ಮುಂಬೈ: ರಾಷ್ಟ್ರ ಪ್ರಶಸ್ತಿ ವಿಜೇತೆ, ಬಾಲಿವುಡ್ ಬ್ಯೂಟಿ ಕೃತಿ ಸನನ್ ಇದೀಗ ಅಂತಾರಾಷ್ಟ್ರೀಯ ಐಷಾರಾಮಿ ಫ್ಯಾಷನ್ ಕಂಪನಿಯೊಂದಕ್ಕೆ ರಾಯಭಾರಿಯಾದ ಸುದ್ದಿ ಅವರ ಅಭಿಮಾನಿಗಳಲ್ಲಿ ಭಾರೀ ಸಂತಸ ಮೂಡಿಸಿದೆ.
69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2023 ರಲ್ಲಿ 'ಮಿಮಿ' ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದ ಕೃತಿ ಸನನ್, ತಮ್ಮ ಅಭಿಮಾನಿಗಳು ಸೇರಿದಂತೆ ಕುಟುಂಬದವರಿಗೆ, ಚಿತ್ರತಂಡಕ್ಕೆ ಅಭಿನಂದನೆ ತಿಳಿಸಿದ್ದರು. 2021 ರಲ್ಲಿ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಗೊಂಡ ಈ ಚಿತ್ರದಲ್ಲಿ ಕೃತಿ ನಟನೆಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿತ್ತು. ಇದೀಗ ಅಂತಾರಾಷ್ಟ್ರೀಯ ಬ್ರ್ಯಾಂಡ್ವೊಂದಕ್ಕೆ ಬ್ರಾಂಡ್ ಅಂಬಾಸಿಡರ್ ಆಗುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.
ಗಿಯಾನಿ ವರ್ಸೇಸ್ ಸ್ಥಾಪಿಸಿದ ಇಟಾಲಿಯನ್ ಐಷಾರಾಮಿ ಫ್ಯಾಷನ್ ಕಂಪನಿಯಾದ 'ವರ್ಸೇಸ್'ಗೆ ಕೃತಿ ಸನನ್, ಭಾರತೀಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ಹಂಚಿಕೊಂಡ ನಟಿ, ಮಿಲನ್‌ನಲ್ಲಿ ನಡೆದ ಫಾಲ್-ವಿಂಟರ್ 2023 ಕಾರ್ಯಕ್ರಮದ ವೇಳೆ ಧರಿಸಿದ್ದ ಕಪ್ಪು ಉಡುಪನ್ನು ಪೋಸ್ಟ್ ಮಾಡುವ ಮುಖೇನ ತಿಳಿಸಿದ್ದಾರೆ,(ಏಜೆನ್ಸೀಸ್).