ನ್ಯೂಸ್

ಪ್ರಚಾರಕ್ಕಾಗಿ ಕೆಜಿಎಫ್​ ಹಾಡು ಬಳಕೆ: ಪ್ರಕರಣ ರದ್ದತಿಗೆ ಹೈಕೋರ್ಟ್​ ನಕಾರ, ರಾಹುಲ್ ಗಾಂಧಿಗೆ ಮತ್ತಷ್ಟು ಸಂಕಷ್ಟ

ಬೆಂಗಳೂರು: ರಾಹುಲ್ ಗಾಂಧಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಕೆಜಿಎಫ್-2 ಚಿತ್ರದ ಮ್ಯೂಸಿಕ್ ಬಳಸಿದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣ ರದ್ದು ಕೋರಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.

ಇದನ್ನೂ ಓದಿ: ಡಾ. ವಿಜಯ ಸಂಕೇಶ್ವರರ ತ್ಯಾಗದಿಂದ ಯತ್ನಾಳ್ ಕೇಂದ್ರ ಸಚಿವ ಆಗಲು ಸಾಧ್ಯವಾಗಿದ್ದು: ಮುರುಗೇಶ್ ನಿರಾಣಿ

ಕಳೆದ ವರ್ಷ ನವೆಂಬರ್‌ನಲ್ಲಿ ಪಕ್ಷದ 'ಭಾರತ್ ಜೋಡೋ ಯಾತ್ರೆ' ವೇಳೆ ಬ್ಲಾಕ್‌ಬಸ್ಟರ್ ಕನ್ನಡದ ಚಲನಚಿತ್ರ ಕೆಜಿಎಫ್-2 ಹಾಡನ್ನು ಅನಧಿಕೃತವಾಗಿ ಬಳಸಿಕೊಂಡ ಆರೋಪದ ಮೇಲೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಜೈರಾಮ್ ರಮೇಶ್ ಮತ್ತು ಸುಪ್ರಿಯಾ ಶ್ರೀನೇಟ್ ವಿರುದ್ಧ ಸಂಗೀತ ಕಂಪನಿ ಎಂಆರ್‌ಟಿ ಮ್ಯೂಸಿಕ್ ದಾಖಲಿಸಿದ ಎಫ್‌ಐಆರ್ ದಾಖಲಿಸಿತ್ತು.

ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಪೀಠವು, ಕಾಂಗ್ರೆಸ್ ನಾಯಕರು ದೂರುದಾರರ ಹಕ್ಕುಸ್ವಾಮ್ಯವನ್ನು ಲಘುವಾಗಿ ತೆಗೆದುಕೊಂಡಂತೆ ತೋರುತ್ತಿದೆ ಎಂದು ಹೇಳಿದರು. ಅರ್ಜಿದಾರರು ಅನುಮತಿಯಿಲ್ಲದೆ ಮೂಲ ಕೋಡ್​​​ನ್ನು ತಿದ್ದಿರುವುದು ನಿಸ್ಸಂದೇಹವಾಗಿ ದೂರುದಾರರ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ.

ಏನಿದು ಪ್ರಕರಣ?
ಕಾಂಗ್ರೆಸ್ ಪಕ್ಷವು ಭಾರತ್ ಜೋಡೋ ಯಾತ್ರೆಯನ್ನು ಪ್ರಚಾರ ಮಾಡುವುದಕ್ಕಾಗಿ ವಿಡಿಯೋವೊಂದನ್ನು ರಿಲೀಸ್ ಮಾಡಿದ್ದು, ಆ ವಿಡಿಯೋದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಅನೇಕರು ಇದ್ದರು. ವಿಡಿಯೋದ ಹಿನ್ನೆಲೆಯಲ್ಲಿ 'ಕೆಜಿಎಫ್‌: ಚಾಪ್ಟರ್ 2' ಸಿನಿಮಾದ ಹಿಂದಿ ವರ್ಷನ್‌ನ  ಸುಲ್ತಾನ್​ ಎಂಬ ಗೀತೆಯನ್ನು ಬಳಕೆ ಮಾಡಲಾಗಿತ್ತು. ಆ ಹಾಡಿನ ಹಕ್ಕುಗಳು ಎಂಆರ್‌ಟಿ ಮ್ಯೂಸಿಕ್ ಸಂಸ್ಥೆ ಬಳಿ ಇದ್ದು, ಯಾವುದೇ ಅನುಮತಿ ಪಡೆಯದೇ 'ಕೆಜಿಎಫ್‌ 2' ಸಿನಿಮಾದ ಗೀತೆಯನ್ನು ಬಳಕೆ ಮಾಡಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಎಂಆರ್‌ಟಿ ಮ್ಯೂಸಿಕ್ ಸಂಸ್ಥೆಯು ಕೇಸ್ ದಾಖಲು ಮಾಡಿತ್ತು.(ಏಜೆನ್ಸೀಸ್​)