ಸಾಂದರ್ಭಿಕ ಚಿತ್ರ 
ನ್ಯೂಸ್

ನಾಪತ್ತೆಯಾಗಿದ್ದ ಕಲಬುರಗಿಯ ನ್ಯಾಯಾಧೀಶರ ಪತ್ನಿ ಮುಂಬೈನಲ್ಲಿ ಪತ್ತೆ!

ಕಲಬುರಗಿ: ನಿನ್ನೆ ಸಂಜೆ ಕಲಬುರಗಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರ ಪತ್ನಿ ನಾಪತ್ತೆಯಾಗಿದ್ದರು. ಆದರೆ ಇದೀಗ ಅವರು ಮುಂಬೈನಲ್ಲಿ ಪತ್ತೆಯಾಗಿದ್ದು ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಕಲಬುರಗಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಯಮನಪ್ಪ ಬಮ್ಮನಗಿ ಎನ್ನುವವರ ಪತ್ನಿ ಅನೀತಾ ಕಲಬುರಗಿಯ ಜೂಡಿಶಿಯಲ್ ಕ್ವಾಟರ್ಸ್ 5ರಿಂದ ನಿನ್ನೆ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದರು.

ಅನೀತಾ ನಿನ್ನೆ ರಾತ್ರಿ ಮುಂಬೈನಲ್ಲಿ ಪತ್ತೆಯಾಗಿದ್ದು ಪೊಲೀಸರು ನ್ಯಾಯಾಧೀಶರ ಸಂಬಂಧಿಕರಿಗೆ ಅವರನ್ನು ಒಪ್ಪಿಸಿದ್ದಾರೆ. ಅನೀತಾ ಅವರು ಮಾನಸಿಕವಾಗಿ ನೊಂದಿದ್ದಾರೆ ಎನ್ನಲಾಗಿದ್ದು ಈ ಕಾರಣಕ್ಕಾಗಿ ಮನೆ ಬಿಟ್ಟು ತೆರಳಿದ್ದರು ಎನ್ನಲಾಗಿದೆ.

ಕಳೆದ ಕೆಲ ತಿಂಗಳಿನಿಂದ ಮಾನಸಿಕವಾಗಿ ಬಳಲುತ್ತಿರುವ ಅನಿತಾ ಟ್ರೈನ್ ಮೂಲಕ ಮುಂಬೈಗೆ ತೆರಳಿದ್ದರು. ನಾಪತ್ತೆ ಆಗಿದ್ದಾರೆ ಎನ್ನುವ ವಿಚಾರ ಗಮನಕ್ಕೆ ಬರುತ್ತಿದ್ದಂತೆಯೇ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.