ನ್ಯೂಸ್

ತನ್ನ ಹುಟ್ಟುಹಬ್ಬದಂದೇ ಮಗಳ ಹೆಸರು ಬಹಿರಂಗಪಡಿಸಿದ ಕೆಎಲ್ ರಾಹುಲ್; 'ಇವಾರಾ' ಹೆಸರಿನ ಅರ್ಥವೇನು ಗೊತ್ತಾ? KL Rahul

KL Rahul | ಕರ್ನಾಟಕದ ಕ್ರಿಕೆಟಿಗ ಕೆ. ಎಲ್​​. ರಾಹುಲ್​​ ತನ್ನ 33ನೇ ಹುಟ್ಟುಹಬ್ಬವನ್ನು ಶುಕ್ರವಾರ ಆಚರಿಸಿಕೊಂಡಿದ್ದಾರೆ. ತನ್ನ ಬರ್ತ್​ಡೇ ದಿನವೇ ಸ್ಟಾರ್ ಕ್ರಿಕೆಟಿಗ ಮತ್ತು ಅವರ ಪತ್ನಿ ಅತಿಯಾ ಶೆಟ್ಟಿ ತಮ್ಮ ಮಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ. ಅವರು ತಮ್ಮ ಮಗಳಿಗೆ 'ಇವಾರಾ' ಎಂದು ಹೆಸರಿಟ್ಟಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಕೆ.ಎಲ್. ರಾಹುಲ್ ತಮ್ಮ ಮಗಳನ್ನು ಎತ್ತಿಕೊಂಡು, ಪಕ್ಕದಲ್ಲೇ ಪತ್ನಿ ಅತಿಯಾ ಶೆಟ್ಟಿ ನಿಂತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರ ಜೊತೆಗೆ 'ಇವಾರಾ' ಎಂದರೆ 'ದೇವರ ಉಡುಗೊರೆ' ಎಂದು ಬರೆದು ಪೋಸ್ಟ್​​ ಮಾಡಿದ್ದಾರೆ.

ಈ ಫೋಟೋ ಎಲ್ಲರ ಹೃದಯವನ್ನು ಮುಟ್ಟುವಂತಿದ್ದು, ಕೆ.ಎಲ್. ರಾಹುಲ್ ತನ್ನ ಹೆಣ್ಣು ಮಗುವನ್ನು ಎತ್ತಿಕೊಂಡಿದ್ದಾರೆ ಜೊತೆಗೆ ಅತಿಯಾ ಅದರ ಮೇಲೆ ಒರಗಿಕೊಂಡಿದ್ದಾಳೆ. ಈ ಫೋಟೋಗೆ "ನಮ್ಮ ಹೆಣ್ಣು ಮಗು, ನಮ್ಮ ಎಲ್ಲವೂ. ಇವಾರಾ -ದೇವರ ಉಡುಗೊರೆ" ಎಂದು ಕ್ಯಾಪ್ಶನ್​​​ ನೀಡಿದ್ದಾರೆ.

ಈ ಫೋಟೋಗೆ ಎಲ್ಲರೂ ಮೆಚ್ಚುಗೆಯ ಸುರಿಮಳೆ ಸುರಿಸಿದ್ದಾರೆ. ಅನುಷ್ಕಾ ಶರ್ಮಾ ಸೇರಿದಂತೆ ಅನೇಕರು ಅವರಿಗೆ ಅಭಿನಂದಿಸಿದ್ದಾರೆ. ಕಾಮೆಂಟ್‌ಗಳ ವಿಭಾಗದಲ್ಲಿ ಎಮೋಜಿಗಳಿಂದ ನೆಟ್ಟಿಗರು ಶುಭಹಾರೈಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಅತಿಯಾ ಶೆಟ್ಟಿ ತಮ್ಮ ಮಗಳ ಹೆಸರನ್ನು ಇವಾರಾ ವಿಪುಲಾ ರಾಹುಲ್ ಎಂದು ಬರೆದುಕೊಂಡಿದ್ದಾರೆ.