ನ್ಯೂಸ್

ಬೆಡ್​ ರೂಂನಲ್ಲಿ ಕಾಣಿಸಿಕೊಂಡ 6 ಅಡಿ ಉದ್ದದ ಹಾವು! ಬೆಚ್ಚಿಬಿದ್ದ ಕುಟುಂಬಸ್ಥರು, ತುಮಕೂರಲ್ಲಿ ಘಟನೆ

ತುಮಕೂರು: ಮನೆಯೊಂದರ ಬೆಡ್​ ರೂಮಿನಲ್ಲಿ ಬೃಹತ್ ಗಾತ್ರದ ಹಾವು ಕಾಣಿಸಿಕೊಂಡಿದ್ದು, ಕುಟುಂಬಸ್ಥರು ಬೆಚ್ಚಿಬಿದ್ದ ಘಟನೆ ನಗರದ ಹನುಮಂತಪುರದಲ್ಲಿ ಸಂಭವಿಸಿದೆ.

ಹನುಮಂತಪುರ ನಿವಾಸಿ ನಟರಾಜು ಎಂಬುವರ ಮನೆಯ ಬೆಡ್​ ರೂಮಿನಲ್ಲಿ ಬರೋಬ್ಬರಿ 6 ಅಡಿ ಉದ್ದದ ಕೆರೆ ಹಾವು ಸೇರಿಕೊಂಡಿತ್ತು. ಮಲಗಲೆಂದು ಕೋಣೆಗೆ ಹೋದಾಗ ಬೆಡ್​ ಮೇಲೆ ಹಾವು ಕಾಣಿಸಿಕೊಂಡಿದೆ.

ಬೆಚ್ಚಿಬಿದ್ದ ಕುಟುಂಸ್ಥರು, ಕೂಡಲೇ ಉರಗ ಸಂರಕ್ಷಕ ದಿಲೀಪ್ ಅವರಿಗೆ ಫೋನ್​ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ದಿಲೀಪ್​, ಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.