ಚೆನ್ನೈ: ಕಮಲ್ ಹಾಸನ್ ಅವರ ಮುಂಬರುವ ಚಿತ್ರ 'ಇಂಡಿಯನ್ 2' ಗೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್ಸಿ) ಯು/ಎ ಪ್ರಮಾಣಪತ್ರವನ್ನು ನೀಡಿದೆ. ಶಂಕರ್ ನಿರ್ದೇಶನದ ಈ ಚಿತ್ರ ಜುಲೈ 12 ರಂದು ಚಿತ್ರಮಂದಿರಗಳಿಗೆ ಬರಲಿದೆ.
ಇದನ್ನೂ ಓದಿ: ಸೋನುಸೂದ್ಗೆ ಆಫರ್ ಕೊಟ್ಟ ಸಣ್ಣ ಹೋಟೆಲ್ ಮಾಲಕಿ ಕುಮಾರಿ! ಬಾಲಿವುಡ್ ನಟನ ಸರಳತೆಗೆ ನೆಟ್ಟಿಗರು ಫಿದಾ!
ಈ ಚಿತ್ರವು ಸೆನ್ಸಾರ್ ಮಂಡಳಿಯು ಸೂಚಿಸಿದ ಕೆಲವು ಮಾರ್ಪಾಡುಗಳು ಮತ್ತು ರನ್‌ಟೈಮ್ ಮಾರ್ಪಾಡುಗಳೊಂದಿಗೆ ಪ್ರೇಕ್ಷಕರ ಎದುರು ಬರಲಿದೆ.
ಮಂಡಳಿಯ ಸಲಹೆಗಳ ಪ್ರಕಾರ, 'ಇಂಡಿಯನ್ 2' ನಿರ್ಮಾಪಕರು ಚಿತ್ರದಲ್ಲಿನ ಕೆಲವು ವಿವಾದಾತ್ಮಕ ಪದಗಳನ್ನು ಮ್ಯೂಟ್ ಮಾಡಬೇಕಾಗುತ್ತದೆ. ಇದಲ್ಲದೆ, ನಿರ್ದಿಷ್ಟ ದೃಶ್ಯದಿಂದ 'ಲಂಚ ಮಾರುಕಟ್ಟೆ' ಎಂಬ ಲೇಬಲ್ ಅನ್ನು ಬದಲಿಸಲು ಮಂಡಳಿಯು ಸೂಚಿಸಿದೆ.
ಚಿತ್ರದ ರನ್ಟೈಮ್ ಮೂರು ಗಂಟೆ ನಾಲ್ಕು ಸೆಕೆಂಡುಗಳು. ಶಂಕರ್ ಅವರ ಚಿತ್ರಗಳು ಯಾವಾಗಲೂ ಮೂರು ಗಂಟೆಯ ಅವಧಿಯಲ್ಲಿರುತ್ತವೆ. ಇದಕ್ಕೆ 'ಇಂಡಿಯನ್ 2' ಸಹ ಭಿನ್ನವಾಗಿಲ್ಲ. ಇತ್ತೀಚಿನ ಚಿತ್ರಗಳು 'ಅನಿಮಲ್', 'ಸಲಾರ್' ಮತ್ತು 'ಕಲ್ಕಿ 2898 ಎಡಿ' ಮೂರು ಗಂಟೆಗೂ ಹೆಚ್ಚು ರನ್‌ಟೈಮ್‌ನೊಂದಿಗೆ ಬಿಡುಗಡೆಯಾಗಿವೆ. ಇದೀಗ ಈ ಪಟ್ಟಿಗೆ 'ಇಂಡಿಯನ್ 2' ಸೇರ್ಪಡೆಯಾಗಿದೆ. ಆ ಎಲ್ಲಾ ಸಿನಿಮಾಗಳು ಯಶಸ್ವಿಯಾಗಿದ್ದು, ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಕಲೆಕ್ಷನ್ ತಂದುಕೊಟ್ಟಿವೆ. ಅದೇ ರೀತಿ ಇಂಡಿಯನ್-2 ಮೇಲೆ ಭಾರಿ ನಿರೀಕ್ಷೆ ಹೊಂದಲಾಗಿದೆ.
'ಇಂಡಿಯನ್ 2' ಜಾಗೃತಿ ಮೂಡಿಸುವ ಚಿತ್ರವಾಗಿದ್ದು, ಕಮಲ್ ಹಾಸನ್ ಅವರಲ್ಲದೆ, ಸಿದ್ಧಾರ್ಥ್, ಎಸ್.ಜೆ.ಸೂರ್ಯ, ರಾಕುಲ್ ಪ್ರೀತ್ ಸಿಂಗ್, ನೆಡುಮುಡಿ ವೇಣು, ವಿವೇಕ್, ಬಾಬಿ ಸಿಂಹ ಮತ್ತು ಪ್ರಿಯಾ ಭವಾನಿ ಶಂಕರ್ ಮುಂತಾದವರು ಅಭಿನಯಿಸಿದ್ದಾರೆ.
ಇನ್ನು ನಿರ್ದೇಶಕ ಶಂಕರ್ ಮತ್ತು ಕಮಲ್ ಹಾಸನ್ 'ಇಂಡಿಯನ್ 3' ಬಿಡುಗಡೆಯನ್ನು ಖಚಿತಪಡಿಸಿದ್ದಾರೆ. ಚಿತ್ರದ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಉಳಿದಿವೆ. ಇತ್ತೀಚಿನ ಸಮಾರಂಭವೊಂದರಲ್ಲಿ ಶಂಕರ್ ಅವರು 'ಇಂಡಿಯನ್ 2' ಬಿಡುಗಡೆಯ ನಂತರ ಪೋಸ್ಟ್-ಪ್ರೊಡಕ್ಷನ್ ಕೆಲಸವನ್ನು ಪ್ರಾರಂಭಿಸುವುದಾಗಿ ಹೇಳಿದರು.
ಲೈಕಾ ಪ್ರೊಡಕ್ಷನ್ಸ್ ಮತ್ತು ರೆಡ್ ಜೈಂಟ್ ಮೂವೀಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಅವರ ಸಂಗೀತ ಸಂಯೋಜನೆ, ಶ್ರೀಕರ್ ಪ್ರಸಾದ್ ಅವರ ಸಂಕಲನ ಮತ್ತು ರವಿವರ್ಮನ್ ಅವರ ಛಾಯಾಗ್ರಹಣವಿದೆ. ಬ್ಲಾಕ್ ಬಸ್ಟರ್ ಹಿಟ್ 'ಇಂಡಿಯನ್' ಚಿತ್ರದ ಸೀಕ್ವೆಲ್ 28 ವರ್ಷಗಳ ನಂತರ ಬಂದಿದೆ.