ತಿರುವನಂತಪುರಂ : 1994 ರ ಇಸ್ರೋ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದ ಸಂಚಿನ ಪ್ರಕರಣದಲ್ಲಿ ಆರೋಪಿಗಳಾಗಿರುವ ಕೇರಳದ ಮಾಜಿ ಪೊಲೀಸ್ ಅಧಿಕಾರಿಗಳಾದ ಎಸ್.ವಿಜಯನ್ ಮತ್ತು ಥಾಂಪಿ ಎಸ್.ದುರ್ಗಾ ದತ್ತ ಅವರಿಗೆ ಕೇರಳ ಹೈಕೋರ್ಟ್ ಎರಡು ವಾರಗಳ ಜಾಮೀನು ನೀಡಿದೆ.
ವಿಜಯನ್ ಮತ್ತು ದತ್ತ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐಗೆ ಇಬ್ಬರನ್ನೂ ಬಂಧಿಸದಂತೆ ಆದೇಶಿಸಿದೆ. (ಏಜೆನ್ಸೀಸ್)