ಬೆಂಗಳೂರು; ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ: ಚಾಪ್ಟರ್ 1’ ಟ್ರೈಲರ್ ಬಿಡುಗಡೆ ಕಂಡಿದ್ದು, ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ. ಕನ್ನಡ ಸೇರಿ 7 ಭಾಷೆಗಳಲ್ಲಿ ಅ.2ಕ್ಕೆ ಸಿನಿಮಾ ವಿಶ್ವಾದ್ಯಂತ ತೆರೆಕಾಣಲಿದೆ. ಇನ್ನೂ ಇದೇ ಸಂದರ್ಭದಲ್ಲಿ ಚಿತ್ರತಂಡ ಮುಂಗಡ ಟಿಕೆಟ್ ಬುಕ್ಕಿಂಗ್ ಘೋಷಿಸಿ, ಅಭಿಮಾನಿಗಳಿಗಾಗಿ ಗುಡ್ನ್ಯೂಸ್ ನೀಡಿದೆ.
ಇದನ್ನೂ ಓದಿ: ತೂಕ ಇಳಿಸಿ, ಫಿಟ್ ಆಗಿದ್ರು ಆಯ್ಕೆಯಿಂದ ಹೊರಗೆ! ಟೆಸ್ಟ್ ಸರಣಿಯಿಂದ ಸರ್ಫರಾಜ್ ಕೈಬಿಟ್ಟ ಬಗ್ಗೆ BCCI ಸ್ಪಷ್ಟನೆ
‘ಕಾಂತಾರ ಅಧ್ಯಾಯ 1’ (ಸೆಪ್ಟೆಂಬರ್ 22) ಬಿಡುಗಡೆಯಾದ ಟ್ರೇಲರ್‌ಗೆ ಅನಿರೀಕ್ಷಿತ ಪ್ರತಿಕ್ರಿಯೆ ಸಿಕ್ಕಿದೆ. ‘ಕಾಂತಾರ ಅಧ್ಯಾಯ 1’ ಚಿತ್ರದ ಟ್ರೇಲರ್ ಬಿಡುಗಡೆಯಾದ ಬಳಿಕ ಪತ್ರಿಕಾಗೋಷ್ಠಿ ನಡೆಯಿತು. ನಾಯಕ ಮತ್ತು ನಿರ್ದೇಶಕ ರಿಷಭ್ ಶೆಟ್ಟಿ ಸೇರಿದಂತೆ ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಿನಿಮಾ ಬಗೆಗಿನ ತಮ್ಮ ಅಭಿಪ್ರಾಯಗಳನ್ನು ಹೊರಹಾಕಿದ್ದರು.
ಇದೇ ಸೆ.26 ರ ಮಧ್ಯಾಹ್ನ 12:29 ರಿಂದ ಕರ್ನಾಟಕದ ಟಿಕೆಟ್ ಅಡ್ವಾನ್ಸ್ ಬುಕ್ಕಿಂಗ್ ಓಪನ್ ಆಗಲಿದೆ ಎಂದು ಹೊಂಬಾಳೆ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಸಿನಿಮಾ ಪ್ರೇಕ್ಷಕರು ಕಾಂತಾರ ನೋಡಲು ಕಾದು ಕುಳಿತ್ತಿದ್ದಾರೆ. ಈ ಸಂದರ್ಭದಲ್ಲಿ ಮುಂಚಿತವಾಗಿ ಟಿಕೆಟ್ ಬುಕಿಂಗ್ ಮಾಡಿಕೊಳ್ಳಬೇಕೆಂಬ ಆಸಕ್ತಿ ಹೊಂದಿದ್ದ ಪ್ರೇಕ್ಷಕರಿಗಾಗಿ ಚಿತ್ರತಂಡ ದಿನಾಂಕದ ಜೊತೆ ಸಮಯವನ್ನು ಸಹ ನಿಗದಿ ಪಡಿಸಿದೆ. ಇನ್ನೂ ಅಡ್ವಾನ್ಸ್ ಬುಕ್ಕಿಂಗ್‌ನಲ್ಲೂ ಸಿನಿಮಾ ದಾಖಲೆ ಸೃಷ್ಟಿಸುವ ನಿರೀಕ್ಷೆಗಳಿವೆ. ಸದ್ಯ ಇದೀಗ ಕರ್ನಾಟಕದ ಅಡ್ವಾನ್ಸ್ ಬುಕ್ಕಿಂಗ್‌ಗೆ ಮಾತ್ರ ದಿನ ಮತ್ತು ಸಮಯ ನಿಗದಿಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಉಳಿದ ರಾಜ್ಯಗಳ ಬಗ್ಗೆ ಅಪ್ಡೇಟ್ ಸಿಗಲಿದೆ.
ಇದನ್ನೂ ಓದಿ: Chanakya Niti: ಈ 3 ರೀತಿಯ ಜನರು ಜೀವನದಲ್ಲಿ ಸದಾ ಸಂತೋಷವನ್ನು ಅನುಭವಿಸುತ್ತಾರೆ, ಬಡತನ ಇವರ ಹತ್ತಿರವು ಸುಳಿಯುವುದಿಲ್ಲ..!
(ಏಜೆನ್ಸೀಸ್)
ರಿಷಭ್ ಜೊತೆ ಅನಿರುದ್ಧ್ ಮಹೇಶ್ ಮತ್ತು ಶನಿಲ್ ಗುರು ಸಹ ಚಿತ್ರಕತೆ ಬರೆದಿದ್ದಾರೆ. ರಿಷಬ್ ಜೊತೆಗೆ ಜಯರಾಮ್, ಗುಲ್ಶನ್ ದೇವಯ್ಯ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಛಾಯಾಗ್ರಾಹಕ ಅರವಿಂದ್ ಕಶ್ಯಪ್ ಮತ್ತು ಸಂಪಾದಕ ಸುರೇಶ್ ಸಂಕಲನ ಈ ಚಿತ್ರಕ್ಕೆ ವಿಶೇಷ ಮೆರಗು ತಂದಿದೆ. ಕಾಂತರ ಸೀಕ್ವೆಲ್ನಲ್ಲಿ ತಮ್ಮ ಸಂಗೀತದ ಮೂಲಕವೇ ಮನೆ ಮಾತಾಗಿದ್ದ ಅಜನೀಶ್ ಲೋಕನಾಥ್ ಮತ್ತೊಮ್ಮೆ ಮ್ಯೂಸಿಕ್ ಮೂಲಕ ಮೋಡಿ ಮಾಡಲಿದ್ದಾರೆ. ಅಜನೀಶ್ ಮತ್ತು ಕಶ್ಯಪ್ ಇಬ್ಬರೂ ಸಹ ಮೂಲ ಚಿತ್ರದ ಭಾಗವಾಗಿದ್ದರು.