ನ್ಯೂಸ್

'ನೀವೇ ಅಶ್ಲೀಲ ಜನ' ಎಂದಿದ್ದೇಕೆ ಕಂಗನಾ ರನೌತ್?

ನವದೆಹಲಿ: ಪ್ರಧಾನಿ ಮೋದಿಯವರ ಲಕ್ಷದ್ವೀಪ ಭೇಟಿಯನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ಮಾಲ್ಡೀವ್ಸ್ ಸಚಿವರನ್ನು 'ನೀವು ಅಶ್ಲೀಲ ಜನರು' ಎಂದು ಕಂಗನಾ ರನೌತ್ ಕರೆದಿದ್ದಾರೆ.

ಭಾರತ ಮತ್ತು ಪ್ರಧಾನಿ ಮೋದಿಯವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವುದಕ್ಕೆ 'ನಾಚಿಕೆಯಾಗುತ್ತಿದೆ...' ಎಂದು ಮಾಲ್ಡೀವ್ಸ್ ಸಚಿವರನ್ನು ಕಂಗನಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಮಾಲ್ಡೀವ್ಸ್ ರಾಜಕಾರಣಿ ಜಾಹಿದ್ ರಮೀಜ್, ಪ್ರಧಾನಿ ನರೇಂದ್ರ ಮೋದಿಯವರ ಲಕ್ಷದ್ವೀಪ ಭೇಟಿಯನ್ನು ಲೇವಡಿ ಮಾಡಿದ್ದರು. ಇದಾದ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಕೋಲಾಹಲ ಉಂಟಾಗಿತ್ತು. ಇದಕ್ಕೆ ಕಂಗನಾ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ದ್ವೇಷಪೂರಿತ ಕಾಮೆಂಟ್‌ಗಳಿಗಾಗಿಮಾಲ್ಡೀವ್ಸ್​ ಸಚಿವರನ್ನು ಟೀಕಿಸಿದದ್ದಾರೆ. ಅಷ್ಟೇ ಅಲ್ಲ, "ಅಶ್ಲೀಲ ಜನಾಂಗೀಯ" ಎಂದು ಕರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾನುವಾರ, ಕಂಗನಾ ರಣಾವತ್ ಅವರು ತಮ್ಮ ಟ್ವಿಟರ್‌ನಲ್ಲಿ, ಮಾಲ್ಡೀವಿಯನ್ ರಾಜಕಾರಣಿಯ ಟ್ವೀಟ್ ಅನ್ನು ಮರುಹಂಚಿಕೊಳ್ಳುತ್ತಾ, ಪ್ರಧಾನಿ ಮೋದಿಯವರ ಲಕ್ಷದ್ವೀಪ ಭೇಟಿಯ ಕುರಿತು ಅವರ ಕಾಮೆಂಟ್‌ಗಳಿಗಾಗಿ ಅವರನ್ನು ದೂಷಿಸುವ ದೀರ್ಘ ಟಿಪ್ಪಣಿಯನ್ನು ಬರೆದಿದ್ದಾರೆ. "ವಾಸನೆ? ಶಾಶ್ವತ ವಾಸನೆ?? ಏನು!!! ಲಕ್ಷದ್ವೀಪಗಳಲ್ಲಿ ಮುಸ್ಲಿಂ ಜನಸಂಖ್ಯೆಯ 98 ಪ್ರತಿಶತವನ್ನು ಒಳಗೊಂಡಿದೆ. ಅದೇ ರೀತಿ ಮಾಲ್ಡೀವ್ಸ್‌ನ ಈ ಪ್ರಮುಖ ಸಾರ್ವಜನಿಕ ವ್ಯಕ್ತಿ ಸಹ ಮುಸ್ಲಿಂ ಆಗಿದ್ದು, ಲಕ್ಷದ್ವೀಪದ ಜನರನ್ನು ನಾರುವ ಮತ್ತು ವಾಸನೆ ಬೀರುವ ಭಾಗದವರು ಎಂದು ಕರೆಯುತ್ತಾರೆ. ಮಾಲ್ಡೀವ್ಸ್​ನ ಈ ಮಂದಿ ಕೀಳು ಮಟ್ಟದ ತಿಳಿವಳಿಕೆಯಿಲ್ಲದ ಎಂದು ಜರೆದಿದ್ದಾರೆ.