Mumbai: ರಿಕೋದ್ಯಮಿಗಳಾದ ಮೂಖೇಶ್ ಹಾಗೂ ಅನಿಲ್ ಅಂಬಾನಿ ಅವರ ತಾಯಿ ಕೋಕಿಲಾಬೆನ್ ಅಂಬಾನಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ವಿಮಾನದ ಮೂಲಕ ಮುಂಬೈನ ಎಚ್ಎನ್ ರಿಲಯನ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ವರದಿ ಬಂದಿದೆ. ಕೋಕಿಲಾಬೆನ್ (91) ರಿಲಯನ್ಸ್ ಸಂಸ್ಥಾಪಕ ದಿವಂಗತ ಧೀರೂಭಾಯಿ ಅಂಬಾನಿ ಅವರ ಹೆಂಡತಿ.
ಇದನ್ನೂ ಓದಿ: ಕೇವಲ 45 ಎಸೆತದಲ್ಲಿ ಶತಕ: ಮೈದಾನದಲ್ಲಿ ಅಬ್ಬರಿಸಿ ಬೊಬ್ಬರಿದ ರಿಂಕು, ಸಿಕ್ಸರ್-ಬೌಂಡರಿಗಳ ಸುರಿಮಳೆ! Rinku Singh
ಇನ್ನು ವಿಡಿಯೋದಲ್ಲಿ ಕುಟುಂಬದವರು ಅವರನ್ನು ರಿಲಯನ್ಸ್ ಆಸ್ಪತ್ರೆಗೆ ಕೊರೆದೊಯ್ಯುವ ದೃಶ್ಯವನ್ನು ಆನ್ಲೈನ್ನಲ್ಲಿ ಪ್ರಸಾರವಾಗುತ್ತಿದ್ದು, ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತವಾಗಿದೆ. ಈ ಬಗ್ಗೆ ವೈದ್ಯಕೀಯ ಸ್ಥಿತಿಯ ನಿಖರವಾದ ಮಾಹಿತಿ ಬಹಿರಂಗವಾಗದಿದ್ದರೂ, ಅವರ ವೃದ್ಯಾಪವು ಪರಿಸ್ಥಿತಿಯ ಗಂಭೀರತೆಯನ್ನು ಹೆಚ್ಚಿಸುತ್ತಿದೆ.
ಇಲ್ಲಿಯವರೆಗೂ ಕುಟುಂಬಸ್ಥರು ಕೋಕಿಲಾಬೆನ್ ಅಂಬಾನಿ ಅವರ ಆರೋಗ್ಯದ ಸ್ಥಿತಿಯ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ. (ಏಜೆನ್ಸೀಸ್)