ನ್ಯೂಸ್

ಕೆಎಸ್‌ಆರ್‌ಟಿಸಿ ಬಸ್, ಮೆಟ್ರೋ ರೈಲು ಸಂಚಾರ ಯಾವಾಗ ಆರಂಭ?

malli

ಬೆಂಗಳೂರು: ಪ್ರಯಾಣಿಕ ರೈಲುಗಳ ಸಂಚಾರದ ಮಾದರಿಯಲ್ಲಿಯೇ ಆಯ್ದ ಜಿಲ್ಲೆಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ರಾಜ್ಯ ಸರ್ಕಾರ ಅನುವು ಮಾಡಿಕೊಡುವ ಸಾಧ್ಯತೆಗಳಿವೆ.

ಈಗಾಗಲೆ ರಾಜ್ಯದ ಹಸಿರು ವಲಯದ ಜಿಲ್ಲೆಗಳ ವ್ಯಾಪ್ತಿಯೊಳಗೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸೇವೆ ನೀಡುತ್ತಿದೆ. ಜತೆಗೆ ಸೇವಾ ಸಿಂಧು ವೆಬ್‌ಪೋರ್ಟಲ್‌ನಲ್ಲಿ ಇ-ಪಾಸ್ ಪಡೆದವರಿಗಾಗಿ ಅಂತಾರಾಜ್ಯ ಸೇವೆಗೆ ಚಾಲನೆ ನೀಡಲಾಗುತ್ತಿದೆ. ಇದೀಗ ಆಯ್ದ ಜಿಲ್ಲೆಗಳ ನಡುವೆ ಬಸ್ ಸಂಚಾರ ಆರಂಭಿಸಲು ಸಿದ್ಧತೆ ನಡೆಸಲಾಗಿದೆ.

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ರೈಲು ಸೇವೆ ಆರಂಭದ ಕುರಿತು ಈವರೆಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಆದರೂ, ಶೇ. 33 ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವಂತೆ ಈಗಾಗಲೆ ಸೂಚಿಸಲಾಗಿದೆ.

ಮೆಟ್ರೋ ರೈಲು ಹವಾನಿಯಂತ್ರಿತ ಸೇವೆಯಾದ ಕಾರಣ ಸದ್ಯಕ್ಕೆ ಆರಂಭ ಮಾಡುವುದು ಅನುಮಾನ ಎನ್ನಲಾಗುತ್ತಿದೆ. ಮೇ 17ರ ನಂತರ ಆರಂಭಿಸುವ ಬಗ್ಗೆಯೂ ಚರ್ಚೆಗಳನ್ನು ನಡೆಸಲಾಗಿದೆ.