More

    ಟ್ರ್ಯಾಕ್ಟರ್ ಏರಿ ಸಂಸತ್ತಿಗೆ ಬಂದ ರಾಹುಲ್ ಗಾಂಧಿ!

    ನವದೆಹಲಿ : ವಿವಾದಿತ ಕೃಷಿ ಕಾನೂನುಗಳ ವಿರುದ್ಧ ರೈತರ ದನಿಯನ್ನು ಬಲಗೊಳಿಸಲು ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ, ಇಂದು ಟ್ರ್ಯಾಕ್ಟರ್ ಓಡಿಸಿಕೊಂಡು ಸಂಸತ್ತು ತಲುಪಿದರು. ಕೆಂಪು ಬಣ್ಣದ ಟ್ರ್ಯಾಕ್ಟರನ್ನು ಬಿಳಿಯ ವಸ್ತ್ರಧಾರಿ ರಾಹುಲ್ ಗಾಂಧಿ, ರಾಜಧಾನಿಯ ಮುಖ್ಯರಸ್ತೆಗಳಲ್ಲಿ ಠೀವಿಯಿಂದ ಓಡಿಸಿಕೊಂಡು ಬಂದರು.

    “ರೈತ ವಿರೋಧಿಯಾದ ಮೂರೂ ಕಪ್ಪು ಕೃಷಿ ಕಾನೂನುಗಳನ್ನು ವಾಪಸ್​ ಪಡೆಯಿರಿ ವಾಪಸ್ ಪಡೆಯಿರಿ” ಎಂಬ ಬ್ಯಾನರ್​ ಹಾಕಿದ ಟ್ರ್ಯಾಕ್ಟರಿನ ಮೇಲೆ ಪ್ಲಕಾರ್ಡ್​ಗಳನ್ನು ಹಿಡಿದು ಘೋಷಣೆ ಕೂಗುತ್ತಿದ್ದ ಕೆಲವು ಕಾರ್ಯಕರ್ತರೂ ಇದ್ದರು. ಮಾಧ್ಯಮದವರ ಪೂರ್ಣ ಗಮನ ಸೆಳೆಯುವಲ್ಲಿ ಯಶಸ್ವಿಯಾದ ಗಾಂಧಿ, “ಸರ್ಕಾರವು ರೈತರ ಧ್ವನಿಯನ್ನು ಹತ್ತಿಕ್ಕುತ್ತಿದೆ. ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆ ಮಾಡಲು ಬಿಡುತ್ತಿಲ್ಲ. ಅದಕ್ಕಾಗಿ ನಾನು ರೈತರ ಸಂದೇಶವನ್ನು ತಲುಪಿಸುವ ಕೆಲಸ ಮಾಡುತ್ತಿದ್ದೇನೆ” ಎಂದರು.

    ಇದನ್ನೂ ಓದಿ: ಕೊಲೆ, ಸಾಕ್ಷಿನಾಶ: ಪೊಲೀಸ್​​ ಇನ್ಸ್​ಪೆಕ್ಟರ್, ಕಾಂಗ್ರೆಸ್​ ನಾಯಕನ ಬಂಧನ

    “ರೈತ ವಿರೋಧಿಯಾದ ಕಾನೂನುಗಳನ್ನು ಸರ್ಕಾರ ರದ್ದುಗೊಳಿಸುವ ಕಾಲ ಬಂದಿದೆ. ಇದು ರೈತರ ಸಂದೇಶ, ಇದನ್ನು ನಾನು ಸಂಸತ್ತಿನವರೆಗೆ ತಂದಿದ್ದೇನೆ” ಎಂದ ಗಾಂಧಿ, ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳು ಕಪ್ಪು ಕಾನೂನುಗಳು. ಇವು ರೈತರ ಹಿತದಲ್ಲಿಲ್ಲ. ಎರಡು-ಮೂರು ವಾಣಿಜ್ಯೋದ್ಯಮಿಗಳಿಗೆ ಮಾತ್ರ ಉಪಯೋಗವಾಗುವಂಥವು ಎಂಬುದು ಇಡೀ ದೇಶಕ್ಕೇ ಗೊತ್ತು ಎಂದರು.

    ನಂತರದಲ್ಲಿ ತಮ್ಮ ಟ್ವಿಟರ್​ ಖಾತೆಯಲ್ಲಿ ತಮ್ಮ ಟ್ರ್ಯಾಕ್ಟರ್​ ಚಿತ್ರವನ್ನು ಶೇರ್​ ಮಾಡಿರುವ ಗಾಂಧಿ, “ಜಮೀನು ಮಾರುವಂತೆ ಒತ್ತಾಯ ಮಾಡಿದರೆ, ಟ್ರ್ಯಾಕ್ಟರ್​ ಸಂಸತ್ತಿನಲ್ಲಿ ಓಡಲಿದೆ. ಸತ್ಯದ ಫಸಲು ಬೆಳೆಸಲಿದೆ” ಎಂದು ಟ್ವೀಟ್​ ಮಾಡಿದ್ದಾರೆ. (ಏಜೆನ್ಸೀಸ್)

    ಡಿಗ್ರಿಯೇ ಇಲ್ಲದೆ ವರ್ಷಗಳಿಂದ ವಕೀಲಳ ಸೋಗು ಹಾಕಿದ್ದ ಮಹಿಳೆ!

     

    ಒಲಿಂಪಿಕ್ಸ್​: ಸೆಮಿಫೈನಲ್​ಗೆ ಜಸ್ಟ್​ ಮಿಸ್​ ಆದ ಮಾನಾ ಪಟೇಲ್​

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts