ಕಾರ್ಯನಿರತ ಪತ್ರಕರ್ತರ ಸಂಘದ ದತ್ತಿ ಪ್ರಶಸ್ತಿ: ವಿಜಯವಾಣಿಯ ಎನ್.ಡಿ.ಶಾಂತಕುಮಾರ ಸೇರಿ 18 ಮಂದಿ ಆಯ್ಕೆ

vijayavani
Published on

ಶಿವಮೊಗ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2019ನೇ ಸಾಲಿನ ರಾಜ್ಯಮಟ್ಟದ ವಾರ್ಷಿಕ ದತ್ತಿ ನಿಧಿ ಪ್ರಶಸ್ತಿ ಪ್ರಕಟಿಸಲಾಗಿದ್ದು, ‘ವಿಜಯವಾಣಿ’ ಪತ್ರಿಕೆಯ ಶಿವಮೊಗ್ಗದ ಸ್ಥಾನಿಕ ಸಂಪಾದಕ ಎನ್.ಡಿ.ಶಾಂತಕುಮಾರ, ಹಿರಿಯ ಪತ್ರಕರ್ತರಾದ ರವಿ ಹೆಗಡೆ, ಎಸ್.ಕೆ.ಶೇಷಚಂದ್ರಿಕ, ಬಿ.ಎಂ. ಹನೀಫ್ ಸೇರಿ 18 ಪತ್ರಕರ್ತರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶಿವಮೊಗ್ಗದಲ್ಲಿ ಅ.3ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

15 ಖ್ಯಾತ ಪತ್ರಕರ್ತರ ಹೆಸರಿನಲ್ಲಿ ಸ್ಥಾಪಿಸಲ್ಪಟ್ಟ ದತ್ತಿ ಪ್ರಶಸ್ತಿ ಜತೆಗೆ ಪತ್ರಕರ್ತರ ಸಂಘದಿಂದ ನಾಲ್ವರಿಗೆ ವಿಶೇಷ ಪ್ರಶಸ್ತಿ ನೀಡಲಾಗುತ್ತಿದೆ. ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಪ್ರಶಸ್ತಿ ಪ್ರದಾನ ಸಮಾರಂಭದ ಆತಿಥ್ಯ ವಹಿಸಿಕೊಂಡಿದೆ. ಅ.3ರ ಸಂಜೆ 5ಕ್ಕೆ ಕಂಟ್ರಿ ಕ್ಲಬ್​ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಶಿವಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಯಾರಿಗೆ ಯಾವ ಪ್ರಶಸ್ತಿ

ಡಿವಿಜಿ ಪ್ರಶಸ್ತಿ: ರವಿ ಹೆಗಡೆ ಸಂಪಾದಕರು, ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್

ಎಂ.ನಾಗೇಂದ್ರ ರಾವ್ ಪ್ರಶಸ್ತಿ: ಎನ್.ಡಿ.ಶಾಂತಕುಮಾರ ಸ್ಥಾನಿಕ ಸಂಪಾದಕ, ವಿಜಯವಾಣಿ, ಶಿವಮೊಗ್ಗ

ಎಚ್.ಎಸ್.ರಂಗಸ್ವಾಮಿ: ಪಿ.ಸುನೀಲ್​ಕುಮಾರ್ ಸಂಪಾದಕರು, ಸಿಟಿ ಹೈಲೈಟ್ಸ್, ಬೆಂಗಳೂರು

ಮಿಂಚು ಶ್ರೀನಿವಾಸ್ ಪ್ರಶಸ್ತಿ: ರಾಮಸ್ವಾಮಿ ಹುಲಕೋಡು ವಿಜಯಕರ್ನಾಟಕ

ಎಚ್.ಎಸ್.ದೊರೆಸ್ವಾಮಿ: ಬಿ.ಎಂ.ಹನೀಫ್ ಪ್ರಜಾವಾಣಿ

ಗೊಮ್ಮಟ ಮಾಧ್ಯಮ: ಎಸ್.ಎನ್.ಅಶೋಕಕುಮಾರ್ ಸಂಪಾದಕರು, ಗೊಮ್ಮಟವಾಣಿ

ಪಾಟೀಲ್ ಪುಟ್ಟಪ್ಪ: ಎಸ್.ಕೆ.ಶೇಷಚಂದ್ರಿಕ ಹಿರಿಯ ಪತ್ರಕರ್ತ

ಎಸ್.ವಿ.ಜಯಶೀಲ ರಾವ್: ಅ.ಚ.ಶಿವಣ್ಣ ಹಿರಿಯ ಪತ್ರಕರ್ತ

ಪಿ.ಆರ್.ರಾಮಯ್ಯ: ಯು.ಎಸ್.ಶೆಣೈ ಸಂಪಾದಕರು, ಕುಂದಪ್ರಭ

ಗರುಡನಗಿರಿ ನಾಗರಾಜ್: ಕೆ.ಆರ್.ಮಂಜುನಾಥ್ ಸಂಪಾದಕರು, ಮಲೆನಾಡ ಮಂದಾರ

ಎಚ್.ಕೆ.ವೀರಣ್ಣ ಗೌಡ: ಕೋಡಿಹೊಸಳ್ಳಿ ರಾಮಣ್ಣ ಹಿರಿಯ ಪತ್ರಕರ್ತ

ಕಿಡಿ ಶೇಷಪ್ಪ: ಕೆ.ಎಂ.ರೇಖಾ ಸಂಪಾದಕರು, ಹೊಸಪೇಟೆ ಟೈಮ್್ಸ

ಪಿ.ರಾಮಯ್ಯ: ರೇವಣ್ಣಸಿದ್ದಯ್ಯ ಮಹಾನುಭವಿಮಠ ಸಂಪಾದಕರು, ಶಿಡ್ಲು ಪತ್ರಿಕೆ

ಯಶೋದಮ್ಮ ಜಿ. ನಾರಾಯಣ: ರಶ್ಮಿ ಬ್ಯೂರೋ ಮುಖ್ಯಸ್ಥೆ, ಪ್ರಜಾವಾಣಿ, ಹುಬ್ಬಳ್ಳಿ

ವಿಶೇಷ ಪ್ರಶಸ್ತಿ ಭಾಜನರು

ಮುನಿವೆಂಕಟೇಗೌಡ ಹಿರಿಯ ಪತ್ರಕರ್ತ, ವಿಜಯವಾಣಿ, ಕೋಲಾರ

ಪ್ರಹ್ಲಾದ ಗುಡಿ ವರದಿಗಾರರು, ಕನ್ನಡ ಪ್ರಭ, ರಾಯಚೂರು

ಪ್ರಕಾಶ್ ರಾಮಜೋಗಿಹಳ್ಳಿ ವಾರ್ತಾಭಾರತಿ, ಬೆಂಗಳೂರು

ಎಂ.ಕೆ.ರಾಘವೇಂದ್ರ ಮೇಗರವಳ್ಳಿ ವಿಜಯಕರ್ನಾಟಕ, ತೀರ್ಥಹಳ್ಳಿ

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ರೂಪಿಸಿರುವ ‘ಸಿಹಿಮೊಗೆ ಮಾಧ್ಯಮ’ ವಿಶೇಷ ಸ್ಮರಣ ಸಂಚಿಕೆಯನ್ನು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಬಿಡುಗಡೆ ಮಾಡುವರು. ಶಿವಮೊಗ್ಗದ ಪತ್ರಿಕಾ ಛಾಯಾಗ್ರಾಹಕರ ಸಹಭಾಗಿತ್ವದಲ್ಲಿ ಆಯೋಜಿಸಿರುವ ವಿಶೇಷ ಛಾಯಾಚಿತ್ರ ಪ್ರದರ್ಶನವನ್ನು ಎಂಎಲ್​ಸಿ ಎಸ್.ರುದ್ರೇಗೌಡ ಉದ್ಘಾಟಿಸುವರು. ಸಚಿವರಾದ ಕೆ.ಎಸ್.ಈಶ್ವರಪ್ಪ ಹಾಗೂ ಆರಗ ಜ್ಞಾನೇಂದ್ರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಆಶಯ ನುಡಿಗಳನ್ನಾಡುವರು. ಶಿವಮೊಗ್ಗ ಜಿಲ್ಲಾ ಸಂಘದ ಅಧ್ಯಕ್ಷ ಕೆ.ವಿ.ಶಿವಕುಮಾರ್ ಅಧ್ಯಕ್ಷತೆ ವಹಿಸುವರು. ಮಾಧ್ಯಮ ಅಕಾಡೆಮಿ ಸದಸ್ಯ ಗೋಪಾಲ್ ಎಸ್. ಯಡಗೆರೆ, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಏಷ್ಯಾ ವಿಭಾಗದ ಸಂಚಾಲಕ ಎಚ್.ಬಿ.ಮದನ ಗೌಡ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಎನ್.ರವಿಕುಮಾರ್ ಟೆಲೆಕ್ಸ್, ಜಿಲ್ಲೆಯ ಶಾಸಕರು, ನಿಗಮ ಮಂಡಳಿ ಅಧ್ಯಕ್ಷರು ಅತಿಥಿಗಳಾಗಿ ಭಾಗವಹಿಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net