Just Married Film: "ಜಸ್ಟ್ ಮ್ಯಾರೀಡ್" ಚಿತ್ರದ "ಇದು ಮೊದಲನೇ ಸ್ವಾಗತಾನಾ" ಹಾಡು ಇಂದು ಪ್ರೇಮಿಗಳ ದಿನದಂದೇ ಬಿಡುಗಡೆಗೊಂಡಿದ್ದು, ಹಾಡು ತುಂಬಾ ಚೆನ್ನಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ಈ ಕುರಿತು ಮಾತನಾಡಿರುವ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್, ಫಸ್ಟ್ ಸಾಂಗ್ ಬಹಳ ಚೆನ್ನಾಗಿ ಮೂಡಿಬಂದಿದೆ. ಸಿನಿಮಾ ನೋಡಲು ನಾನು ಕೂಡ ಕಾತುರದಿಂದ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿಶ್ವದ ಮೊದಲ AI ಆಧರಿತ MMG ಗನ್; ಗಡಿ ನುಸುಳು ಕೋರರ ಶೂಟ್ ಮಾಡೋಕೆ ನೀಡುತ್ತೆ ಸಿಗ್ನಲ್…! | AI MMG GUN
ವಿಶ್ವವೇ ಮೆಚ್ಚಿದ "ಕಾಂತಾರ" ಚಿತ್ರ ಸೇರಿದಂತೆ ಸೂಪರ್ ಹಿಟ್ ಚಿತ್ರಗಳಿಗೆ ಸಂಗೀತ ನೀಡಿರುವ ಅಜನೀಶ್ ಲೋಕನಾಥ್ ಅವರ ಆ್ಯಬ್ಸ್ ಸ್ಟುಡಿಯೋಸ್ ಲಾಂಛನದಲ್ಲಿ ಸಿ.ಆರ್ ಬಾಬಿ ಅವರ ಜತೆಗೂಡಿ ನಿರ್ಮಿಸಿರುವ ಹಾಗೂ ಸಿ.ಆರ್.ಬಾಬಿ ನಿರ್ದೇಶಿಸಿರುವ ಮತ್ತು ಬಿಗ್ ಬಾಸ್ ಖ್ಯಾತಿಯ ನಟ ಶೈನ್ ಶೆಟ್ಟಿ ಮತ್ತು ನಟಿ ಅಂಕಿತ ಅಮರ್ ಜೋಡಿಯ "ಜಸ್ಟ್ ಮ್ಯಾರೀಡ್" ಚಿತ್ರಕ್ಕಾಗಿ ಪ್ರೇಮಕವಿ ಕೆ.ಕಲ್ಯಾಣ್ ಬರೆದಿರುವ "ಇದು ಮೊದಲನೇ ಸ್ವಾಗತಾನಾ" ಎಂಬ ಹಾಡು ಪ್ರೇಮಿಗಳ ದಿನದಂದೇ ಬಿಡುಗಡೆಯಾಗಿದೆ.
ಈ ಸುಂದರ ಯುಗಳಗೀತೆಯನ್ನು ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್, "ಇದು ಮೊದಲನೇ ಸ್ವಾಗತನಾ" ಹಾಡು ತುಂಬಾ ಚೆನ್ನಾಗಿದೆ. ಬಾಬಿ ಅವರ ನಿರ್ದೇಶನದಲ್ಲಿ ಹಾಗೂ ಅಜನೀಶ್ ಲೋಕನಾಥ್ ಅವರ ನಿರ್ಮಾಣದಲ್ಲಿ ಮೂಡಿಬಂದಿರುವ "ಜಸ್ಟ್ ಮ್ಯಾರೀಡ್" ಚಿತ್ರದ ಬಿಡುಗಡೆಗೆ ನಾನು ಕಾತುರದಿಂದ ಕಾಯುತ್ತಿದ್ದೇನೆ ಎಂದರು.
"ಇದು ಮೊದಲನೇ ಸ್ವಾಗತಾನಾ" ಹಾಡನ್ನು ಬಿಡುಗಡೆ ಮಾಡಿಕೊಟ್ಟ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಧನ್ಯವಾದ. ಪ್ರೇಮಿಗಳ ದಿನದಂದು ಬಿಡುಗಡೆಯಾದ ಈ ಹಾಡಿನ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆದಿದೆ. ನಾನೇ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದೇನೆ. ಕೆ. ಕಲ್ಯಾಣ್ ಬರೆದು ಅಜನೀಶ್ ಲೋಕನಾಥ್ ಸಂಗೀತ ನೀಡಿ ಹಾಗೂ ಜಸ್ಕರಣ್ ಸಿಂಗ್ ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಹಾಡು ಬಿಡುಗಡೆಯಾದ ತಕ್ಷಣದಿಂದಲೇ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ ಎಂದು ನಿರ್ದೇಶಕಿ ಸಿ.ಆರ್. ಬಾಬಿ" ತಿಳಿಸಿದ್ದಾರೆ.
"ಜಸ್ಟ್ ಮ್ಯಾರೀಡ್" ಆದವರಿಗಂತೂ ನಮ್ಮ ಚಿತ್ರ ಬಹಳ ಹತ್ತಿರವಾಗಲಿದೆ. ಚಿತ್ರತಂಡದ ಸಹಕಾರದಿಂದ ಒಂದೊಳ್ಳೆ ಪ್ರೇಮಕಥೆ ತೆರೆಗೆ ಬರಲು ಸಿದ್ದವಾಗಿದೆ. ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದರು. ಈ ಚಿತ್ರಕ್ಕೆ ನಿರ್ದೇಶಕಿ ಬಾಬಿ ಅವರೇ ಕಥೆ ಬರೆದಿದ್ದಾರೆ. ಚಿತ್ರಕಥೆ ಸಿ.ಆರ್ ಬಾಬಿ ಹಾಗೂ ಧನಂಜಯ್ ರಂಜನ್ ಅವರದು. ರಘು ನಿಡುವಳ್ಳಿ ಈ ಚಿತ್ರದ ಸಂಭಾಷಣೆಕಾರರು. ಪಿ.ಜಿ. ಛಾಯಾಗ್ರಹಣ, ಶ್ರೀಕಾಂತ್ ಮತ್ತು ಅಶಿಕ್ ಕುಸುಗೊಳ್ಳಿ (ಗಣೇಶ ಸಾಂಗ್) ಸಂಕಲನ, ಅಮರ್ ಕಲಾ ನಿರ್ದೇಶನ, ವಿಕ್ರಮ್ ಮೋರ್, ಸಾಹಸ ನಿರ್ದೇಶನ ಹಾಗೂ ಬಾಬಾ ಭಾಸ್ಕರ್, ಶಾಂತಿ ಅರವಿಂದ್ ಅವರ ನೃತ್ಯ ನಿರ್ದೇಶನವಿರುವ "ಜಸ್ಟ್ ಮ್ಯಾರೀಡ್" ಚಿತ್ರದ ಹಾಡುಗಳನ್ನು ಪ್ರಮೋದ್ ಮರವಂತೆ ಮತ್ತು ಧನಂಜಯ್ ಬರೆದಿದ್ದಾರೆ.
ಇದನ್ನೂ ಓದಿ: ಸುಕ್ಷೇತ್ರ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ; ‘ತುಂಬಿದ ಕೊಡ ತುಳುಕಿತಲೇ ಪರಾಕ್’ ದೈವವಾಣಿ ನುಡಿದ ಗೊರವಯ್ಯ | Karnikotsava
ಚಿತ್ರದಲ್ಲಿ ಶೈನ್ ಶೆಟ್ಟಿ, ಅಂಕಿತ ಅಮರ್, ದೇವರಾಜ್, ಅಚ್ಯುತ್ ಕುಮಾರ್, ಮಾಳವಿಕ ಅವಿನಾಶ್, ಅನೂಪ್ ಭಂಡಾರಿ, ಶ್ರುತಿ ಹರಿಹರನ್, ಶ್ರುತಿ ಕೃಷ್ಣ, ಸಾಕ್ಷಿ ಅಗರವಾಲ್, ಶ್ರೀಮಾನ್, ರವಿಶಂಕರ್ ಗೌಡ, ರವಿ ಭಟ್, ವಾಣಿ ಹರಿಕೃಷ್ಣ, ಸಂಗೀತ ಅನಿಲ್, ಕುಮುದಾ, ಜಯರಾಮ್, ವೇದಿಕಾ ಕಾರ್ಕಳ್ ಮುಂತಾದವರ ತಾರಾಗಣವಿದೆ.