ನ್ಯೂಸ್

ಕರಿಷ್ಮಾ ಧರಿಸಿದ ಗೌನ್ ಲಕ್ಷಕ್ಕೂ ಹೆಚ್ಚು ಬೆಲೆ ಬಾಳುತ್ತೆ!

ಮುಂಬೈ: ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಇತ್ತೀಚೆಗೆ ಧರಿಸಿದ ಗೌನ್​ ಬೆಲೆ ಕೇಳಿದ್ರೆ ಹೌಹಾರ್ತೀರಿ. ಲಂಡನ್ ಮೂಲದ ಡಿಸೈನರ್ ಲೇಬಲ್ ಸಫಿಯಾ ಅವರ ಐಷಾರಾಮಿ ಲಾಂಗ್ ಗೌನ್‌ 1ಲಕ್ಷ ರೂ.ಗೂ ಅಧಿಕ ಬೆಲೆ ಬಾಳುತ್ತದೆ. ಈ ಹಸಿರು ಗೌನ್​ನಲ್ಲಿ ಅವರು ಅದ್ಭುತವಾಗಿ ಕಾಣಿಸಿಕೊಂಡರು.

ಕರಿಷ್ಮಾಗೆ ಡಿಸೈನರ್ ವೇರ್ ಮೇಲಿನ ಪ್ರೀತಿ ಎಂದಿಗೂ ಕಡಿಮೆಯಾಗಿಲ್ಲ. ಈ ನಟಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದಾಗಿನಿಂದ ಟ್ರೆಂಡ್‌ ಸೆಟರ್ ಆಗಿದ್ದಾರೆ. ಆಕೆಯ ಆಯ್ಕೆ ಫ್ಯಾಷನ್ ಉತ್ಸಾಹಿಗಳಿಗೆ ಸ್ಫೂರ್ತಿ ನೀಡುವಂತಿರುತ್ತವೆ.

ಮುಂದಿನ ಪ್ರವಾಸಕ್ಕಾಗಿ ಕರಿಷ್ಮಾ ಈ ನಿಯಾನ್ ಎಲೆಹಸಿರು ಬಣ್ಣದ ಉಡುಪನ್ನು ಆರಿಸಿಕೊಂಡಿದ್ದಾರೆ. ಇದರ ಬೆಲೆ ಅಂದಾಜು 1,29,548 ರೂ.ಎನ್ನಲಾಗಿದೆ. ಕಡೆನ್ಜಾ ಟೆಂಡರ್‌ ಶೂಟ್ಸ್ ಕಸೂತಿ ಲಾಂಗ್ ಡ್ರೆಸ್, ಉದ್ದನೆಯ ಕೇಪ್ ಮತ್ತು ಒಂದು ಭುಜದ ಕಂಠ ರೇಖೆಯೊಂದಿಗೆ ನೇಯ್ದ ಸೊಗಸಾದ ಡ್ರೆಪ್ ಅನ್ನು ಒಳಗೊಂಡಿದೆ.

ಗೌನ್‌ ಧರಿಸಿದ ಕರಿಷ್ಮಾ ಬೆಳ್ಳಿಯ ಹೂಪ್ ಕಿವಿಯೋಲೆಗಳು ಮತ್ತು ಸ್ಟೇಟ್‌ಮೆಂಟ್ ರಿಂಗ್‌ಗಳೊಂದಿಗೆ ಕಾಣಿಸಿಕೊಂಡಿದ್ದು, ಆಕೆಯ ಮೈಬಣ್ಣದ ವಿರುದ್ಧ ಎದ್ದು ಕಾಣುವಂತೆ ಮಾಡಿದ್ದು, ಸೌಂದರ್ಯವನ್ನು ಇಮ್ಮಡಿಗೊಳಿಸಿತ್ತು.