ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಇಂಡಸ್ಟ್ರಿಯಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಸಿನಿಮಾ ಹಿನ್ನೆಲೆಯಿಂದ ಬಂದ ಸ್ಟಾರ್ ಕುಡಿಗಳನ್ನೇ ಟಾರ್ಗೇಟ್ ಮಾಡಿ ಟ್ರೋಲ್ ಮಾಡಲಾಗುತ್ತಿದೆ. ಸಿನಿಮಾ ಬ್ಯಾನ್ ಮಾಡುವಂತೆಯೂ ಒತ್ತಾಯಿಸಲಾಗುತ್ತಿದೆ. ಹೀಗಿರುವಾಗಲೇ ಇತ್ತೀಚೆಗಷ್ಟೇ ಬಿಡುಗಡೆ ಆಗಿದ್ದ ಆಲಿಯಾ ಭಟ್ ನಟನೆಯ ಸಡಕ್ 2 ಚಿತ್ರದ ಟ್ರೇಲರ್ಗೆ ಮೆಚ್ಚುಗೆಗಿಂತ ಡಿಸ್ಲೈಕ್ ಸುರಿಮಳೆಯನ್ನೇ ಸುರಿಸಿದ್ದರು ನೆಟ್ಟಿಗರು. ಇದೀಗ ಅದೇ ಬಿಸಿ ಖಾಲಿ ಪೀಲಿಗೂ ತಟ್ಟಿದೆ.
ಶಾಹೀದ್ ಕಪೂರ್ ಸಹೋದರ ಇಶಾನ್ ಖಟ್ಟರ್ ಮತ್ತು ಚುಂಕಿ ಪಾಂಡೆ ಪುತ್ರಿ ಅನನ್ಯಾ ಪಾಂಡೆ ಮುಖ್ಯಭೂಮಿಕೆ ನಿಭಾಯಿಸಿರುವ ಖಾಲಿ ಪೀಲಿ ಚಿತ್ರದ ಟೀಸರ್ ನಿನ್ನೆಯಷ್ಟೇ ಬಿಡುಗಡೆಯಾಗಿದೆ. ಇಲ್ಲಿಯವರೆಗೂ 2 ಮಿಲಿಯನ್ಗೂ ಅಧಿಕ ಬಾರಿ ವೀಕ್ಷಣೆಗೊಳಪಟ್ಟ ಈ ಟ್ರೇಲರ್, ಲೈಕ್ಗಿಂತ ಡಿಸ್ಲೈಕ್ಗಳನ್ನೇ ಹೆಚ್ಚು ಪಡೆದುಕೊಂಡು ಸುದ್ದಿಯಲ್ಲಿದೆ.
ಇಲ್ಲಿಯವರೆಗೂ ಈ ಚಿತ್ರದ ಟ್ರೇಲರ್ಗೆ 64 ಸಾವಿರ ಲೈಕ್ಗಳು ಸಂದಾಯವಾದರೆ, 6ಲಕ್ಷಕ್ಕೂ ಅಧಿಕ ಮಂದಿ ಈ ಟೀಸರ್ ಅನ್ನು ಡಿಸ್ಲೈಕ್ ಮಾಡಿದ್ದಾರೆ. ಈ ಮೂಲಕ ಆಲಿಯಾ ಭಟ್ ಬಳಿಕ ಬಾಲಿವುಡ್ನ ಮತ್ತೊಂದು ಸ್ಟಾರ್ ಸಿನಿಮಾ ಕುಟುಂಬದ ಕುಡಿ ಇಶಾನ್ಗೆ ನೆಪೋಟಿಸಂ ಬಿಸಿ ತಟ್ಟಿದೆ.
ಇದನ್ನೂ ಓದಿ: VIRAL VIDEO: 16 ವರ್ಷದ ಹುಡುಗಿ ಜತೆ ಮಹೇಶ್ ಭಟ್ ಮಾಡ್ತಿರೋದೇನು?; ಆಲಿಯಾ ತಂದೆ ವಿರುದ್ಧ ಟೀಕೆಯ ಸುರಿಮಳೆ
ಮಖ್ಬುಲ್ ಖಾನ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಹಿಮಾನ್ಶು ಕಿಶನ್ ಮೆಹ್ರಾ ಮತ್ತು ಅಲಿ ಅಬ್ಬಾಸ್ ಜಫರ್ ಬಂಡವಾಳ ಹೂಡಿದ್ದಾರೆ. ಇನ್ನೇನು ಶೀಘ್ರದಲ್ಲಿ ಈ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. (ಏಜೆನ್ಸೀಸ್)