ಬೆಂಗಳೂರು: ಕರ್ನಾಟಕವು ನೇರ ತೆರಿಗೆ ಸಂಗ್ರಹದಲ್ಲಿ ಎರಡನೇ ಅತಿ ದೊಡ್ಡ ಕೊಡುಗೆದಾರನಾಗಿ ಹೊರಹೊಮ್ಮಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ಇತ್ತೀಚಿನ ವರದಿಯಲ್ಲಿ ತಿಳಿಸಿರುವುದಾಗಿ ಖಾಸಗಿ ಸುದ್ದಿ ಮಾಧ್ಯಮ ವರದಿ ಮಾಡಿದೆ.(FY24)
ಇದನ್ನು ಓದಿ: ವಿಧಾನಸಭೆ ಚುನಾವಣೆ ಅಖಾಡದಲ್ಲಿ ಕ್ಯಾಪ್ಟನ್ ಕೂಲ್; ಮಹೇಂದ್ರ ಸಿಂಗ್ ಧೋನಿ ಹೆಗಲಿಗೆ ದೊಡ್ಡ ಜವಾಬ್ದಾರಿ | MS Dhoni
2023-24ರ ಆರ್ಥಿಕ ವರ್ಷದಲ್ಲಿ ಕರ್ನಾಟಕವು ಒಟ್ಟು ನೇರ ತೆರಿಗೆ ಆದಾಯದ ಶೇ.11.9ರಷ್ಟು ಪಾಲನ್ನು ಹೊಂದಿದೆ. 38.9 ಪರ್ಸೆಂಟ್ ಮೂಲಕ ಮಹಾರಾಷ್ಟ್ರ ಮೊದಲನೆ ಸ್ಥಾನದಲ್ಲಿದ್ದು, 10.4 ಶೇಕಡಾದೊಂದಿಗೆ ದೆಹಲಿ ಮೂರನೇ ಸ್ಥಾನದಲ್ಲಿದೆ. ತಮಿಳುನಾಡು ಮತ್ತು ಗುಜರಾತ್‌ಗಳು ನೇರ ತೆರಿಗೆ ಆದಾಯಕ್ಕೆ ಕ್ರಮವಾಗಿ ಶೇ.6.5 ಮತ್ತು ಶೇ.4.8ರಷ್ಟು ಕೊಡುಗೆ ನೀಡಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ ಎಂದು ಎಸ್‌ಬಿಐ ವರದಿಯಲ್ಲಿ ಸೂಚಿಸಲಾಗಿದೆ. ಒಟ್ಟಾರೆಯಾಗಿ ಕೇಂದ್ರವು ಸಂಗ್ರಹಿಸುವ ಒಟ್ಟು ನೇರ ತೆರಿಗೆ ಆದಾಯದಲ್ಲಿ ಅಗ್ರ ಐದು ರಾಜ್ಯಗಳು 70 ಪ್ರತಿಶತಕ್ಕೂ ಹೆಚ್ಚು ಪಾಲನ್ನು ಹೊಂದಿವೆ.
ಏಳು ವರ್ಷಗಳಲ್ಲಿ ಮೊದಲ ಬಾರಿಗೆ ಕರ್ನಾಟಕ ಆದಾಯ ಮತ್ತು ಕಾರ್ಪೊರೇಟ್ ತೆರಿಗೆ ಕೊಡುಗೆಗಳಲ್ಲಿ ದೆಹಲಿಯನ್ನು ಹಿಂದಿಕ್ಕಿದೆ. ಎಸ್‌ಬಿಐ ಸಂಶೋಧನಾ ವರದಿಯ ಪ್ರಕಾರ ದೆಹಲಿಯು 2017-18 ರಿಂದ 2022-23 ರವರೆಗೆ ಎರಡನೇ ಸ್ಥಾನದಲ್ಲಿತ್ತು. 2023-24ರಲ್ಲಿ ಒಟ್ಟು ತೆರಿಗೆ ಆದಾಯಕ್ಕೆ ನೇರ ತೆರಿಗೆಯ ಕೊಡುಗೆಯು 14 ವರ್ಷಗಳಲ್ಲಿ ಅತ್ಯಧಿಕವಾಗಿದ್ದು, ಕೇಂದ್ರದ ತೆರಿಗೆ ಸರಳೀಕರಣ ಕ್ರಮಗಳು ಸಂಗ್ರಹಣೆಯನ್ನು ಹೆಚ್ಚಿಸಿವೆ ಎಂದು ವರದಿ ಹೇಳಿದೆ.