ನ್ಯೂಸ್

ಅಧಿಕಾರ ದುರ್ಬಳಕೆ ಆರೋಪ: ಕೊಪ್ಪಳ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸೇವೆಯಿಂದಲೇ ವಜಾ

ಕೊಪ್ಪಳ: ಅಧಿಕಾರ ದುರ್ಬಳಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ಅಗ್ನಿಶಾಮಕ ಅಧಿಕಾರಿಯನ್ನು ಸೇವೆಯಿಂದಲೇ ವಜಾಗೊಳಿಸಲಾಗಿದೆ.

ಕೆ.ಎಂ. ಸಿದ್ದೇಶ್ವರ ವಜಾಗೊಂಡ ಅಧಿಕಾರಿ. ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡುವ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಸೇವೆಯಿಂದ ವಜಾಗೊಳಿಸಿ ರಾಜ್ಯ ಅಗ್ನಿಶಾಮಕದಳದ ಡಿಜಿಯಿಂದ ಆದೇಶ ಹೊರಡಿಸಲಾಗಿದೆ.

ಅಧಿಕಾರ ವ್ಯಾಪ್ತಿ ಮೀರಿ Fire ನೀರಪೇಕ್ಷಣಾ ಪತ್ರ ನೀಡುವುದು, ಹೊಸ ಕಟ್ಟಡಳು ಹಾಗೂ ಆಸ್ಪತ್ರೆಗಳಿಗೆ ಎನ್​ಒಸಿ ನೀಡುವುದು, ಸಾರ್ವಜನಿಕರಿಂದ ಅತಿಯಾದ ಲಂಚಕ್ಕೆ ಬೇಡಿಕೆ ಇಡುವುದು, ನೀರಪೇಕ್ಷಣಾ ಪ್ರಮಾಣ ಪತ್ರ ನೀಡಿ ಸರ್ಕಾರದ ಬೊಕ್ಕಸಕ್ಕೆ ಹಣ ಜಮಾ ಮಾಡದೆ ನಷ್ಟ ಉಂಟು ಮಾಡಿರುವ ಆರೋಪ ಕೆ.ಎಂ. ಸಿದ್ದೇಶ್ವರ ಅವರ ಮೇಲಿದೆ.

ಮೇಲ್ನೋಟಕ್ಕೆ ತನಿಖೆಯಲ್ಲಿ ಆರೋಪಗಳು ಸಾಬೀತಾದ ಹಿನ್ನಲೆಯಲ್ಲಿ ಅಧಿಕಾರಿ ಕೆ.ಎಂ. ಸಿದ್ದೇಶ್ವರ ಅವರನ್ನು ಸೇವೆಯಿಂದಲೇ ವಜಾ ಮಾಡಿದ ಇಲಾಖೆ ಆದೇಶಿಸಿದೆ.