More

    ಸಮವಸ್ತ್ರಕ್ಕೆ ಮಹಾರಾಷ್ಟ್ರದ ಸಂಸ್ಥೆಗೆ ಗುತ್ತಿಗೆ ಕೊಟ್ಟಿತೆ ಶಿಕ್ಷಣ ಇಲಾಖೆ? ಕ.ರ.ವೇ. ಪ್ರವೀಣ್ ಶೆಟ್ಟಿ ಆಕ್ರೋಶ…

    ಬೆಂಗಳೂರು: ಪ್ರತಿ ವರ್ಷವೂ ಸರ್ಕಾರಿ ಶಾಲೆಯ ಮಕ್ಕಳಿಗಾಗಿ ಸಮವಸ್ತ್ರ ನೀಡಲಾಗುತ್ತದೆ. ಇದರ ಜವಾಬ್ದಾರಿಯನ್ನು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ವಹಿಸಲಾಗುತ್ತಿತ್ತು. ಆದರೆ ಈ ಬಾರಿ ಮಾತ್ರ ಮಹಾರಾಷ್ಟ್ರದ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ ಎಂದು ಆರೋಪಿಸಿರುವ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್​ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಕುರಿತಾಗಿ ವಿಡಿಯೋ ಮಾಡಿ ಮಾತನಾಡಿರುವ ಕ.ರ.ವೇ. ಪ್ರವೀಣ್ ಶೆಟ್ಟಿ, “ಕರ್ನಾಟಕದ ಮೇಲೆ ಕಾಲು ಕೆರೆದು ಜಗಳ ಮಾಡುವ ಮಹಾರಾಷ್ಟ್ರದವರಿಗೆ ಗುತ್ತಿಗೆ ಯಾಕೆ ? ಸರ್ಕಾರಿ ಶಾಲೆಯ ಮಕ್ಕಳಿಗೆ ಶಿಕ್ಷಣ ಇಲಾಖೆ ಪ್ರತಿವರ್ಷ ಸಮವಸ್ತ್ರ ನೀಡುತ್ತಿತ್ತು. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ಇದನ್ನ ವಹಿಸುತ್ತಿತ್ತು.

    ಆದರೆ ಈ ಬಾರೀ ನಮ್ಮ‌ ನೇಕಾರರಿಗೆ ಅನ್ಯಾಯ ಮಾಡಿದೆ. ಯಾರನ್ನ ಓಲೈಸಲು ಈ ರೀತಿ ಮಹಾರಾಷ್ಟ್ರದವರಿಗೆ ಗುತ್ತಿಗೆ ನೀಡಿದೆ? ಕೂಡಲೇ ಟೆಂಡರ್ ವಾಪಸ್ ಪಡೆಯದೇ ಇದ್ರೇ ಉಗ್ರ ಹೋರಾಟ ಮಾಡುತ್ತೇವೆ. ಯಾವ ಯಾವ ಅಧಿಕಾರಿಗಳು ಹಣ ತಿಂದು ಈ ರೀತಿ ಗುತ್ತಿಗೆ ನೀಡಿದ್ದಾರೆ.? ಬಟ್ಟೆ ತಯಾರಿಸುವ ಕನ್ನಡಿಗರು ಯಾರೂ ಇಲ್ವಾ? ಶಿಕ್ಷಣ ಇಲಾಖೆ ಕನ್ನಡಿಗ ನೇಕಾರರಿಗೆ ಅನ್ಯಾಯ ಮಾಡಿದೆ. ಕೂಡಲೇ ಈ ಬಗ್ಗೆ ಕ್ರಮ ಆಗಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಟ್ವಿಟರ್​ಗೆ ಟಕ್ಕರ್​ ಕೊಡಲು ‘ಥ್ರೆಡ್ಸ್​’ ಬಿಡುಗಡೆ ಮಾಡಿದ ಫೇಸ್​ಬುಕ್ ಸಂಸ್ಥಾಪಕ!

    ಒಂದು ಕೋಟಿ ಗ್ರಾಹಕರಿಂದ ಗೃಹಜ್ಯೋತಿ ನೋಂದಣಿ! ಬೆಸ್ಕಾಂ ವಿಭಾಗವೇ ಮುಂದು…

    ನೀವು ಈ ನಿರ್ಣಯ ಮಾಡಿಲ್ಲ ಅಂದ್ರೆ ಇಲ್ಲೇ ಪಂಚೆ ಹಾಸಿ ಮಲಗುತ್ತೇವೆ: ರೇವಣ್ಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts