ನ್ಯೂಸ್

ಒಂದೇ ದಿನ 40 ಡಿವೈಎಸ್​ಪಿಗಳ ವರ್ಗಾವಣೆ; ನಿಮ್ಮ ಪ್ರದೇಶಕ್ಕೆ ಯಾರು?: ಇಲ್ಲಿದೆ ಪೂರ್ತಿ ಪಟ್ಟಿ…

ಬೆಂಗಳೂರು: ಕಳೆದ ಎರಡು ತಿಂಗಳ ಅವಧಿಯಲ್ಲಿ ಹಂತ ಹಂತವಾಗಿ ಐಪಿಎಸ್, ಡಿವೈಎಸ್​ಪಿ ಹಾಗೂ ಇನ್ಸ್​ಪೆಕ್ಟರ್ ಶ್ರೇಣಿಯ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ. ಇದೀಗ ಒಂದೇ ಬಾರಿಗೆ 40 ಜನ ಡಿವೈಎಸ್​​ಪಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದೆ.

ಚುನಾವಣಾ ಹೊಸ್ತಿಲಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳ ವರ್ಗಾವಣೆ ನಡೆಯುತ್ತಿದೆ. ಕಳೆದ ವಾರ ಜ.25ರಂದು ಒಂದೇ ದಿನ 23 ಡಿವೈಎಸ್​ಪಿಗಳ ವರ್ಗಾವಣೆ ಆದೇಶ ಹೊರಬಂದಿತ್ತು. ಇದೀಗ ಮತ್ತೊಮ್ಮೆ 40 ಡಿವೈಎಸ್​ಪಿಗಳು ವರ್ಗಾವಣೆಯಾಗುತ್ತಿದ್ದು, ಕೂಡಲೇ ಸೂಚಿಸಿದ ವಿಭಾಗದಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಸರ್ಕಾರ ಸೂಚಿಸಿದೆ.

ಈ ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದುಸೂಚಿಸಲಾಗಿದ್ದು, ಈ ಕೆಳಗಿನ‌ ಪಟ್ಟಿಯಲ್ಲಿ ವರ್ಗಾವಣೆ ಆಗಿರುವ ಡಿವೈಎಸ್​ಪಿಗಳು ಮತ್ತು ಅವರ ಹೊಸ ಕಾರ್ಯಸ್ಥಾನಗಳನ್ನು ನಮೂದಿಸಲಾಗಿದೆ.