ನ್ಯೂಸ್

ರಾಮನಂತೆ ಬಿಲ್ಲನ್ನು ಮುರಿದು ಮದುವೆಯಾದ ವರ; ವೈರಲ್ ಆಯ್ತು ವಿಡಿಯೋ

ಪಟನಾ: ಶ್ರೀ ರಾಮನು ಸೀತಾ ದೇವಿಯ ಸ್ವಯಂವರಕ್ಕೆ ಹೋದಾಗ ಬಿಲ್ಲನ್ನು ಮುರಿದಿರುವ ಕಥೆ ನಿಮಗೆಲ್ಲರಿಗೂ ಗೊತ್ತಿರುತ್ತದೆ. ಇದೀಗ ಅಂತದ್ದೇ ಘಟನೆಯೊಂದು ಬಿಹಾರದಲ್ಲಿ ನಡೆದಿದೆ.

ಬಿಹಾರದ ಸರನ್ ಜಿಲ್ಲೆಯ ಸೋನ್‌ಪುರ ಬ್ಲಾಕ್‌ನ ಸಬಲ್‌ಪುರ ಪೂರ್ವ ಪ್ರದೇಶದಲ್ಲಿ ಇಂತಹ ವಿಶೇಷ ಮದುವೆಯೊಂದು ನಡೆದಿದೆ. ಮದುವೆ ವೇದಿಕೆ ಹತ್ತಿದ ವರ ಮೊದಲು ಶಿವನನ್ನು ಸ್ಮರಿಸಿ, ಅಲ್ಲಿದ್ದ ಬಿಲ್ಲನ್ನು ಮುರಿಯುತ್ತಾನೆ. ನಂತರ ವಧುವನ್ನು ವೇದಿಕೆ ಮೇಲೆ ಕರೆತಂದು ಪರಸ್ಪರ ಮಾಲೆ ಬದಲಾವಣೆ ಮಾಡಿಕೊಳ್ಳಲಾಗುತ್ತದೆ. ಅದಾದ ಮೇಲೆ ಮದುವೆಯ ಎಲ್ಲ ಶಾಸ್ತ್ರಗಳು ನಡೆಯುತ್ತವೆ.

ಈ ಆಧುನಿಕ ಸೀತಾ ಸ್ವಯಂವರ ಎಲ್ಲೆಡೆ ಸದ್ದು ಮಾಡುತ್ತಿದೆ. ಅದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರು ಭಾರೀ ಮೆಚ್ಚುಗೆ ವ್ಯಕ್ತಪಡಿಸಲಾರಂಭಿಸಿದ್ದಾರೆ. (ಏಜೆನ್ಸೀಸ್)