ನ್ಯೂಸ್

ಜನ ಹುಚ್ಚರಾಗಬಹುದು, ದಾರಿಯಲ್ಲೇ ಬಿದ್ದು ಸಾಯಬಹುದು... ಎಂದು ಭವಿಷ್ಯ ನುಡಿಯುತ್ತಲೇ ಪರಿಹಾರ ತಿಳಿಸಿದ ಕೋಡಿಶ್ರೀ

arunakunigal

ಹಾಸನ: ಕಾರ್ತಿಕದಿಂದ ಜನವರಿವರೆಗೂ ಮೂರು ತಿಂಗಳ ಕಾಲ ಕಂಟಕ ಎದುರಾಗಲಿದೆ ಎಂದು ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಶನಿವಾರ ಭವಿಷ್ಯ ನುಡಿದ ಕೋಡಿ ಮಠದ ಶ್ರೀಗಳು, ಕಾರ್ತಿಕ ಮಾರ್ಗಶಿರ ಮಧ್ಯ ಭಾಗದಿಂದ ಜನವರಿ 23ರ ವರೆಗೂ ಕಂಠಕ ಎದುರಾಗಲಿದೆ. ರಾಜಭೀತಿ, ಭೂ ಕಂಟಕ‌, ಪ್ರದೇಶ, ಪ್ರಾಕೃತಿಕ ಕಂಟಕ, ಬಾಂಬ್, ಯುದ್ಧಭೀತಿ, ಭೂ ಕಂಪನ ಆಗಬಹುದು ಎಂದರು.

ಜನರು ನಿಯಂತ್ರಣ ಕಳೆದುಕೊಂಡು ಹುಚ್ಚರಾಗಬಹುದು, ದಾರಿ ಒಳಗೆ ಬಿದ್ದು ಸಾಯಬಹುದು, ದೇಹ ಶಕ್ತತೆ ಕಳೆದುಕೊಳ್ಳುವಂತ ವಿಚಾರ ಇದೆ... ಜಾಗತಿಕ ದೋಷ, ರಾಷ್ಟ್ರ ದೋಷವೂ ಇದೆ... ಹಾಗಾಗಿ ಎರಡ್ಮೂರು ತಿಂಗಳ ಕಾಲ ದೈವಾರಾಧನೆಯಲ್ಲಿ ಇರುವುದು ಮುಖ್ಯ ಎಂದು ಕೋಡಿಶ್ರೀಗಳು ತಿಳಿಸಿದರು. ಕಾರ್ತಿಕದರೆಗೂ ಮಳೆ ಇರಲಿದೆ ಎಂದರು.