ನ್ಯೂಸ್

ಬಿಗ್‌ ಬಾಸ್ ಸೀಸನ್-12ರ ನಿರೂಪಣೆಗೆ ಒಪ್ಪಿಕೊಂಡ ಕಿಚ್ಚ ಸುದೀಪ್| bigg boss

bigg boss | ಬಿಗ್​ಬಾಸ್ ಕನ್ನಡ ಸೀಸನ್-12 ಕಾರ್ಯಕ್ರಮವನ್ನು ಯಾರು ನಿರೂಪಣೆ ಮಾಡಲಿದ್ದಾರೆ ಎಂಬ ಪ್ರಶ್ನೆಗೆ ಇಂದು (30) ಉತ್ತರ ಸಿಕ್ಕಿದೆ. ಈ ಬಾರಿಯೂ ಸಹ ಅಭಿಮಾನಿಗಳ ಆಸೆಯಂತೆ ನಟ ಕಿಚ್ಚ ಸುದೀಪ್ ಅವರೇ ಬಿಗ್​ಬಾಸ್​ ಕಾರ್ಯಕ್ರಮದ ನಿರೂಪಣೆ ಮಾಡಲು ಒಪ್ಪಿಕೊಂಡಿದ್ದಾರೆ.

ಬಿಗ್‌ಬಾಸ್ ರಿಯಾಲಿಟಿ ಶೋ ಬಗ್ಗೆ ಮಾಹಿತಿ ನೀಡಲು ಆಯೋಜಕರು ಹಾಗೂ ಕಲರ್ಸ್‌ ಕನ್ನಡ ತಂಡ ಇಂದು ಸುದ್ದಿಗೋಷ್ಠಿ ಏರ್ಪಡಿಸಿತ್ತು. ಈ ಸುದ್ದಿಗೋಷ್ಠಿಯಲ್ಲಿ ನಿರೂಪಕರ ಬಗ್ಗೆ ಅಭಿಮಾನಿಗಳಿಗೆ ಇದ್ದಂತಹ ಎಲ್ಲಾ ಗೊಂದಲಗಳಿಗೆ ಇಂದು ತೆರೆಬಿದ್ದಿದೆ.

ಕನ್ನಡದ ಪ್ರಖ್ಯಾತ ರಿಯಾಲಿಟಿ ಶೋ ಬಿಗ್‌ಬಾಸ್ 11 ಸೀಸನ್‌ಗಳನ್ನ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಈ ಕಾರ್ಯಕ್ರಮಕ್ಕೆ ಕೊನೆಯ ಸೀಸನ್​ ಮುಗಿಯುತ್ತಿದ್ದಂತೆ ನಿರೂಪಕ ಕಿಚ್ಚ ಸುದೀಪ್ ಗುಡ್‌ಬೈ ಹೇಳಿದ್ರು. 11ನೇ ಸೀಸನ್ ನಡೆಯುತ್ತಿರುವಾಗಲೇ ಇದು ನಾನು ನಡೆಸಿಕೊಡುವ ಕೊನೆಯ ಸೀಸನ್ ಎಂದು ಕಿಚ್ಚ ಸುದೀಪ್ ಅನೌನ್ಸ್ ಮಾಡಿದ್ದರು. ಅಂದು ಕಿಚ್ಚನ ಈ ಮಾತು ಬಿಗ್‌ಬಾಸ್ ವೀಕ್ಷಕರಿಗೆ ಶಾಕ್ ನೀಡಿತ್ತು.

ಇನ್ನೂ ಬಿಗ್‌ಬಾಸ್ ಸೀಸನ್ 12 ಶುರುವಾಗೋದಕ್ಕೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ಹೀಗಿರೋವಾಗ ಕಿಚ್ಚ ಸುದೀಪ್ ಅವರ ಮನಸ್ಸನ್ನ ಒಲಿಸುವುದಕ್ಕೆ ಆ ವಾಹಿನಿ ಸತತ ಪ್ರಯತ್ನ ಮಾಡಿದೆ. ಹಾಗಾಗಿ ಈ ಬಾರಿಯ ಬಿಗ್‌ಬಾಸ್ ಶೋ ನಿರೂಪಣೆಯನ್ನ ಸ್ವತಃ ನಾನೇ ಮಾಡಲಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ನಟ ಕಿಚ್ಚ ಸುದೀಪ್​ ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟಿದ್ದಾರೆ.