ನವೆಂಬರ್ನಲ್ಲಿ ಈ ದಿನಗಳು ಬ್ಯಾಂಕ್ ಓಪನ್ ಇರೋದಿಲ್ಲ.
ದೀಪಾವಳಿ, ಕನಕದಾಸ ಜಯಂತಿ ಸೇರಿದಂತೆ ಸಾಲು ಸಾಲು ರಜೆ.
ನವೆಂವರ್ನಲ್ಲಿ ಒಟ್ಟು 9 ದಿನ ಬ್ಯಾಂಕ್ಗಳು ಕಾರ್ಯ ನಿರ್ವಹಿಸಲ್ಲ.
Karnataka Bank Holidays: ನವೆಂಬರ್ನಲ್ಲಿ ದೀಪಾವಳಿ, ಭಾನುವಾರ, ಶನಿವಾರದ ರಜಾ ದಿನ, ಕನಕ ದಾಸ ಜಯಂತಿ ಸೇರಿದಂತೆ ಒಟ್ಟು ಒಂಬತ್ತು ದಿನ ಬ್ಯಾಂಕ್ಗೆ ರಜೆ ಇರಲಿದೆ. ಶನಿವಾರ ಮತ್ತು ಭಾನುವಾರಕ್ಕೆ ಹೊಂದಿಕೊಂಡು ಬಂದಂತಹ ಸರ್ಕಾರಿ ರಜೆಯ ದಿನಗಳೊಂದಿಗೆ ಊರುಗಳಿಗೆ ತೆರಳಲು ಅಥವಾ ಪ್ರವಾಸಕ್ಕೆ ತೆರಳಲು ಬಯಸುವವರು ಪ್ಲ್ಯಾನ್ ಮಾಡಿಕೊಂಡು ನಿಮ್ಮ ವೈಯಕ್ತಿಕ ಸಮಯವನ್ನು ಕೊಟ್ಟುಕೊಳ್ಳಬಹುದಾಗಿದೆ.
ನವೆಂಬರ್ನಲ್ಲಿ ಎರಡನೇ ವಾರದಲ್ಲಿ ದೀಪಾವಳಿ ಹಬ್ಬ, ನಂತರ ಕನಕದಾಸ ಜಯಂತಿ ಇದೆರೆಡು ಸರ್ಕಾರಿ ರಜಾ ದಿನಗಳು ಇನ್ನೂ.. ಏಳು ಶನಿವಾರ ಮತ್ತು ಭಾನುವಾರ ವೀಕೆಂಡ್ ರಜೆಗಳು ಇರಲಿವೆ. ಹೀಗಾಗಿ ನಿಮ್ಮ ಯಾವುದೇ ಬ್ಯಾಂಕ್ ಕೆಲಸವನ್ನು ಹಬ್ಬಕ್ಕೂ ಮುನ್ನ ಪೂರ್ಣಗೊಳಿಸಿಕೊಳ್ಳಿ. ಕನಕದಾಸ ಜಯಂತಿಯಂದು ಮರೆತು ಬ್ಯಾಂಕ್ಗೆ ತೆರಳಿ ಪೆಚ್ಚು ಮರೆಯಿಂದ ವಾಪಸ್ ಬರುವುದನ್ನು ತಪ್ಪಿಸಿಕೊಳ್ಳಿ.
ನ.1: ಭಾನುವಾರ - ಕನ್ನಡ ರಾಜ್ಯೋತ್ಸವ
ನ.8: ಭಾನುವಾರ - ನರಕ ಚತುರ್ದ
ನ.9: ಸೋಮವಾರ - ಬಲಿ ಪಾಢ್ಯಮಿ
ನ.14: ಎರಡನೇ ಶನಿವಾರ
ನ.15: ಭಾನುವಾರ
ನ.22: ಭಾನುವಾರ
ನ.27: ಶುಕ್ರವಾರ- ಕನಕದಾಸ ಜಯಂತಿ
ನ.28: ನಾಲ್ಕನೇ ಶನಿವಾರ
ನ.29: ಭಾನುವಾರ
ಸಾಲು ಸಾಲು ರಜೆಗಳು ಇರುವ ಕಾರಣ ಈ ತಿಂಗಳು ಹಬ್ಬಕ್ಕೆ ಊರಿನತ್ತ ಮುಖ ಮಾಡುವವರು ಹೆಚ್ಚೆ ಇದ್ದಾರೆ. ದೀಪಾವಳಿ ಹಬ್ಬ ಆಚರಿಸಿ, ಪಟಾಕಿ ಹಚ್ಚಿ ಸಂಭ್ರಮಿಸಲು ಹಲವರು ಸುದೀರ್ಘ ರಜೆಯನ್ನು ತೆಗೆದುಕೊಳ್ಳುತ್ತಾರೆ. ಆದರೆ, ಇದನ್ನೇ ಗುರಿಯಾಗಿಸಿಕೊಂಡ ಖಾಸಗಿ ಬಸ್ ಮಾಲೀಕರು ದುಬಾರಿ ಟಿಕೆಟ್ ವಿಧಿಸಲು ಶುರುವಿಟ್ಟುಕೊಂಡಿದ್ದಾರೆ. ಹೀಗಾಗಿ ನೀವು ಊರಿಗೆ ತೆರಳುವ ಒಂದು ಇಪ್ಪತ್ತು ದಿನಕ್ಕೂ ಮುನ್ನವೇ ಬಸ್ ಮತ್ತು ಟ್ರೈನ್ ಟಿಕೆಟ್ಗಳನ್ನು ಬುಕ್ ಮಾಡಿಕೊಳ್ಳುವುದು ಒಳಿತು. ನಿಮಗೆ ಬೇಕಾದಷ್ಟು ಹಣವನ್ನು ರಜೆಯ ಮುನ್ನವೇ ಡ್ರಾ ಮಾಡಿಕೊಂಡು ಬ್ಯಾಂಕ್ ಕೆಲಸ ಸಂಪೂರ್ಣವಾಗಿ ಮುಗಿಸಿಕೊಳ್ಳುವ ಬಗ್ಗೆ ಯೋಚಿಸಿ, (ಏಜೆನ್ಸೀಸ್).