಿ ಸ್ವಲ್ಪದರಲ್ಲೇ ಮಿಸ್ ಆಗಿದೆ.
2019 ಏಪ್ರಿಲ್‌ನಿಂದ 2020 ಮಾರ್ಚ್ 31ರ ತನಕದ ಆರ್ಥಿಕ ವರ್ಷದಲ್ಲಿ ದೇವಳಕ್ಕೆ ಈ ಆದಾಯ ಬಂದಿದೆ. ಕಳೆದ ವರ್ಷಕ್ಕಿಂತ ಈ ಬಾರಿ 6.83 ಕೋಟಿ ರೂ. ಅಧಿಕ ಆದಾಯ ಬಂದಿದೆ.
ಲಾಕ್‌ಡೌನ್‌ನಿಂದಾಗಿ ದೇವಸ್ಥಾನ ಫೆಬ್ರವರಿಯಿಂದ ಬಂದ್ ಆಗಿತ್ತು. ಈ ಬಾರಿ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಆದಾಯ ಬರುತ್ತಿದ್ದರೆ ಅಥವಾ ದೇವಳದಲ್ಲಿ ಹುಂಡಿ ಎಣೆಕೆಯಾಗಿದ್ದರೂ, ದೇವಳದ ಆದಾಯ ನೂರು ಕೋಟಿ ತಲುಪುತ್ತಿತ್ತು. ಅಲ್ಪ ಪ್ರಮಾಣದಲ್ಲಿ ನೂರು ಕೋಟಿ ಆದಾಯ ಗಳಿಕೆ ಮಿಸ್ ಆಗಿದೆ.
ಇದನ್ನೂ ಓದಿ 109 ವರ್ಷದ ಸಾಲುಮರದ ತಿಮ್ಮಕ್ಕ ಆಸ್ಪತ್ರೆಗೆ ದಾಖಲು
ಈ ಬಾರಿ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪದಿಂದ ಎರಡು ತಿಂಗಳು ಭಕ್ತರ ಆಗಮನ ಕಡಿಮೆಯಾಗಿತ್ತು. ಹಾಗಿದ್ದರೂ ಈ ಆರ್ಥಿಕ ವರ್ಷದಲ್ಲಿ 6.83 ಕೋಟಿ ರೂ. ಅಧಿಕ ಆದಾಯ ಬಂದಿರುವುದು ಗಮನಾರ್ಹವಾಗಿದೆ.
2006-07ರಿಂದಲೂ ಈ ದೇವಸ್ಥಾನ ಅಧಿಕ ಆದಾಯ ಗಳಿಸುತ್ತಿದ್ದು, ಸತತ ಎಂಟನೇ ವರ್ಷ ರಾಜ್ಯದ ನಂಬರ್ ಒನ್ ಆದಾಯ ಗಳಿಕೆಯ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.