pavan kalyan 
ನ್ಯೂಸ್

DCM Pawan Kalyan: 'ಯೋಗಿ ಆದಿತ್ಯನಾಥ್ ನಂತರ ಪವನ್ ನಿಜ ಜೀವನದ ಹೀರೋ': ನಿರ್ದೇಶಕ ಕೃಷ್ಣ ವಂಶಿ

ಅಮರಾವತಿ: ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್(DCM Pawan Kalyan) ನಿಜ ಜೀವನದ ಹೀರೋ ಎಂದು ಟಾಲಿವುಡ್​ ಕ್ರಿಯೇಟಿವ್ ಡೈರೆಕ್ಟರ್ ಕೃಷ್ಣ ವಂಶಿ ಹೇಳಿದ್ದಾರೆ

ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಆಗಾಗ್ಗೆ ಅಭಿಮಾನಿಗಳು ಮತ್ತು ನೆಟಿಜನ್‌ಗಳೊಂದಿಗೆ ಸಂವಾದ ನಡೆಸುವ ಕೃಷ್ಣ ವಂಶಿ ನೆಟಿಜನ್‌ಗಳ ಪ್ರಶ್ನೆಗಳಿಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸುತ್ತಾರೆ. ಇತ್ತೀಚೆಗೆ ಪವನ್ ಕಲ್ಯಾಣ್ ಬಗ್ಗೆ ನೆಟ್ಟಿಗರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಪವನ್ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.

''ಕೃಷ್ಣವಂಶಿಗಳೇ, ನಿಮ್ಮ ಸಿನಿಮಾಗಳ ಬಗ್ಗೆ ನಮಗೆ ಅಪಾರ ಗೌರವವಿದೆ. ಪ್ರಸ್ತುತ ಆಂಧ್ರಪ್ರದೇಶದಲ್ಲಿ ಚರ್ಚೆಯ ವಿಷಯವಾಗಿರುವ ವಿಷಯದ ಬಗ್ಗೆ ಅನುಭವಿ ನಿರ್ದೇಶಕರಾಗಿ ನಿಮ್ಮ ಅಭಿಪ್ರಾಯವನ್ನು ನಾವು ತಿಳಿಯಲು ಬಯಸುತ್ತೇವೆ, ”ಎಂದು ನೆಟ್ಟಿಗರು ಕೇಳಿದ್ದಾರೆ. ಆಗ ಎಕ್ಸ್‌ನಲ್ಲಿ ನೆಟಿಜನ್‌ಗೆ ಉತ್ತರಿಸಿದ ಅವರು, ''ನಮ್ಮ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಬಗ್ಗೆ ನನಗೆ ಅಪಾರ ಪ್ರೀತಿ ಮತ್ತು ಗೌರವವಿದೆ ಎಂದಿದ್ದಾರೆ.

ಮುಂದುವರಿದ ಅವರು, ಒಬ್ಬ ವ್ಯಕ್ತಿ ಭ್ರಷ್ಟ ರಾಜಕಾರಣದಲ್ಲಿ ಮೌಲ್ಯಗಳು ಮತ್ತು ನಂಬಿಕೆಗಳನ್ನು ಹುಟ್ಟುಹಾಕಲು ಹೆಣಗಾಡುತ್ತಿದ್ದಾನೆ. ದೇವರು ಯಾವಾಗಲೂ ಅವರೊಂದಿಗೆ ಇರಲು ಬಯಸುತ್ತಾನೆ. ಸತ್ಯ ಯಾವಾಗಲೂ ಸತ್ಯವೇ ಆಗಿರುತ್ತದೆ. ಅದನ್ನು ಸಾಬೀತುಪಡಿಸಲು ಯಾರ ಒಪ್ಪಿಗೆಯೂ ಬೇಕಾಗಿಲ್ಲ. ಪವನ್ ಕಲ್ಯಾಣ್ ನಿಜ ಜೀವನದ ಹೀರೋ. ಇದು ಮತ್ತೊಮ್ಮೆ ಸಾಬೀತಾಗಿದೆ. ಅವರಂತಹ ರಾಜಕಾರಣಿಗಳು ಹೆಚ್ಚು ಬರಬೇಕು. ಯೋಗಿ ಆದಿತ್ಯನಾಥ್ ನಂತರ, ಪವನ್ ಅಂತಹ ಮೌಲ್ಯಗಳು ಮತ್ತು ಬುದ್ಧಿವಂತಿಕೆ ಹೊಂದಿರುವ ವಿಶೇಷ ರಾಜಕಾರಣಿ. ದೇವರು ಸದಾ ಜೊತೆಗಿದ್ದಾನೆ' ಎಂದು ಉತ್ತರಿಸಿದ್ದಾರೆ.

ಲಡ್ಡು ಕಲಬೆರಕೆ ಪ್ರಕರಣ: DCM Pawan Kalyan)

ತಿರುಮಲ ಲಡ್ಡು ಕಲಬೆರಕೆ ಪ್ರಕರಣ ಆಂಧ್ರದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವುದು ಗೊತ್ತೇ ಇದೆ. ಈ ವಿವಾದದ ಬಗ್ಗೆ ಪವನ್ ಕಲ್ಯಾಣ್ ಪ್ರತಿಕ್ರಿಯಿಸಿ, ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸನಾತನ ಧರ್ಮದ ಬಗ್ಗೆ ಇಷ್ಟ ಬಂದಂತೆ ಮಾತನಾಡಿದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದ್ದರು. ಇದನ್ನೇ ನೆಟ್ಟಿಗರು ಕೃಷ್ಣ ವಂಶಿ ಅಭಿಪ್ರಾಯ ಕೇಳಿದ್ದರು.