ಚೆನ್ನೈ: ಸೌತ್ ಸಿನಿಮಾದ ಹೆಸರಾಂತ ನಾಯಕರ ಜತೆ ನಟಿ ಕೀರ್ತಿ ಸುರೇಶ್(Keerthy Suresh) ಕೆಲಸ ಮಾಡಿದ್ದಾರೆ. ಶಿಸ್ತಿನಿ ಜೀವನ ಶೈಲಿ ಪಾಲಿಸುವ ನಟಿ ಕೀರ್ತಿ ಸುರೇಸ್ ಯಾವುದೇ ಪಾತ್ರ ನೀಡದರೂ ಅದಕ್ಕೆ ಜೀವ ತುಂಬುತ್ತಾರೆ. ಈ ಹಿಂದೆ ಅವರು ಮಹಾನಟಿ ಸಿನಿಮಾದ ಲೀಡ್ ರೋಲ್ನಲ್ಲಿ ನಟಿಸಿದ್ದು ಗೊತ್ತೆ ಇದೆ. ಮಹಾನಟಿ ಸಿನಿಮಾ ಟಾಲಿವುಡ್ನ ಹೆಸರಾಂತ ನಟಿ ಸಾವಿತ್ರಿ ಅವರ ಜೀವನವನ್ನು ಆಧರಿಸಿದೆ. ನ್ಯಾಷನಲ್ ಅವಾರ್ಡ್ ತಂದುಕೊಟ್ಟ ಈ ಸಿನಿಮಾದಲ್ಲಿ ನಟಿಸಲು ಮೊದಲು ಕೀರ್ತಿ ಸುರೇಶ್ ನಿರಾಕರಿಸಿದ್ದರು ಎಂಬುದು ನಿಮಗೆ ಗೊತ್ತೆ.
ಇದನ್ನು ಓದಿ: ದೇಶ ತೊರೆಯಲು ಆಧ್ಯಾತ್ಮಿಕತೆ ಕಾರಣ; 24 ವರ್ಷಗಳ ಬಳಿಕ ಭಾರತಕ್ಕೆ ಬಂದ ಈ ಬಾಲಿವುಡ್ ನಟಿ ಹೀಗೇಳಿದ್ದೇಕೆ? | Bollywood
ಹೌದು, ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ಕೀರ್ತಿ ಸುರೇಶ್ ಸ್ವತಃ ಈ ವಿಚಾರವನ್ನು ತಿಳಿಸಿದ್ದಾರೆ. ನಾಗ್ ಅಶ್ವಿನಿ ಈ ಸಿನಿಮಾವನ್ನು ನನಗೆ ಆಫರ್ ಮಾಡಿದಾಗ ನಾನು ಅದನ್ನು ತಿರಸ್ಕರಿಸಿದ್ದೆ. 4 ಗಂಟೆಗಳ ಕಾಲ ಚಿತ್ರದ ಸ್ಕ್ರಿಪ್ಟ್ ಓದಿದ್ದೇನೆ, ನಂತರ ಚಿತ್ರ ಮಾಡಲು ನಿರಾಕರಿಸಿದ್ದೆ ಎಂದು ಹೇಳಿದ್ದಾರೆ.
ನಾನು ಬಹಳ ಭಯಪಟ್ಟಿದ್ದೆ, ಸಾವಿತ್ರಿ ಅಮ್ಮನವರ ಬಯೋಪಿಕ್ನಲ್ಲಿ ಯಾರೋ ಅಪರಿಚಿತ ಹುಡುಗಿ ಎಲ್ಲಿಂದಲೋ ಬಂದು ಏಕಾಏಕಿ ನಟಿಸುತ್ತಿದ್ದಾಳೆ ಎಂದು ಯಾರೂ ಭಾವಿಸಬಾರದೆಂದು ನಾನು ಈ ಚಿತ್ರವನ್ನು ತಿರಸ್ಕರಿಸಿದೆ. ಆಕೆ ಅದನ್ನು ಹಾಳುಮಾಡಿದ್ದಾಳೆ ಎಂದು ಹೇಳಿದರೆ ಹೇಗೆ?, ಅಭಿಮಾನಿಗಳಿಗೆ ಇಷ್ಟವಾಗದಿದ್ದರೆ ಹೇಗೆ? ಅವರು ಅದನ್ನು ತಪ್ಪು ದಿಕ್ಕಿನಲ್ಲಿ ತೆಗೆದುಕೊಂಡರೆ? ಎಂದು ಯೋಚಿಸುತ್ತಿದ್ದೆ. ಅದನ್ನು ಬಿಟ್ಟು ಬೇರೆ ಯಾವುದನ್ನೂ ಧನಾತ್ಮಕವಾಗಿ ಯೋಚಿಸಲು ಸಾಧ್ಯವಾಗಲಿಲ್ಲ ಎಂದರು.
ಆದರೆ ನಾಗ್ ಅಶ್ವಿನ್ ಮತ್ತು ನಿರ್ಮಾಪಕರು ನಾನು ಈ ಪಾತ್ರವನ್ನು ಮಾಡಬಹುದು ಎಂದು ಬಹಳ ವಿಶ್ವಾಸದಿಂದ ಹೇಳಿದರು. ಅವರ ವೈಯಕ್ತಿಕ ಜೀವನದ ಬಗ್ಗೆಯೂ ಹೇಳಬೇಕು ಎಂದು ನಾನು ಕೇಳಿದ್ದೆ ಎಂದು ಕೀರ್ತಿ ಹೇಳಿದ್ದಾರೆ. ಮೇ 9, 2018 ರಂದು ಚಿತ್ರ ಬಿಡುಗಡೆಯಾಯ್ತು. ಆದರೆ ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ನಾನು ಅನುಭವಿಸಿದ ಸುಂದರ ಭಾವನೆ ನನ್ನ ಜೀವನದುದ್ದಕ್ಕೂ ಇರುತ್ತದೆ. ಮುಂದೆ ಎಷ್ಟೇ ಸಿನಿಮಾ ಮಾಡಿದರೂ ಆ ಸಿನಿಮಾದ ನೆನಪುಗಳು ತಮ್ಮ ಮನಸ್ಸಿನಿಂದ ದೂರವಾಗುವುದಿಲ್ಲ ಎಂದು ಕೀರ್ತಿ ಸುರೇಶ್ ತಿಳಿಸಿದರು.
ಸದ್ಯ ಬಾಲಿವುಡ್ಗೆ ಪದಾರ್ಪಣೆ ಮಾಡಿರುವ ನಟಿ ಕೀರ್ತಿ ಸುರೇಶ್ ‘ಬೇಬಿ ಜಾನ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಅಟ್ಲಿ ನಿರ್ಮಿಸಿದ್ದು, ಕಾಲಿಸ್ ನಿರ್ದೇಶಿಸಿದ್ದಾರೆ. ಕೀರ್ತಿ ಸುರೇಶ್ಗೆ ವರುಣ್ ಧವನ್ ನಾಯಕನಾಗಿ ನಟಿಸಿದ್ದಾರೆ.(ಏಜೆನ್ಸೀಸ್)