ನ್ಯೂಸ್

ಕೋಲ್ಕತ್ತ ಅತ್ಯಂತ ಕೊಳಕು ನಗರ! ಹೊಸ ಚರ್ಚೆ ಹುಟ್ಟು ಹಾಕಿತು ಈ ಪೋಸ್ಟ್​? Kolkata City

ಕೋಲ್ಕತ್ತ: ಭಾರತದ ನಗರಗಳ ಪೈಕಿ ಕೋಲ್ಕತ್ತ ( Kolkata City ) ಅತ್ಯಂತ ''ಕೊಳಕು ನಗರ'' ಎಂದು ಎಕ್ಸ್​ ಬಳಕೆದಾರರೊಬ್ಬರು ಕೆಲ ಫೋಟೊಗಳನ್ನು ಹಂಚಿಕೊಂಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ.

ಹೌದು, ವೃತ್ತಿಯಲ್ಲಿ ಡಿಸೈನರ್​ ಆಗಿರುವ ಬಾಲಾಜಿ ಎಂಬುವವರು ಇತ್ತೀಚಿಗೆ ಪಶ್ಚಿಮ ಬಂಗಾಳದ ವಿವಿಧ ನಗರಗಳಿಗೆ ಭೇಟಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಪ್ರಮುಖವಾಗಿ ಕೋಲ್ಕತ್ತ ನಗರವನ್ನು ಉಲ್ಲೇಖಿಸಿದ್ದಾರೆ. ಇಲ್ಲಿನ ವಿವಿಧ ಪ್ರದೇಶಗಳ ಚಿತ್ರಗಳನ್ನು ಕ್ಲಿಕ್ಕಿಸಿ ತಮ್ಮ ಎಕ್​ ಖಾತೆಯಲ್ಲಿ ಪೋಸ್ಟ್​ ಮಾಡುವ ಮೂಲಕ, ಕೋಲ್ಕತ್ತ ನಮ್ಮ ದೇಶದ ಅತ್ಯಂತ ಕೊಳಕು, ನೈರ್ಮಲ್ಯ ಹೊಂದಿದ ನಗರ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಬಾಲಾಜಿ ಹಂಚಿಕೊಂಡಿರು ಪೋಸ್ಟ್​ನಲ್ಲಿ ''ಕಸದಿಂದ ತುಂಬಿರುವ ರಸ್ತೆಗಳು, ನೈರ್ಮಲ್ಯದಿಂದ ಕೂಡಿರುವ ದೊಡ್ಡ ಚರಂಡಿಗಳು, ಗಟಾರ ಮೇಲ್ಭಾದಲ್ಲಿರುವ ಅಂಗಡಿಗಳಲ್ಲಿ ಸ್ಥಳೀಯರು ಊಟ ಮಾಡುತ್ತಿರುವುದು ದೃಶ್ಯಗಳು ಕಾಣಸಿಗುತ್ತವೆ. ಇನ್ನು ಕೆಲ ವಿಡಿಯೋಗಳನ್ನು ಹಂಚಿಕೊಂಡಿದ್ದು, ಇಲ್ಲಿ ಅಗಾಧವಾದ ಮೂತ್ರ ವಾಸನೆ ಬರುತ್ತಿದೆ. ಸರಿಯಾಗಿ ಉಸಿರಾಡು ಆಗುತ್ತಿಲ್ಲ, ಇದು ಹಸಿವಿನಿಂದ ಬಳಲುತ್ತಿರುವ ಯಾವುದೋ ಆಫ್ರಿಕಾವಲ್ಲ, ಇದು ನಮ್ಮ ದೇಶದ ಕಲ್ಕತ್ತಾ ನಗರ. ನಾನು ದೇಶದ್ಯಾಂತ ಓಡಾಡಿದ್ದೇನೆ. ಇಂತಹ ಕೆಟ್ಟದಾದ ವ್ಯವಸ್ಥೆ ಬೇರೆಲ್ಲೂ ನೋಡಿಲ್ಲ. ಇಲ್ಲಿ ತೀರಾ ಕಳಪೆ ಮಟ್ಟದ ಮೂಲ ಸೌಕರ್ಯ ಹೊಂದಿದೆ. ಇದನ್ನು ನೋಡಲು ನನಗೆ ಬಹಳಷ್ಟು ದುಃಖಕರವಾಗಿದೆ'' ಎಂದು ಹೇಳಿಕೊಂಡಿದ್ದಾರೆ.

ಟ್ಯಾಕ್ಸಿ ಚಾಲಕರದ್ದೇ ಪ್ರಭಾವ

''ಇಲ್ಲಿ ಟ್ಯಾಕ್ಸಿ ಚಾಲಕರದ್ದೇ ಪ್ರಭಾವ ಇದೆ. ಒಲಾ, ಉಬರ್​, ರ್ಯಾಪಿಡ್​ ಬುಕ್​ ಮಾಡಲು ಸಾಧ್ಯವಿಲ್ಲ. ಏಕೆಂದರೆ ಇವರ ಮೇಲೂ ಚಾಲಕರು ಪ್ರಭಾವ ಬೀರಿದ್ದಾರೆ. ಬೇಕಂತಲೇ ತುಂಬಾ ಹಾರ್ನ(ಸೌಂಡ್) ಮಾಡುತ್ತಾರೆ. ಇದರಿಂದ ಎಲ್ಲರಿಗೂ ತಲೆನೋವು ಬರುತ್ತಿದೆ. ಪ್ರವಾಸಿಗರು ಬಂದರೆ ಹಣ ದೊಚಲು ಪ್ರಯತ್ನಿಸುತ್ತಾರೆ. ಅಲ್ಲದೇ, 50, 100 ಮೀಟರ್​ ಡ್ರಾಪ್​ಗೆ ದುಪಟ್ಟು ಹಣ ಕೇಳುತ್ತಾರೆ. ಇಲ್ಲವಾದರೆ ಬೆದರಿಸುತ್ತಾರೆ'' ಎಂದು ತಮ್ಮ ಅಹಿತಕರ ಘಟನೆಗಳನ್ನು ವಿವರಿಸಿದ್ದಾರೆ.

ಇವರ ಪೋಸ್ಟ್​ಗೆ ಪ್ರತಿಕ್ರಿಯೆ ನೀಡಿರುವ ಕೆಲವರು, ''ನಿಮ್ಮ ಅನುಭವಕ್ಕಾಗಿ ಕ್ಷಮಿಸಿ, ಕೋಲ್ಕತ್ತದ ಹಳೆಯ ನಗರಗಳಿಗೆ ನೀವು ಭೇಟಿ ನೀಡಿದ್ದೀರಿ, ಅದು ಸಲ್ಪ ಕೊಳಕು, ಇದನ್ನು ನಾವು ಒಪ್ಪುತ್ತೇವೆ. ಸಾಧ್ಯವಾದರೆ ಹೊಸ ನಗರ, ಬಡವಾಣೆಗಳಿಗೆ ಒಮ್ಮೆ ಭೇಟಿ ನೀಡಲು ಪ್ರಯತ್ನಿಸಿ'' ಎಂದಿದ್ದಾರೆ.

ನಾನು ಹುಟ್ಟಿದ್ದು, ಬೆಳದಿದ್ದು, ಕಲ್ಕತ್ತಾದಲ್ಲಿ ನನ್ನ ನಗರದ ಮೇಲಿ ಪ್ರೀತಿಯನ್ನು ನೀವು ಸಾಬೀತುಪಡಿಸುವ ಅಗತ್ಯ ಇಲ್ಲ. ಆದರೆ, ಸತ್ಯವನ್ನು ಒಪ್ಪಿಕೊಳ್ಳಬೇಕು ಎಂದು ಮತ್ತೊಬ್ಬರು ಕಾಮೆಂಟ್​ ಹಾಕಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್​ ಕೋಲ್ಕತ್ತ ನಗರದ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ(ಏಜೆನ್ಸೀಸ್​).