ಮುಂಬೈ: ಸಹೋದರ ಮತ್ತು ಸಹೋದರಿಯರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವ ರಕ್ಷಾಬಂಧನ ಹಬ್ಬವನ್ನು ದೇಶದೆಲ್ಲೆಡೆ ಸೋಮವಾರ ಸಂಭ್ರಮದಿಂದ ಆಚರಿಸಲಾಗಿದ್ದು, ಬಾಲಿವುಡ್ ಸೆಲೆಬ್ರಿಟಿಗಳು ನಂಬಿಕೆ ಮತ್ತು ಪ್ರೀತಿಯಿಂದ ಆಚರಿಸುತ್ತಿದ್ದಾರೆ. ಹಲವು ನಟಿಯರು ವೀಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಟ್ರೆಂಡ್ ಆಗಿವೆ.
ಇದನ್ನೂ ಓದಿ: ‘ಮೊದಲು ನಿಮ್ಮ ಹೆಂಡ್ತಿಗೆ ಕ್ಷಮೆಯಾಚಿಸಿ’, ವೈದ್ಯೆ ಅತ್ಯಾಚಾರ ಪ್ರಕರಣದ ಪೋಸ್ಟ್ ಮಾಡಿದ್ದಕ್ಕೆ ಪಾಕ್ ನಟನಿಗೆ ಟ್ರೋಲ್!
ಬಾಲಿವುಡ್ ನಟಿ, ಸಂಸದೆ ಕಂಗನಾ ರನೌತ್ ತನ್ನ ಸಹೋದರ ವರುಣ್ ಗೆ ರಾಕಿ ಕಟ್ಟುತ್ತಿರುವುದನ್ನು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಅವರು ಇದೇ ಸಂದರ್ಭದಲ್ಲಿ ಎಲ್ಲಾ ಸಹೋದರ ಸಹೋದರಿಯರಿಗೆ ರಕ್ಷಾಬಂಧನದ ಶುಭಾಶಯ ಕೋರಿದ್ದಾರೆ. ಚಿತ್ರದ ಮೇಲೆ ಬಾಲಿವುಡ್ ಹಾಡು 'ಬೆಹನಾ ನೇ ಭಾಯಿ ಕಿ ಕಲೈ ಪೆ ಪ್ಯಾರ್ ಬಂಧ ಹೈ' ಅನ್ನು ಹಾಕಿದ್ದಾರೆ.
ಮತ್ತೊಬ್ಬ ತಾರೆ ತಮನ್ನಾ ಭಾಟಿಯಾ ತನ್ನ ಸಹೋದರನೊಂದಿಗಿನ ಸುಂದರವಾದ ಹಳೆಯ ಚಿತ್ರವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಗಳೊಂದಿಗೆ ತಮನ್ನಾ, 'ಎಂದೆಂದಿಗೂ ನನ್ನ ಉತ್ತಮ ಸಹೋದರನಿಗೆ ರಕ್ಷಾಬಂಧನದ ಶುಭಾಶಯಗಳು'. ಎಂದು ಬರೆದಿದ್ದಾರೆ.
ಮತ್ತೋರ್ವ ನಟಿ ಭೂಮಿ ಪೆಡ್ನೇಕರ್ ಸಹ ತನ್ನ ಸಹೋದರಿ ಸಮೀಕ್ಷಾ ಪೆಡ್ನೇಕರ್ ಅವರೊಂದಿಗೆ ರಕ್ಷಾ ಬಂಧನ ಹಬ್ಬವನ್ನು ಆಚರಿಸಿದ್ದಾರೆ. ಚಿತ್ರದಲ್ಲಿ ಭೂಮಿ ತನ್ನ ತಂಗಿಗೆ ರಾಖಿ ಕಟ್ಟುತ್ತಿರುವುದನ್ನು ಕಾಣಬಹುದು. ಅಲ್ಲದೆ, ಎರಡನೇ ಚಿತ್ರದಲ್ಲಿ, ಭೂಮಿ ತನ್ನ ಸಹೋದರಿಗಾಗಿ ದೀರ್ಘ ಟಿಪ್ಪಣಿಯನ್ನು ಬರೆದಿದ್ದಾರೆ.