ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ(Maharashtra elections) ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಮಹತ್ವದ ನಿರ್ಧಾರ ಕೈಗೊಂಡಿದೆ. ಎಎಪಿ ಅಭ್ಯರ್ಥಿಗಳು ಕಣದಲ್ಲಿ ಇಲ್ಲದಿದ್ದರೂ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮಹಾರಾಷ್ಟ್ರದಲ್ಲಿ 'ಇಂಡಿಯಾ' ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿದ್ದಾರೆ.
ಇದನ್ನೂ ಓದಿ: Rahul Gandhi: ಕ್ಷೌರದಂಗಡಿಯಲ್ಲಿ ಕಾಣಿಸಿಕೊಂಡ ‘ಕೈ’ ಅಗ್ರನಾಯಕ: ಗಡ್ಡ ಟ್ರಿಮ್ ಮಾಡುವಾಗ ಕ್ಷೌರಿಕನಿಗೆ ಹೇಳಿದ್ದೇನು?
ಎಎಪಿ ಬೆಂಬಲಿತರು ಇರುವಲ್ಲಿ ಮತ್ತು ಯಾವುದೇ ವಿವಾದಗಳಿಲ್ಲದ ಎಂವಿಎ ಅಭ್ಯರ್ಥಿಗಳ ಪರವಾಗಿ ಅವರು ಪ್ರಚಾರ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 'ಎಎಪಿ' ಮಹಾರಾಷ್ಟ್ರ ಚುನಾವಣೆಯಿಂದ ದೂರ ಉಳಿದಿದ್ದರೆ, ಕೇಜ್ರಿವಾಲ್ ಮಹಾ ವಿಕಾಸ್ ಅಘಾಡಿ (ಎಂವಿಎ) ಪರವಾಗಿ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.
ಶಿವಸೇನೆ-ಯುಬಿಟಿ ಮತ್ತು ಎನ್‌ಸಿಪಿ-ಎಸ್‌ಪಿ ನಾಯಕರು ಇತ್ತೀಚೆಗೆ ಅರವಿಂದ್ ಕೇಜ್ರಿವಾಲ್ ಅವರನ್ನು ಮಹಾರಾಷ್ಟ್ರದಲ್ಲಿ ಪ್ರಚಾರ ಮಾಡಲು ಕೇಳಿಕೊಂಡಿದ್ದರು. ಇದಕ್ಕೆ ಕೇಜ್ರಿವಾಲ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕೇಜ್ರಿವಾಲ್ ಜೊತೆಗೆ ಅನೇಕ ಹಿರಿಯ ಎಎಪಿ ನಾಯಕರು ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.