ನ್ಯೂಸ್

ನೀವ್ಯಾರು ದೀಪಾವಳಿ ಆಚರಿಸಬೇಡಿ... ಎಂದ ಟಿವಿಕೆ ನಾಯಕ; ಕಾರಣವೇನು? TVK

ತಮಿಳುನಾಡು: ನಟ ವಿಜಯ್​ ಅವರ ತಮಿಳು ವೆಟ್ರಿ ಕಳಗಂ (ಟಿವಿಕೆ) TVK ಪ್ರಚಾರ ಸಮಯದಲ್ಲಿ ಕಾಲ್ತುಳಿತದಲ್ಲಿ ಸಾವನ್ನಪ್ಪಿದ 41 ಜನರ ಸ್ಮರಣಾರ್ಥ ಸಲುವಾಗಿ ಈ ವರ್ಷ ದೀಪಾವಳಿ ಆಚರಿಸಬಾರದು ಎಂದು ವಿಜಯ್​ ತಮ್ಮ ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.

ಸೆಪ್ಟೆಂಬರ್​ 27 ರಂದು ಸುಮಾರು 30 ಸಾವಿರಕ್ಕೂ ಹೆಚ್ಚು ಬೆಂಬಲಿಗರು ಭಾಗವಹಿಸಿದ್ದ ಈ ರ‍್ಯಾಲಿಯಲ್ಲಿ ಉಂಟಾದ ಕಾಲ್ತುಳಿತದ ನಂತರ ಹಲವಾರು ಮಹಿಳೆಯರು ಮತ್ತು ಮಕ್ಕಳ ಪ್ರಾಣವನ್ನು ಬಲಿ ತೆಗೆದುಕೊಂಡಿತು. ಈ ದುರಂತಕ್ಕೆ ಪ್ರತಿಕ್ರಿಯೆ ನೀಡಿದ ವಿಜಯ್​ ಘಟನೆಯು ಹೃದಯವನ್ನು ಮುರಿದಿದೆ ಮತ್ತು ನೋವಿನಿಂದ ನರಳುತ್ತಿದೆ ಎಂದು ದುಃಖಿಸಿದ್ದರು.

ಭಾವನಾತ್ಮಕ ಪೋಸ್ಟ್​

ದುರಂತದ ನಂತರ ನನ್ನ ಹೃದಯ ಮುರಿದುಹೋಗಿದೆ. ಪದಗಳಲ್ಲಿ ವ್ಯಕ್ತಪಡಿಸಲಾಗದ ಅಸಹನೀಯ ನೋವಿನಿಂದ ನಾನು ನರಳುತ್ತಿದ್ದೇನೆ.. ಈ ಘಟನೆಯಲ್ಲಿ ಪ್ರಾಣ ಕಳೆದುಕೊಂಡ ನನ್ನ ಪ್ರೀತಿಯ ಸಹೋದರ ಸಹೋದರಿಯರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪ ಮತ್ತು ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​ ಹಂಚಿಕೊಂಡಿದ್ದರು.

ಈ ಘಟನೆ ಬಳಿಕ, ಜನಸಂದಣಿಯನ್ನು ನಿಯಂತ್ರಿಸುವಲ್ಲಿನ ಲೋಪಗಳ ಆರೋಪದ ಮೇಲೆ ಪೊಲೀಸರು ಟಿವಿಕೆಯ ಉನ್ನತ ಕಾರ್ಯಕರ್ತರಾದ ಮತಿಯಝಕನ್ ಮತ್ತು ಸಿ. ಪೌನ್‌ರಾಜ್ ಅವರನ್ನು ಬಂಧಿಸಿದರು. ಇದಾದ ಬಳಿಕ ಅವರನ್ನು ನ್ಯಾಯಾಲಯ ಬಿಡುಗಡೆ ಮಾಡಿತು. ಕಾಲ್ತುಳಿತಕ್ಕೆ ಕಾರಣವಾದ ಘಟನೆಗಳಿಗೆ ಸಂಬಂಧಿಸಿದಂತೆ ಟಿವಿಕೆಯ ಪ್ರಧಾನ ಕಾರ್ಯದರ್ಶಿ ಬ್ಯುಸಿ ಆನಂದ್ ಮತ್ತು ಜಂಟಿ ಪ್ರಧಾನ ಕಾರ್ಯದರ್ಶಿ ನಿರ್ಮಲ್ ಶೇಖರ್ ವಿರುದ್ಧ ಪ್ರಕರಣ ದಾಖಲಾಗಿತ್ತು.

ದೂರಿನಲ್ಲೇನಿತ್ತು?

ವಿಜಯ್​ ಅವರು ಉದ್ದೇಶಪೂರ್ವಕವಾಗಿ ರ‍್ಯಾಲಿಗೆ ತಲುಪಲು ನಾಲ್ಕು ಗಂಟೆಗಳ ಕಾಲ ತಡವಾಗಿ ಬಂದಿದ್ದರಿಂದ ಜನಸಮೂಹದಲ್ಲಿ ಅಶಾಂತಿ ಹಾಗೂ ಆಂದೋಲನ ಉಂಟಾಗಲು ಕಾರಣವಾಯಿತು ಎಂದು ಆರೋಪಿಸಿ ವಿಜಯ್​ ಮೇಲೂ ಎಫ್​ಐಆರ್​ ದಾಖಲಾಗಿತ್ತು ಎಂದು ವರದಿಯಾಗಿತ್ತು.

ಎಫ್‌ಐಆರ್‌ನಲ್ಲಿ ಏನಿತ್ತು?

ಅಧಿಕಾರಿಗಳು ನಿಗದಿಪಡಿಸಿದ ಷರತ್ತುಗಳನ್ನು ಉಲ್ಲಂಘಿಸಿ, ಅಗತ್ಯ ಅನುಮತಿಯಿಲ್ಲದೆ ವಿಜಯ್​ ರೋಡ್​ ಶೋ ನಡೆಸಿದ್ದಾರೆ. ಹಾಗೆಯೇ ಟಿವಿಕೆಯ ಇತರ ಹಿರಿಯ ನಾಯಕರು ಕಾನೂನು ಜಾರಿ ಅಧಿಕಾರಿಗಳಿಂದ ಪದೇ ಪದೇ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ್ದಾರೆ ಮತ್ತು ಪಕ್ಷದ ಕಾರ್ಯಕರ್ತರಲ್ಲಿ ವಿಜಯ್ "ಅನಗತ್ಯ ನಿರೀಕ್ಷೆಗಳನ್ನು ಸೃಷ್ಟಿಸಿದ್ದಾರೆ ಎಂದು ಎಫ್​ಐಆರ್​ನಲ್ಲಿ ದಾಖಲಿಸಲಾಗಿತ್ತು.

ಈ ಆರೋಪಗಳ ಹೊರತಾಗಿಯೂ ವಿಜಯ್​ ಯಾವುದೇ ತಪ್ಪು ಮಾಡಿಲ್ಲ ಎಂದು ಬಲವಾಗಿ ನಿರಾಕರಿಸಿದ್ದು, ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿಯವರೆ ನಿಮಗೆ ಏನಾದರೂ ಸೇಡು ತೀರಿಸಿಕೊಳ್ಳುವುದು ಇದ್ದರೆ ನನ್ನ ಮೇಲೆ ತೀರಿಸಿಕೊಳ್ಳಿ ಆದರೆ ಅವರನ್ನು ಮುಟ್ಟಬೇಡಿ. ನಾನು ನನ್ನ ಮನೆ ಅಥವಾ ಕಚೇರಿಯಲ್ಲಿ ಇರುತ್ತೇನೆ ನಿಮಗೆ ಇಷ್ಟವಾದುದ್ದನ್ನು ಮಾಡಿ ಎಂದು ಹೇಳಿದರು. (ಏಜೆನ್ಸೀಸ್​)