ನ್ಯೂಸ್

ರಶ್ಮಿಕಾ ನಟನೆಯ ಚಿತ್ರ ಬಾಲಿವುಡ್​ನಲ್ಲಿ ರಿಮೇಕ್​; ಹೀರೋ ಯಾರು ಗೊತ್ತೆ?

ವಿಜಯ್​ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ ಡಿಯರ್​ ಕಾಮ್ರೆಡ್​ ಸಿನಿಮಾ ದಕ್ಷಿಣದ ಹಲವು ಭಾಷೆಗಳಲ್ಲಿ ತೆರೆಕಂಡಿತ್ತು. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಯನ್ನೂ ಪಡೆದುಕೊಂಡಿತ್ತು. ಜತೆಗೆ ಬಾಲಿವುಡ್​ನಲ್ಲಿ ರಿಮೇಕ್​ ಆಗಲಿದೆ ಎಂಬ ವಿಚಾರವಾಗಿಯೂ ಈ ಸಿನಿಮಾ ಸದ್ದು ಮಾಡಿತ್ತು.

ಆ ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಈ ಮೊದಲು ಧಡಕ್​ ಸಿನಿಮಾ ಖ್ಯಾತಿಯ ಜೋಡಿ, ಇಶಾನ್​ ಕಟ್ಟರ್​ ಮತ್ತು ಜಾನ್ವಿ ಕಪೂರ್​ , ಡಿಯರ್​ ಕಾಮ್ರೆಡ್​ ಸಿನಿಮಾ ರಿಮೇಕ್​ನಲ್ಲಿ ನಟಿಸಲಿದೆ ಎನ್ನಲಾಗಿತ್ತು. ಇದೀಗ ಆ ಜೋಡಿಯ ಬದಲಾಗಿದೆ, ಮುಖ್ಯಭೂಮಿಕೆಯಲ್ಲಿ ಕಾರ್ತಿಕ್​ ಆರ್ಯನ್​, ವಿಜಯ್​ ಪಾತ್ರ ನಿಭಾಯಿಸಲಿದ್ದಾರಂತೆ.

ಸಿನಿಮಾ ಬಿಡುಗಡೆಯಾದ ಬಳಿಕವೇ ಚಿತ್ರದ ರಿಮೇಕ್​ ಹಕ್ಕುಗಳನ್ನು ಪಡೆದುಕೊಂಡಿದ್ದ ಕರಣ್​ ಜೋಹರ್, ಧರ್ಮ ಪ್ರೊಡಕ್ಷನ್​ ಬ್ಯಾನರ್​ ಅಡಿಯಲ್ಲಿ ಈ ಸಿನಿಮಾ ನಿರ್ಮಾಣ ಮಾಡುವ ಗುರಿ ಹೊಂದಿದ್ದಾರೆ. ದಕ್ಷಿಣದಲ್ಲಿ ಈ ಸಿನಿಮಾ ಅಷ್ಟೊಂದು ಮೋಡಿ ಮಾಡಿರಲಿಲ್ಲ. ಇದೀಗ ಕರಣ್ ಜೋಹರ್​ ಅದೇನೆಲ್ಲ ಬದಲಾವಣೆ ಮಾಡಿಕೊಂಡು ಸಿನಿಮಾ ಶುರು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್​)