ನ್ಯೂಸ್

VIDEO| ದೇಶದಲ್ಲೇ ಮೊದಲ ಅಂಡರ್​ ವಾಟರ್​ ಮೆಟ್ರೋ ಸಂಚಾರ

ಕೊಲ್ಕತ: ದೇಶದ ಇತಿಹಾಸದಲ್ಲೇ ಪ್ರಪಥಮ ಬಾರಿಗೆ ಹೌರ ನದಿಯ ಒಳಗಿನ ಸುರಂಗದ ಮೂಲಕ ಮೆಟ್ರೋ ಟ್ರೈನ್​ ಸಾಗುವ ಮೂಲಕ ಹೊಸ ಇತಿಹಾಸವನ್ನು ನಿರ್ಮಿಸಿದೆ ಎಂದು ಕೊಲ್ಕತ ಮೆಟ್ರೋ(MTP)ಯ ಹಿರಿಯ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.

ಹೂಗ್ಲಿ ಇಂದ ಕೊಲ್ಕತವರೆಗೆ ನಡೆದ ಪರೀಕ್ಷಾರ್ಥ ಸಂಚಾರದಲ್ಲಿ ಅಧಿಕಾರಿಗಳು, ಇಂಜಿನಿಯರ್​ಗಳು ಹಾಗೂ ಸಂಸ್ಥೆಯ ಕೆಲವರು ಇದ್ದರು ಎಂದು ತಿಳಿದು ಬಂದಿದೆ.

ಐತಿಹಾಸಿಕ ನಡೆ

ಕೊಲ್ಕತ ಮತ್ತು ಆಸು ಪಾಸು ನಗರದ ಜನತೆಗೆ ಈ ರೀತಿಯ ಸೇವೆ ಒದಗಿಸುತ್ತಿರುವುದು ಐತಿಹಾಸಿಕ ನಡೆ ಎಂಧು ಅಧಿಕಾರಿಗಳು ಬಣ್ಣಿಸಿದ್ದು ಶೀಘ್ರವೇ ಸಾರ್ವಜನಿಕರ ಸೇವೆಗೆ ಮುಕ್ತವಾಗಿಸುವುದಾಗಿ ತಿಳಿಸಿದ್ದಾರೆ.

ಮೆಟ್ರೋ ರೈಲ್ವೆ ಜನರಲ್​ ಮ್ಯಾನೇಜರ್ ಉದಯ್​ ಕುಮಾರ್​ ರೆಡ್ಡಿ ಸೇರಿದಂತೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಕೊಲ್ಕತಾದ ಮಹಾಕರಣ್ ನಿಲ್ದಾಣದಿಂದ ಹೌರಾ ಮೈದಾನ್​ ವರೆಗೆ ಪರೀಕ್ಷಾರ್ಥ ಸಂಚಾರ ನಡೆಸಿದ್ದರು.