ಮುಂಬೈ: ಬಾಲಿವುಡ್ ನಟಿ ಕೃತಿ ಸನೋನ್ 'ಆದಿಪುರುಷ್' ಚಿತ್ರದ ಸೋಲಿನ ನಂತರ ಯಾವ ವೇದಿಕೆಗಳಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದ್ರೆ, ಇದೀಗ ತಮ್ಮದೇ ಹೊಸ ಸ್ಕಿನ್‌ಕೇರ್ ಬ್ರಾಂಡ್ ಅನ್ನು ಬಿಡುಗಡೆಗೊಳಿಸುವ ಮುಖೇನ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಇದನ್ನೂ ಓದಿ: ಪುಣೆಯ ಫ್ಯೂಯಲ್ ಬಿ-ಸ್ಕೂಲ್ನಿಂದ ಪಿಜಿಡಿಎಂ ಕೋರ್ಸ್
ಡಾರ್ಲಿಂಗ್ ಪ್ರಭಾಸ್ ನಟನೆಯ ಪೌರಾಣಿಕ ಕಥೆ ಆಧರಿತ, ಪ್ಯಾನ್ ಇಂಡಿಯಾ ಚಿತ್ರ 'ಆದಿಪುರುಷ್' ಸಿನಿಮಾದಲ್ಲಿ ಸೀತಾ ದೇವಿ ಪಾತ್ರದಲ್ಲಿ ಅಭಿನಯಿಸಿದ್ದರು. ಸಿನಿಮಾ ಹೀನಾಯ ಸೋಲನ್ನು ಕಂಡ ಬಳಿಕ ಕೃತಿ ಎಲ್ಲಿಯೂ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. ಇಂದು ತಮ್ಮ ಜನ್ಮದಿನದಂದು ಈ ಹೊಸ ಯೋಜನೆಯನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.
ತಮ್ಮದೇ ಆದ ಸ್ಕಿನ್‌ಕೇರ್ ಬ್ರ್ಯಾಂಡ್ 'ಹೈಫನ್' ಅನ್ನು ಒಂದು ಆ್ಯಡ್ ಮೂಲಕ ಲಾಂಚ್ ಮಾಡಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ "ಹ್ಯಾಪಿ ಬರ್ತಡೇ ಟು ಮಿ......" ಎಂದು ಬರೆದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಕಂಪನಿಯ ಪ್ರಕಾರ, ಅವರ ಉತ್ಪನ್ನಗಳು 100% ನೈಸರ್ಗೀಕವಾಗಿದೆ ಮತ್ತು ಪೆಟಾ ಪ್ರಮಾಣೀಕೃತ ಮತ್ತು ಪ್ಲಾಸ್ಟಿಕ್‌ನಿಂದ ಮುಕ್ತವಾಗಿವೆ ಎಂದು ಹೇಳಲಾಗಿದೆ. ಕೃತಿ ಜನ್ಮದಿನಕ್ಕೆ ಅಭಿಮಾನಿಗಳು ಶುಭಾಶಯ ತಿಳಿಸಿದ್ದು, ಇದೀಗ ಹೊಸ ಬ್ರಾಂಡ್ ಪರಿಚಯಿಸಿದ್ದಕ್ಕೆ ಅಭಿನಂದಿಸಿದ್ದಾರೆ.
ಸದ್ಯ ಗಣಪತ್- 1 ಚಿತ್ರದಲ್ಲಿ ಟೈಗರ್ ಶ್ರಾಫ್ಗೆ ಜೋಡಿಯಾಗಿ ನಟಿಸಿರುವ ಕೃತಿ ಸನನ್, ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ,(ಏಜೆನ್ಸೀಸ್).