ಬೆಂಗಳೂರು: ಜೀವನ ಸಂಗಾತಿಯನ್ನು ಕಂಡುಕೊಳ್ಳಲು ಆನ್ಲೈನ್ ನೆರವು ಹೋಗುವುದು ಸರ್ವೇಸಾಮಾನ್ಯ ಸಂಗತಿ. ಇದೊಂದು ಪರಿಣಾಮಕಾರಿ ಮಾರ್ಗವಾದರೂ ಸುರಕ್ಷತೆಯ ದೃಷ್ಟಿಯಿಂದ ಇದರಲ್ಲಿ ಸಾಕಷ್ಟು ರಿಸ್ಕ್ ಕೂಡ ಇದೆ. ಆದರೆ ತಮ್ಮ ಸೈಟ್/ಆ್ಯಪ್ ಮೂಲಕ ಅತ್ಯಂತ ಸುರಕ್ಷಿತವಾಗಿ ಯಾವುದೇ ಅಭದ್ರತೆಯ ಚಿಂತೆ ಇಲ್ಲದೆ ಸಂಗಾತಿಯನ್ನು ಕಂಡುಕೊಳ್ಳಬಹುದು ಎಂಬುದಾಗಿ ಮ್ಯಾಟ್ರಿಮೊನಿ.ಕಾಮ್ನ ಭಾಗವಾಗಿರುವ ಕನ್ನಡ ಮ್ಯಾಟ್ರಿಮೊನಿ ಭರವಸೆ ನೀಡಿದೆ.
ವಧುವರಾನ್ವೇಷಣೆಯ ಕುರಿತಾಗಿ ಇರುವ ಅಂತರ್ಜಾಲ ತಾಣಗಳ ಪೈಕಿ ಮುಂಚೂಣಿಯಲ್ಲಿ ಇರುವ ಕನ್ನಡ ಮ್ಯಾಟ್ರಿಮೊನಿ, ಕಳೆದ 21 ವರ್ಷಗಳಿಂದ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಹೆಚ್ಚಿನ ಸುರಕ್ಷತೆ ಹಾಗೂ ಭದ್ರತಾ ವೈಶಿಷ್ಟ್ಯತೆಯನ್ನೂ ಅಳವಡಿಸಿಕೊಂಡಿದೆ. ಅದಕ್ಕೆಂದೇ 'ಹೂ ಕ್ಯಾನ್ ಸೀ ಮಿ?' ಎಂಬ ಸೌಲಭ್ಯವನ್ನು ಅಳವಡಿಸಲಾಗಿದ್ದು, ಇದರಲ್ಲಿ ಸದಸ್ಯರು ಮಾತ್ರ ಮಾಹಿತಿಯನ್ನು ನೋಡಬಹುದು ಎಂದು ಸಂಸ್ಥೆ ಹೇಳಿಕೊಂಡಿದೆ.
ಇದನ್ನೂ ಓದಿ: ಭಾರತೀಯರ ಮನೆಯಲ್ಲೇಕೆ ಇಂಥದ್ದೊಂದು ಇರಲು ಸಾಧ್ಯವಿಲ್ಲ?; ಹೀಗೆಂದ ಕೆಲವೇ ಗಂಟೆಗಳಲ್ಲಿ ಸರಸ್ವತಿ ಟ್ರೆಂಡಿಂಗ್
ಇನ್ನೂ ವಿಶಿಷ್ಟವಾದುದೆಂದರೆ, 'ಸೆಕ್ಯೂರ್ ಕನೆಕ್ಟ್ ಆರ್' ವ್ಯವಸ್ಥೆ. ಅಂದರೆ ಮಹಿಳಾ ಸದಸ್ಯರು ತಮ್ಮ ಮೊಬೈಲ್ ಫೋನ್ ಸಂಖ್ಯೆ ಬಹಿರಂಗಪಡಿಸದೆ ನಿರೀಕ್ಷಿತ ಜೋಡಿ ಜತೆ ಕರೆ ಮಾಡಿ ಮಾತನಾಡಬಹುದು. ಜತೆಗೆ ವಿಶಿಷ್ಟವಾದ ವಿಡಿಯೋ ಕಾಲ್ ವ್ಯವಸ್ಥೆ ಕೂಡ ಇದೆ. ಇಲ್ಲಿಯೂ ದೂರವಾಣಿ ಸಂಖ್ಯೆ ವಿನಿಮಯ ಮಾಡಿಕೊಳ್ಳದೆಯೇ ವಿಡಿಯೋ ಕಾಲ್ ಮೂಲಕ ಮಾತನಾಡಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಶೇ. 100 ಐಡಿ ಪರಿಶೀಲಿಸಲ್ಪಟ್ಟ ಮಾಹಿತಿಗಳನ್ನು ನೀಡುವ ಸದಸ್ಯತ್ವ ಸೇವೆ ಕೂಡ ಲಭ್ಯವಿದೆ ಎಂದು ಕನ್ನಡ ಮ್ಯಾಟ್ರಿಮೊನಿ ಹೇಳಿದೆ.
ಸಂಗಾತಿಯನ್ನು ಆರಿಸಿಕೊಳ್ಳಲು ನೆರವಾಗುವ ಕನ್ನಡ ಮ್ಯಾಟ್ರಿಮೊನಿಯಲ್ಲಿ ಚಾಟ್, ಆಡಿಯೋ, ವಿಡಿಯೋ ಕರೆ ಮೂಲಕ ಹೊಂದಾಣಿಕೆ ಸಂಪರ್ಕ ಸಾಧಿಸಬಹುದು. ಶೇ. 100 ಪರಿಶೀಲಿಸಿದ ಸಂಪರ್ಕಗಳನ್ನು ನೀಡುವ ಈ ಸೈಟ್ನಲ್ಲಿ ಉಚಿತವಾಗಿ ಸುಲಭದಲ್ಲಿ ಮತ್ತು ಕೆಲವೇ ನಿಮಿಷಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು.
ಬೆಂಗಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ವಿಜಯಪುರ, ತುಮಕೂರು, ಬಳ್ಳಾರಿ, ಕಲಬುರಗಿ ಹಾಗೂ ಹಾಸನ ಜಿಲ್ಲೆಗಳಿಂದ ಹೆಚ್ಚಿನ ಜೋಡಿಗಳು ಲಭ್ಯ ಇವೆ. ಅಲ್ಲದೆ ಹವ್ಯಾಸ, ಶಿಕ್ಷಣ, ಜೀವನಶೈಲಿ, ಉದ್ಯೋಗ ಇತ್ಯಾದಿ ವರ್ಗಗಳ ಮೂಲಕ ಆಯ್ಕೆ ಮಾಡಿಕೊಳ್ಳುವ ಅವಕಾಶವೂ ಇದೆ. ಲಿಂಗಾಯಿತ, ಒಕ್ಕಲಿಗ, ಬ್ರಾಹ್ಮಣ, ಕುರುಬ, ಬಂಟ್ಸ್, ಗಾಣಿಗ, ರೆಡ್ಡಿ, ವಿಶ್ವಕರ್ಮ ಸೇರಿ ಎಲ್ಲ ಜಾತಿಯ ಜೋಡಿಗಳ ಸಂಪರ್ಕವೂ ಇಲ್ಲಿ ಸಾಧ್ಯವಿದೆ ಎಂದು ಮ್ಯಾಟ್ರಿಮೊನಿ ಮಾಹಿತಿ ನೀಡಿದೆ.
ಉಚಿತ ನೋಂದಣಿಗಾಗಿ ಕನ್ನಡ ಮ್ಯಾಟ್ರಿಮೊನಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು. ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಬಳಸಿ.
https://kannadamatrimony.onelink.me/8KDz/bffe26d4
ಹೆಚ್ಚಿನ ಮಾಹಿತಿಗೆ 7538 806 555 ನಂಬರ್ ಸಂಪರ್ಕಿಸಬಹುದು.