ಕೇರಳ: ಆಪರೇಷನ್ ಥಿಯೇಟರ್‌ಗಳಲ್ಲಿ ಲಾಂಗ್ ಸ್ಲೀವ್ ಸ್ಕ್ರಬ್ ಜಾಕೆಟ್ ಮತ್ತು ಸರ್ಜಿಕಲ್ ಹುಡ್‌ಗಳನ್ನು ಧರಿಸಲು ಅನುಮತಿ ಕೋರಿ ಮಹಿಳಾ ಮುಸ್ಲಿಂ ಎಂಬಿಬಿಎಸ್ ವಿದ್ಯಾರ್ಥಿನಿಯರ ಗುಂಪು ಇತ್ತೀಚೆಗೆ ಮಾಡಿದ ಮನವಿಗೆ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಸೇರಿದಂತೆ ವೈದ್ಯಕೀಯ ವಿವಿಧ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
ಆಸ್ಪತ್ರೆಗಳು ಮತ್ತು ಆಪರೇಷನ್ ಥಿಯೇಟರ್‌ಗಳಲ್ಲಿ ರೋಗಿಗಳ ಸುರಕ್ಷಿತ ವಾತಾವರಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಇದು ಜಾಗತಿಕವಾಗಿ ಎಲ್ಲೆಡೆ ಅನುಸರಿಸುವ ಪ್ರೋಟೋಕಾಲ್ ಅಗಿದೆ. ಶಸ್ತ್ರಚಿಕಿತ್ಸೆಗಳನ್ನು ನಡೆಸುವ ವೈದ್ಯರು ಹಾಗೂ ಇತರ ವೈದ್ಯಕೀಯ ವೃತ್ತಿಪರರಿಗೆ ಅಂಗೀಕೃತ ಡ್ರೆಸ್ಕೋಡ್ ಇದ್ದು, ಐಎಂಎ ಸಹ ಈ ಜಾಗತಿಕ ಸುರಕ್ಷತಾ ಪ್ರೋಟೋಕಾಲ್‌ಗಳಿಗೆ ಬದ್ಧವಾಗಿದೆ. ರೋಗಿಗಳ ಸುರಕ್ಷತೆಗೆ ಎಂದಿಗೂ ರಾಜಿಯಾಗುವುದಿಲ್ಲ ಎಂದು ಹೇಳಿದೆ.
ಈ ರೀತಿಯ ಅಭಿಪ್ರಾಯ ಹಂಚಿಕೊಂಡಿರುವ ಕೇರಳ ಸರ್ಕಾರಿ ವೈದ್ಯಕೀಯ ಅಧಿಕಾರಿಗಳ ಸಂಘದ(ಕೆಜಿಎಂಒಎ) ಇಂತಹ ಮನವಿಗೆ ಅನುಮತಿ ನೀಡುವುದು ವೈಜ್ಞಾನಿಕವಾಗಿ ಅಥವಾ ನೈತಿಕವಾಗಿ ಸೂಕ್ತವಲ್ಲ ಎಂದು ಕೇರಳ ಐಎಂಎ ಹೇಳಿದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ಎಲ್ಲ ಸನ್ನಿವೇಶಗಳಲ್ಲಿ ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದು ಕಡ್ಡಾಯವಾಗಿದ್ದು, ಶಸ್ತ್ರಚಿಕಿತ್ಸೆ ಕರ್ತವ್ಯದ ವೇಳೆ ಹಿಜಾಬ್ ನಿಯಮ ಪಾಲಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ನಮಗೆ ಪರ್ಯಾಯವಾಗಿ ಆಪರೇಟಿಂಗ್ ಥಿಯೇಟರ್ (OT) ಒಳಗೆ ಉದ್ದನೆಯ ತೋಳಿನ ಸ್ಕ್ರಬ್ ಜಾಕೆಟ್‌ಗಳು ಮತ್ತು ಹಿಜಾಬ್ ತರಹದ ಸರ್ಜಿಕಲ್ ಹುಡ್‌ಗಳನ್ನು ಧರಿಸಲು ಅವಕಾಶ ನೀಡಬೇಕು ಎಂದು ಜೂನ್ 26ರಂದು ತಿರುವನಂತಪುರದ ಸರ್ಕಾರಿ ವೈದ್ಯಕೀಯ ಕಾಲೇಜ್‌ನ ವಿದ್ಯಾರ್ಥಿನಿಯರು ಪ್ರಾಂಶುಪಾಲರಿಗೆ ಪತ್ರ ಬರೆದಿದ್ದರು. ಇದನ್ನು ಪರಿಶೀಲಿಸಿದ ಐಎಂಎ, ಈ ಮನವಿಯನ್ನು ತಿರಸ್ಕೃತಗೊಳಿಸಿದೆ.(ಏಜೆನ್ಸೀಸ್)