ಕೊಡಗು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಸಚಿವ ಟಿ.ಜಾನ್ ಅವರು ಬೆಂಗಳೂರಿನಲ್ಲಿಂದ ಕೊನೆಯುಸಿರೆಳೆದರು. ಜಾನ್ ಅವರಿಗೆ 92 ವರ್ಷ ವಯಸ್ಸಾಗಿತ್ತು.
ಜಾನ್ ಅವರು ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ಸಚಿವರಾಗಿದ್ದರು. ಮೂಲಸೌಕರ್ಯ ಮತ್ತು ನಾಗರಿಕ ವಿಮಾನಯಾನದ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಸಾಮಾಜಿಕ ಸೇವೆಗಳಲ್ಲೂ ಗುರುತಿಸಿಕೊಂಡಿದ್ದರು.
ಕೇರಳದಿಂದ ಕೊಡಗು ಜಿಲ್ಲೆಗೆ ಆಗಮಿಸಿ ಉತ್ತಮ ಹೆಸರು ಮಾಡಿದ್ದರು. ಅಬಕಾರಿ ಉದ್ಯಮ, ಶಿಕ್ಷಣ ಸಂಸ್ಥೆ, ರೆಸಾರ್ಟ್ಗಳನ್ನು ಆರಂಭಿಸುವ ಮೂಲಕ ಉದ್ಯಮಿಯು ಆಗಿದ್ದರು.
ಜಾನ್ ಅವರ ಅಂತ್ಯಕ್ರಿಯೆ ನಾಳೆ ಬೆಂಗಳೂರಿನಲ್ಲಿ ನೆರವೇರಲಿದೆ. (ದಿಗ್ವಿಜಯ ನ್ಯೂಸ್)