ನ್ಯೂಸ್

ಕಿಮ್ಸ್ ಆಸ್ಪತ್ರೆ ಎಡವಟ್ಟು; ಬೆಡ್ ಕೊಡದೆ ನೆಲದ ಮೇಲೆಯೇ ವೃದ್ಧೆಗೆ ಚಿಕಿತ್ಸೆ

ಹುಬ್ಬಳ್ಳಿ: ವಯೋವೃದ್ಧೆಗೆ ಬೆಡ್ ಕೊಡದೇ ನೆಲದ ಮೇಲೆಯೇ ಕೂರಿಸಿ ಚಿಕಿತ್ಸೆ ನೀಡಿದ ಆರೋಪವನ್ನು ಹುಬ್ಬಳ್ಳಿಯ ಕಿಮ್ಸ್ ವೈದ್ಯರು ಎದುರಿಸುತ್ತಿದ್ದಾರೆ.

ಅನಾರೋಗ್ಯ ಹಿನ್ನೆಲೆಯಲ್ಲಿ ನಗರದ ಚನ್ನವ್ವ (67) ಚಿಕಿತ್ಸೆಗೆಂದು ಆಸ್ಪತ್ರೆಗೆ ಆಗಮಿಸಿದ್ದರು. ಅವರಿಗೆ ಬೆಡ್ ಕೊಡದೇ ನೆಲದ ಮೇಲೆ ಕೂರಿಸಿ ಚಿಕಿತ್ಸೆಯನ್ನು ನೀಡಿದ್ದಾರೆ ಎನ್ನವ ಆರೋಪ ಕಿಮ್ಸ್​ ವಿರುದ್ಧ ಕೇಳಿಬಂದಿದೆ. ಇದನ್ನೂ ಓದಿ: ರೂಪಾ ಮೌದ್ಗಿಲ್ ಕರೆ ಮಾಡಿ 25 ನಿಮಿಷ ಮಾತಾಡಿದ್ರು: ಆರ್​​ಟಿಐ ಕಾರ್ಯಕರ್ತ ಗಂಗರಾಜು ಸ್ಫೋಟಕ ಹೇಳಿಕೆ

ಗ್ಲೂಕೋಸ್ ಬಾಟಲ್ ಹಾಕಲು ಸ್ಟ್ಯಾಂಡ್​​ ಕೂಡ ನೀಡಿಲ್ಲ. ಅಲ್ಲಿಯೇ ವೈದ್ಯಕೀಯ ಸಿಬ್ಬಂದಿ ಓಡಾಡುತ್ತಿದ್ದರೂ ನರಳಾಡುತ್ತಿದ್ದ ವೃದ್ಧೆಯತ್ತ ಯಾರೂ ಗಮನಹರಿಸಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.