More

    ಬಿಜೆಪಿಯ ಮತ್ತೊಂದು ವಿಕೆಟ್​ ಪತನ; ಪಕ್ಷ ತೊರೆದ ಗೂಳಿಹಟ್ಟಿ ಶೇಖರ್​

    ಚಿತ್ರದುರ್ಗ: ಮಂಗಳವಾರ ಬಿಡುಗಡೆಯಾದ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ತಮಗೆ ಹೊಸದುರ್ಗ ವಿಧಾನಸಭಾ ಕ್ಷೇತ್ರದ ಟಿಕೆಟ್​ ಕೈ ತಪ್ಪಿದರಿಂದ ಅಸಮಾಧಾನಗೊಂಡಿರುವ ಶಾಸಕ ಗೂಳಿಹಟ್ಟಿ ಶೇಖರ್​ ಪಕ್ಷ ತೊರೆಯುವುದಾಗಿ ಘೋಷಿಸಿದ್ಧಾರೆ.

    ಬುಧವಾರ ತಮ್ಮ ಆಪ್ತರು ಹಾಗೂ ಬೆಂಬಲಿಗರ ಜೊತೆ ಸಭೆ ನಡೆಸಿದ ಬಳಿಕ ಅವರು ತೀರ್ಮಾನವನ್ನು ಪ್ರಕಟಿಸಿದ್ದು ಬಂಡಾಯ ಅಥವಾ ಜನಾರ್ದನ ರೆಡ್ಡಿ ನೇತೃತ್ವದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ.

    ಮೊದಲೇ ತಿಳಿದಿತ್ತು

    ಬೆಂಬಲಿಗರ ಸಭೆಯನ್ನು ಉದ್ದೇಶಿಸಿ ಮಾತನಾಡುವ ವೇಳೆ ಗೂಳಿಹಟ್ಟಿ ಶೇಖರ್​ ತಮ್ಮಗೆ ಟಿಕೆಟ್​ ಕೈ ತಪ್ಪುವ ಬಗ್ಗೆ ಮೊದಲೇ ತಿಳಿದಿತ್ತು. ಆದರೆ, ನಾನು ಛಲ ಬಿಡದೆ ರಾಜ್ಯ ಹಾಗೂ ರಾಷ್ಟ್ರ ನಾಯಕರ ಮನವೊಲಿಸಿದೆ. ಟಿಕೆಟ್​ ಕೈ ತಪ್ಪಿದ್ದರಿಂದ ಸಹಜವಾಗಿ ನೋವಾಗಿದೆ ಎಂದು ಬೇಸರ ಹೊರಹಾಕಿದ್ದಾರೆ.

    ನನ್ನಗೆ ಟಿಕೆಟ್​ ತಪ್ಪಲು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್​.ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ.ವಿಜಯೇಂದ್ರ ನೇರ ಕಾರಣ ಎಂದು ಆರೋಪಿಸಿದ್ದಾರೆ.

    Goolihatti Shekar

    ಇದನ್ನೂ ಓದಿ: ಬಿಜೆಪಿಗೆ ಚುನಾವಣೆ ಎದುರಿಸುವ ತಾಕತ್ತಿಲ್ಲ: ಡಿ.ಕೆ.ಶಿವಕುಮಾರ್

    ನನ್ನ ಸ್ಪರ್ಧೆ ಖಚಿತ

    ನನಗೆ ಟಿಕೆಟ್​ ಕೈತಪ್ಪಿರುವುದರಿಂದ ನಾನು ಸ್ಪರ್ಧಿಸುವುದಿಲ್ಲ ಎಂದು ಕ್ಷೇತ್ರದಲ್ಲಿ ಊಹಾಪೋಹ ಎದ್ದಿದೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂಬ ಸ್ಪಷ್ಟ ಸಂದೇಶವನ್ನು ಕ್ಷೇತ್ರದ ಜನತೆಗೆ ತಲುಪಿಸಿದ್ದೇನೆ. ಪಕ್ಷೇತರನಾಗಿ ಇಲ್ಲ ಜರ್ನಾದನ ರೆಡ್ಡಿ ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸ್ಪರ್ಧಿಸುತ್ತೇನೆ ಎಂದು ಘೋಷಿಸಿದ್ದಾರೆ.

    ಬಿಜೆಪಿಗೆ ಕೃತಜ್ಞ

    ಪರಿಶಿಷ್ಟ ಜಾತಿಗೆ ಸೇರಿದವನಾದ ನಾನು ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟ ಬಿಜೆಪಿಗೆ ಕೃತಜ್ಞನಾಗಿದ್ಧೇನೆ. ಪ್ರತಿ ಭಾರಿ ನನಗೆ ಅವಕಾಶ ನೀಡಿ ಎಂದು ಒತ್ತಡ ಹೇರುವುದು ತಪ್ಪಾಗುತ್ತದೆ.

    ಬಿಜೆಪಿ ಹೈಕಮಾಂಡ್​ ತೆಗೆದುಕೊಂಡಿರುವ ನಿರ್ಧಾರವನ್ನು ನಾನು ಸ್ವೀಕರಿಸುತ್ತೇನೆ. ನೀರಾವರಿ ಯೋಜನೆಗಳ ಟೆಂಡರ್​ನಲ್ಲಿ ಅವ್ಯವಹಾರ ಆಗಿರುವ ಬಗ್ಗೆ ಮಾತನಾಡಿದ್ದಕ್ಕೆ ಟಿಕೆಟ್​ ಕೈ ತಪ್ಪಿದೆ ಎಂದರೆ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ಧಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts