ನ್ಯೂಸ್

ತಾಪ್ಸೀ ಪನ್ನು ಬಿ ಗ್ರೇಡ್​ ನಟಿ; ಕಂಗನಾ ಹೇಳಿಕೆಗೆ ಥಪ್ಪಡ್ ನಟಿಯ ಪ್ರತ್ಯುತ್ತರ...

ಇತ್ತೀಚೆಗೆ ಕಂಗನಾ ರಣಾವತ್​ ನೆಪೋಟಿಸಂ, ಸುಶಾಂತ್​ ಸಿಂಗ್​ ಆತ್ಮಹತ್ಯೆ ವಿಚಾರವಾಗಿ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಬಾಲಿವುಡ್​ನ ಘಟಾನುಘಟಿಗಳ ಬೆವರಿಳಿಸುತ್ತಿದ್ದಾರೆ. ನಿತ್ಯ ಒಂದಾದರೊಂದು ಹೇಳಿಕೆ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ತಾಪ್ಸೀ ಪನ್ನು ವಿರುದ್ಧ ಕಂಗನಾ ವಾಗ್ದಾಳಿ ಮಾಡಿದ್ದಾರೆ. ನೇರವಾಗಿ ತಾಪ್ಸೀ ಒಬ್ಬ ಬಿ ಗ್ರೇಡ್​ ನಟಿ ಎಂದಿದ್ದಾರೆ!

ತಾಪ್ಸೀ ಪನ್ನು ಮತ್ತು ಸ್ವರಾ ಭಾಸ್ಕರಾ ಬಗ್ಗೆ ಮಾತನಾಡಿರುವ ಕಂಗನಾ, ‘ ಒಂದು ವೇಳೆ ತಾಪ್ಸೀ ಕರಣ್​ ಅವರನ್ನು ಇಷ್ಟಪಡುತ್ತಾಳೆ ಎಂದಾದರೆ, ಯಾಕೆ ಇನ್ನೂ ಬಿ ಗ್ರೆಡ್​ ಲೆವೆಲ್​ ನಟಿಯಾಗಿದ್ದಾರೆ. ಸ್ವರಾ ಭಾಸ್ಕರಾ ಸಹಿತ ಯಾಕೆ ಇನ್ನೂ ಅಲ್ಲೇ ಇದ್ದಾರೆ. ಆಲಿಯಾ ಭಟ್​ ಗಿಂತಲೂ ಅನನ್ಯಾ ಪಾಂಡೆಗಿಂತಲೂ ಈ ಇಬ್ಬರು ನೋಡಲು ಸುಂದರವಾಗಿದ್ದಾರೆ. ಅತ್ಯುತ್ತಮ ನಟಿಯರೆನಿಸಿಕೊಂಡಿದ್ದಾರೆ. ಇವರ್ಯಾರು ಕರಣ್​ ಜೋಹರ್​ ವಿರುದ್ಧ ಮಾತನಾಡುವುದಿಲ್ಲ. ಏಕೆಂದರೆ ಇವರೆಲ್ಲ ಕರಣ್​ ಕ್ಯಾಂಪಿನವರು’ ಎಂದು ಹೇಳಿಕೆ ನೀಡಿದ್ದಾರೆ.

ಇತ್ತ ಕಂಗನಾ ಹೀಗೆ ಹೇಳಿಕೆ ನೀಡುತ್ತಿದ್ದಂತೆ, ತಾಪ್ಸೀ ಪನ್ನು ಸಹ ಟ್ವಿಟರ್​ನಲ್ಲಿ ಪರೋಕ್ಷವಾಗಿ ಕಂಗನಾಗೆ ಟಾಂಗ್​ ಕೊಟ್ಟಿದ್ದಾರೆ. ‘ಈಗ 10 ಮತ್ತು 12 ಕ್ಲಾಸ್​ ರಿಸಲ್ಟ್​ ಬಂದಿದೆ. ನಮ್ಮ ಫಲಿತಾಂಶವೂ ಬಂದಿದೆ. ಇಷ್ಟು ದಿನ ನಂಬರ್​ ಸಿಸ್ಟಮ್ ಮೇಲೆ ಮೌಲ್ಯವನ್ನು ಅಳೆಯಲಾಗುತ್ತಿತ್ತು.. ಇದೀಗ ಗ್ರೇಡ್​ ಸಿಸ್ಟಮ್​ ಮೂಲಕ ಅಳೆಯಲಾಗುತ್ತಿದೆ’ ಎಂದಿದ್ದಾರೆ ಕಂಗನಾ.

ಇದೇ ಮೊದಲು ಕಂಗನಾ ಮತ್ತು ತಾಪ್ಸೀ ನಡುವೆ ಈ ರೀತಿಯ ಆರೋಪ ಪ್ರತ್ಯಾರೋಪ ನಡೆದಿಲ್ಲ. ಈ ಮೊದಲೂ ಹಲವು ಬಾರಿ ಸೋಷಿಯಲ್​ ಮೀಡಿಯಾದಲ್ಲಿ ಮಾತಿನ ಮೂಲಕವೇ ಇಬ್ಬರು ಚಾಟಿ ಬಿಡಿದ್ದರು. (ಏಜೆನ್ಸೀಸ್​)