ನ್ಯೂಸ್

ಡೊಳ್ಳು ಹೊಟ್ಟೆಯವನೇ ಗಂಡನಾಗಬೇಕೆಂದ ಸುರ ಸುಂದರಾಂಗಿ; ಮದುವೆಗೆ ಷರತ್ತುಗಳು ಅನ್ವಯ!

ನವದೆಹಲಿ: ಮದುವೆಯಾಗೋ ಹುಡುಗ ಸಿಕ್ಸ್​​ಪ್ಯಾಕ್, ಸ್ಮಾರ್ಟ್, ಫಿಟ್ ಆಗಿರಬೇಕು ಎಂದು ಹುಡುಗಿಯರು ತಮ್ಮ ಮದುವೆಯ ಕುರಿತಾಗಿ ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ ಇಲ್ಲೊಬ್ಬಾಕೆ ಮಾತ್ರ ನಂಗೆ ಮದುವೆಯಾಗೋಕೆ ಡೊಳ್ಳು ಹೊಟ್ಟೆಯ ಹುಡುಗನೇ ಬೇಕೆಂದು ಹೇಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

ಹಸೀನಾ ಮದೀನಾ ಮಮದಲೀವಾ, ಸದ್ಯ ಸಂಗಾತಿಯ ಹುಡುಕಾಟದಲ್ಲಿದ್ದಾಳೆ. ಕಜಕಿಸ್ತಾನದ ಈ ಸುಂದರಿಗೆ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಆಕೆ ಒಪ್ಪಿದರೆ ಆಕೆಯನ್ನು ಮದುವೆಯಾಗಲು ಜನರು ಸಾಲುಗಟ್ಟಿ ನಿಲ್ಲುತ್ತಾರೆ. ಆದರೆ ಈ ಚೆಲುವೆ ಡೊಳ್ಳು ಹೊಟ್ಟೆಯ ವರ ಬೇಕಾಗಿದ್ದಾನೆ. ಈಕೆ ಇಂತಹ ವರನನ್ನು ಹುಡುಕುತ್ತಿರುವುದರ ಹಿಂದೆ ಒಂದು ಕಾರಣವಿದೆ.

ಕಜಕಿಸ್ತಾನ್‌ನ ಮದೀನಾ ಮಮದಲೀವಾ ಸೋಶಿಯಲ್​ ಮೀಡಿಯಾದಿಂದಲೇ ಪ್ರತಿ ತಿಂಗಳು ಸುಮಾರು 40 ರಿಂದ 50 ಲಕ್ಷ ರೂಪಾಯಿಗಳನ್ನು ಸಂಪಾದಿಸುತ್ತಾರೆ. ಆದ್ದರಿಂದ ತಾನು ಬಯಸುವ ಸಂಗಾತಿಯೂ ಕೂಡ ಶ್ರೀಮಂತನಾಗಿರಬೇಕು ಜೊತೆಗೆ ಕಾಳಜಿಯುಳ್ಳವನಾಗಿರಬೇಕು, ಆದರೆ ಅವನು ಇನ್‌ಸ್ಟಾಗ್ರಾಮ್ ಖಾತೆಯನ್ನು ಹೊಂದಿರಬಾರದು ಎಂದು ಹೇಳಿಕೊಂಡಿದ್ದಾರೆ. ಅವಳಿಗೆ ಬೇಕಾಗಿರುವುದು ಅವಳ ಅದ್ದೂರಿ ಜೀವನಶೈಲಿಯನ್ನು ನಿಭಾಯಿಸಬಲ್ಲ ಗಂಡ. ಪತಿ ದಪ್ಪಗಾದರೂ ಪರವಾಗಿಲ್ಲ ಎಂದು ಮದೀನಾ ಸ್ಪಷ್ಟಪಡಿಸಿದ್ದಾರೆ.

ಮದೀನಾ ಮಮದಲೀವಾ ಸೋಶಿಯಲ್​ ಮೀಡಿಯಾದ ಮುಖಾಂತರವೇ ಸ್ಟಾರ್​​ ಆದ ಬೆಡಗಿ. ಆದರೆ ತನ್ನ ಸಂಗಾತಿಯಾಗಲು ಬಯಸುವಾತ ಇನ್‌ಸ್ಟಾಗ್ರಾಮ್ ಖಾತೆಯನ್ನು ಹೊಂದಿರಬಾರದು. ಯಾಕೆಂದರೆ ತನ್ನ ಗಂಡನ ಕುರಿತಾದ ಮಾಹಿತಿಯು ಅವಳು ಬಯಸಿದಷ್ಟು ಕಾಲ ರಹಸ್ಯವಾಗಿ ಉಳಿಯಬೇಕು. ಇದು ಅವನ ಹೊರತು ಜಗತ್ತಿನಲ್ಲಿ ಯಾರಿಗೂ ತಿಳಿಯಬಾರದು ಎಂದು ಹೇಳಿಕೊಂಡಿದ್ದಾರೆ.