ದಳಪತಿ ವಿಜಯ್​​​ 
ನ್ಯೂಸ್

ಕರೂರ್ ಕಾಲ್ತುಳಿತ ಕೇಸ್; ದಳಪತಿ ವಿಜಯ್​​ಗೆ ಮತ್ತೆ ನಾಳೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ ಸಿಬಿಐ | Thalapathy Vijay

ನವದೆಹಲಿ: ಕರೂರ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ಸಲುವಾಗಿ ನಾಳೆ(ಮಾ. 10) ಮತ್ತೆ ವಿಚಾರಣೆ ಹಾಜರಾಗುವಂತೆ ತಮಿಳು ಸೂಪರ್ ಸ್ಟಾರ್ ಮತ್ತು ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್ ಅವರಿ​​​ಗೆ(Thalapathy Vijay) ಸೋಮವಾರ ಸಿಬಿಐ ಸಮನ್ಸ್ ನೀಡಿದೆ ಎಂದು ವರದಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 12 ಮತ್ತು 19ರಂದು ಎರಡು ದಿನ ದೆಹಲಿ ಸಿಬಿಐ ಪ್ರಧಾನ ಕಚೇರಿಯಲ್ಲಿ ವಿಚಾರಣೆ ಎದುರಿಸಿದ್ದರು. ವಿಚಾರಣೆಯಲ್ಲಿ ವಿಜಯ್ ನೀಡಿದ ಮಾಹಿತಿ, ಸ್ಪಷ್ಟೀಕರಣ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲು ನೋಟಿಸ್ ನೀಡಿದೆ ಎನ್ನಲಾಗಿದೆ.
2025 ಸೆ. 27ರಂದು ಕರೂರ್​ನಲ್ಲಿ ಟಿವಿಕೆ ರ್ಯಾಲಿ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ 41 ಮಂದಿ ಸಾವನ್ನಪ್ಪಿ, ನೂರಾರು ಮಂದಿ ಗಾಯಗೊಂಡಿದ್ದರು. ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಸಿಬಿಐ ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ. ಮತ್ತು ತನಿಖೆಯ ಮೇಲ್ವಿಚಾರಣೆ ನಡೆಸಲು ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಅಜಯ್ ರಸ್ತೋಗಿ ನೇತೃತ್ವದಲ್ಲಿ ಮೇಲ್ವಿಚಾರಣಾ ಸಮಿತಿಯನ್ನು ಸಹ ಕೋರ್ಟ್​ ರಚಿಸಿದೆ.
ಪ್ರಕರಣದ ತನಿಖೆ ನಡೆಸಿರುವ ಸಿಬಿಐ, ಕರೂರ್​ಗೆ ಭೇಟಿ ನೀಡಿ ಹಲವು ಸಾಕ್ಷ್ಷಗಳನ್ನು ಸಂಗ್ರಹಿಸಿದೆ. ಇನ್ನೂ ಘಟನೆ ಸಂಬಂಧಿಸಿದಂತೆ ಸ್ಥಳೀಯರನ್ನು ಸೇರಿ ಟಿವಿಕೆ ಪಕ್ಷದ ನಾಯಕರನ್ನು ವಿಚಾರಣೆ ನಡೆಸಿದೆ (ಏಜೆನ್ಸೀಸ್).