ಕಾಲಿವುಡ್ನ ಸ್ಟಾರ್ ನಟ ತಲಾ ಅಜಿತ್ ಕುಮಾರ್ ಕೇವಲ ನಟ ಅಷ್ಟೇ ಅಲ್ಲ ಬಹುಮುಖ ಪ್ರತಿಭೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಇದೀಗ ಅವರು ಮಾಡಿದ ಒಂದು ಕೆಲಸ ಕರ್ನಾಟಕದ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ಗಮನವನ್ನೂ ಸೆಳೆದು, ಅವರಿಂದಲೂ ಮೆಚ್ಚುಗೆ ಪಡೆದುಕೊಂಡಿದೆ. ಹಾಗಾದರೆ ನಟ ಅಜಿತ್, ಕರ್ನಾಟಕದ ಉಪಮುಖ್ಯಮಂತ್ರಿಗಳು ಮೆಚ್ಚುವಂಥ ಕೆಲಸ ಮಾಡಿದ್ದಾದರೂ ಏನು? ಅದಕ್ಕೆ ಉತ್ತರ ಇಲ್ಲಿದೆ.
ಇದನ್ನೂ ಓದಿ: ವಿಶಾಲ್ ಚಕ್ರಕ್ಕೆ ಯಶ್ ಸಾಥ್
ಗಮನದಲ್ಲಿರಲಿ ನಟ ಅಜಿತ್ ಕೇವಲ ನಟ ಅಷ್ಟೇ ಅಲ್ಲ. ಕಾರ್ ಮತ್ತು ಬೈಕ್ ರೇಸರ್, ಪರಿಣತಿ ಹೊಂದಿದ ಪೈಲಟ್, ರೈಫಲ್ ಶೂಟರ್, ಅದ್ಬುತ ಛಾಯಾಗ್ರಾಹಕ ಸಹ. ಇದೇ ಅಜಿತ್ ಪ್ರಾಜೆಕ್ಟ್ವೊಂದರ ಸಲುವಾಗಿ 2018ರಲ್ಲಿ ಮದ್ರಾಸ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಿಸ್ಟಮ್ ಸಲಹೆಗಾರರಾಗಿ, ಹೆಲಿಕಾಪ್ಟರ್ ಪರೀಕ್ಷಾರ್ಥ ಚಾಲಕರಾಗಿ ಅಜಿತ್ ನೇಮಕವಾಗಿದ್ದರು. ದಕ್ಷ ಹೆಸರಿನ ಡ್ರೋನ್ (ಅನ್ಆರ್ಮಡ್ ಏರಿಯಲ್ ವೇಹಿಕಲ್) ಅಭಿವೃದ್ಧಿ ಪಡಿಸುವ ವಿದ್ಯಾರ್ಥಿಗಳಿಗೆ ಮೆಂಟರ್ ಆಗಿದ್ದರು. ಅಷ್ಟೇ ಅಲ್ಲ ಆ ಡ್ರೋನ್ 2018ರಲ್ಲಿ ಮೆಡಿಕಲ್ ಎಕ್ಸ್ಪ್ರೆಸ್ ಪ್ರಶಸ್ತಿ ಸಹ ಪಡೆದುಕೊಂಡಿತ್ತು. ಸತತವಾಗಿ 6ಗಂಟೆ ಏಳು ನಿಮಿಷ ಆಕಾಶದಲ್ಲಿ ಹಾರಾಡಿ ದಾಖಲೆ ಮಾಡಿತ್ತು.
ಇದನ್ನೂ ಓದಿ: ಸುಶಾಂತ್ ಆತ್ಮಹತ್ಯೆಯ ಮೊದಲ ಯತ್ನ ಫಲಿಸಿರಲಿಲ್ಲ…! ಅಲ್ಲಿಗೆ ನಿಂತಿದ್ದರೆ ಬದುಕಿರುತ್ತಿದ್ದರೇ ಬಾಲಿವುಡ್ ನಟ…?
ಅದಾದ ಬಳಿಕ ಅದೇ ದಕ್ಷ ಡ್ರೋನ್ ಇದೀಗ ಕರೊನಾ ಪೀಡಿತ ಪ್ರದೇಶದ ಬಗ್ಗೆ ಸರ್ವೇ ಕಾರ್ಯದಲ್ಲಿ ಭಾಗಿಯಾಗಿದೆ. ಸೋಂಕು ನಿವಾರಕ ಸಿಂಪಡಣೆಯಲ್ಲಿ ತೊಡಗಿಸಿಕೊಂಡಿದೆ. ಏಕಕಾಲದಲ್ಲಿ ವಿಸ್ತಾರವಾದ ಪ್ರದೇಶಗಳಿಗೆ ಸೋಂಕುನಿವಾರಕ ಸಿಂಪಡಣೆಗೆ ದಕ್ಷ ಡ್ರೋನ್ ಬಳಸಿಕೊಳ್ಳಲಾಗುತ್ತಿದೆ. ಇದೀಗ ಅದೇ ದಕ್ಷ ಕರ್ನಾಟಕದಲ್ಲೂ ಬಳಕೆ ಮಾಡಲಾಗುತ್ತಿದ್ದು, ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ, ಅದರ ತಯಾರಿಕೆಯ ಹಿಂದಿರುವ ಅಜಿತ್ ಕಾರ್ಯವನ್ನು ಟ್ವಿಟರ್ನಲ್ಲಿ ಶ್ಲಾಘಿಸಿದ್ದಾರೆ. ಇತ್ತೀಚೆಗಷ್ಟೇ ತಮಿಳುನಾಡಿನ ತಿರುನೆಲ್ವೆಲ್ಲಿ ಜಿಲ್ಲಾಧಿಕಾರಿ ದಕ್ಷ ಡ್ರೋನ್ಗಳನ್ನು ಬಳಸಿಕೊಂಡು ಒಂದಷ್ಟು ಪ್ರದೇಶಗಳಿಗೆ ಸ್ಯಾನಿಟೈಸ್ ಮಾಡಿದ್ದಾರೆ.