More

    ಪ್ರಧಾನಿ ಮೋದಿ ನಿಂದಿಸಿದ ಮೂವರು ಮಾಲ್ಡೀವ್ಸ್ ಸಚಿವರು ಸಸ್ಪೆಂಡ್!

    ಮಾಲೇ(ಮಾಲ್ಡೀವ್ಸ್): ಲಕ್ಷದ್ವೀಪಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರವಾಸೋದ್ಯಮ ಉತ್ತೇಜಿಸಿದ ಬೆನ್ನಲ್ಲೇ ಭಾರತ ಹಾಗೂ ಮೋದಿ ವಿರುದ್ಧ ಮಾಲ್ಡೀವ್ಸ್ ಸಚಿವರು, ಕೆಲ ನಾಯಕರು ಹರಿಹಾಯ್ದಿದ್ದಕ್ಕೆ ಭಾರತದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದರ ಜತಗೆ ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ ಕೂಡ ಆರಂಭಗೊಂಡಿತ್ತು. ವಿಶ್ವದ ಇತರ ರಾಷ್ಟ್ರಗಳ ನಾಯಕರು ಮಾಲ್ಡೀವ್ಸ್ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಈ ಎಲ್ಲಾ ಬೆಳವಣಿಗೆಗಳಿಗೆ ಬೆಚ್ಚಿ ಬಿದ್ದ ಮಾಲ್ಡೀವ್ಸ್ ಸರ್ಕಾರ ಮೋದಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಸಚಿವರನ್ನು ಸಂಪುಟದಿಂದ ವಜಾ ಮಾಡಿದೆ.

    ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಬಿಜೆಪಿ ಸಜ್ಜು: ಬಿಹಾರದಿಂದ ಪ್ರಚಾರಕ್ಕೆ ಪ್ರಧಾನಿ ಮೋದಿ ಚಾಲನೆ

    ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರ ಹೇಳಿಕೆ ಹಾಗೂ ಅಭಿಪ್ರಾಯವನ್ನು ಸರ್ಕಾರ ಒಪ್ಪುವುದಿಲ್ಲ. ಹೀಗಾಗಿ ಈ ಕ್ಷಣದಿಂದಲೇ ಅಂತಹ ಸಚಿವರನ್ನು ತಮ್ಮ ಸ್ಥಾನದಿಂದ ವಜಾ ಮಾಡಲಾಗಿದೆ ಎಂದು ಮಾಲ್ಡೀವ್ಸ್ ವಿದೇಶಾಂಗ ಸಚಿವಾಲಯ ಭಾನುವಾರ ಪ್ರಕಟಣೆ ಹೊರಡಿಸಿದೆ. ಆದರೆ ಈ ಪ್ರಕಟಣೆಯಲ್ಲಿ ಯಾವ ಸಚಿವರನ್ನು ವಜಾ ಮಾಡಲಾಗಿದೆ ಎಂಬ ಮಾಹಿತಿ ನೀಡಿಲ್ಲ.

    ಸಚಿವರಾದ ಮರಿಯಾಮ್ ಶಿಯುನಾ, ಮಾಲ್ಶಾ ಹಾಗೂ ಹಸನ್ ಜಿಹಾನ್ ಅವರನ್ನ ಸಂಪಟದಿಂದ ವಜಾ ಮಾಡಲಾಗಿದೆ. ಅಷ್ಟೇ ಅಲ್ಲ, ಇಂತಹ ಹೇಳಿಕೆಯಿಂದ ದ್ವಿಪಕ್ಷೀಯ ಸಂಬಂಧದ ಮೇಲೆ ತೀವ್ರ ದುಷ್ಪರಿಣಾಮ ಬೀರಲಿದೆ. ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ದೇಶವಾಗಿರುವುದರಿಂದ ಯಾರೇ ಆದರೂ ಹೇಳಿಕೆ ಕೊಡುವ ಮುನ್ನ ಎಚ್ಚರಿಕೆ ವಹಿಸಬೇಕು ಎಂಬ ಖಡಕ್ ಸಂದೇಶವನ್ನು ಸರ್ಕಾರ ಸಚವರಿಗೆ ರವಾನಿಸಿದೆ ಎಂದು ತಿಳಿದುಬಂದಿದೆ.

    ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದ್ದರು. ಇದು ಪುಟ್ಟ ದ್ವೀಪ ರಾಷ್ಟ್ರ ಮಾಲ್ಡೀವ್ಸ್ ಕೆಂಗಣ್ಣಿಗೆ ಗುರಿಯಾಗಿತ್ತು. ಆ ದೇಶದ ಸಚಿವರು ಭಾರತ ಎಂದಿಗೂ ಮಾಲ್ಡೀವ್ಸ್ ಬೀಚ್ ಪ್ರವಾಸೋದ್ಯಮಕ್ಕೆ ಸ್ಪರ್ಧೆ ನೀಡಲು ಸಾಧ್ಯವಿಲ್ಲ. ಭಾರತಕ್ಕೆ ಆತಿಥ್ಯ ನೀಡಲು ಸಾಧ್ಯವೇ ಇಲ್ಲ. ಭಾರತೀಯರ ರೂಂಗಳು ಗಬ್ಬು ವಾಸನೆಯಿಂದ ಕೂಡಿರುತ್ತವೆ. ಎಲ್ಲೆಲ್ಲೂ ಮೂತ್ರ ವಿಸರ್ಜನೆ ಮಾಡುತ್ತಾರೆ ಎಂದು ನಿಂದನೆ ಮಾಡಿದ್ದರು. ಭಾರತೀಯರ ನಿಂದನೆ, ಪ್ರಧಾನಿ ಮೋದಿ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ ಬೆನ್ನಲ್ಲೇ ಭಾರತದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

    ಮ್ಯಾನ್ಮಾರ್​ನಿರಾಶ್ರಿತರಿಗೆ ಮುಂದುವರಿಯಲಿದೆ ನೆರವು : ಸಿಎಂ ಲಾಲ್ದುಹೋಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts