ಅಮೇರಿಕಾ: ಜಗತ್ತಿನಾದ್ಯಂತ ಲಕ್ಷಾಂತರ ಎಲೆಕ್ಟ್ರಿಕ್ ವಾಹನಗಳಿಗೆ ಶಕ್ತಿ ತುಂಬುವ ಲಿಥಿಯಂ-ಐಯಾನ್ ಬ್ಯಾಟರಿ ಸೃಷ್ಠಿಸಿ ಅಭಿವೃದ್ಧಿಪಡಿಸಿದ ಹಾಗೂ ನೊಬೆಲ್ ಪ್ರಶಸ್ತಿ ವಿಜೇತ ಜಾನ್ ಗುಡೆನಫ್ ನಿಧನರಾಗಿದ್ದಾರೆ.
ಇದನ್ನೂ ಓದಿ: ಬೆಂ-ಮೈ ಹೆದ್ದಾರಿ ಸಮಸ್ಯೆ ತಿಳಿಯಲು ಸಮಿತಿ ರಚನೆ: ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಸಭೆ
ಜಾನ್ 101ನೇ ವರ್ಷಕ್ಕೆ ಕಾಲಿಡಲು ಕೇವಲ ಒಂದು ತಿಂಗಳು ಬಾಕಿ ಇತ್ತು. ಜಾನ್ನ ಮರಣವನ್ನು ಆತನ ವಿದ್ಯಾರ್ಥಿ ನಿಕೋಲಸ್ ಗ್ರುಂಡಿಶ್ ದೃಢಪಡಿಸಿದ್ದಾರೆ. ಇವರಿಗೆ 2019ರಲ್ಲಿ ಲಿಥಿಯಂ-ಐಯಾನ್ ಬ್ಯಾಟರಿಗಳ ಅಭಿವೃದ್ಧಿ ಮತ್ತು ರಸಾಯನಶಾಸ್ತ್ರಕ್ಕೆ ನೀಡಿದ ಕೊಡುಗೆಗಾಗಿ ನೊಬೆಲ್ ಪ್ರಶಸ್ತಿ ನೀಡಲಾಗಿತ್ತು.
ಕಂಪ್ಯೂಟರ್‌ಗಳ ರಾಂಡಮ್ ಆಕ್ಸೆಸ್ ಮೆಮೊರಿ (RAM) ಅಭಿವೃದ್ಧಿಯಲ್ಲಿ ಗುಡ್‌ನಫ್ ಮಹತ್ವದ ಪಾತ್ರವನ್ನು ವಹಿಸಿದ್ದ ಜಾನ್, ಜರ್ಮನಿಯ ಜೆನಾದಲ್ಲಿ ಜನಿಸಿದರು. ಯೇಲ್ ವಿಶ್ವವಿದ್ಯಾನಿಲಯದಲ್ಲಿ ಗಣಿತಶಾಸ್ತ್ರವನ್ನು ಅಧ್ಯಯನ ಮಾಡಿದ ನಂತರ, ಅವರು ಎರಡನೇ ಮಹಾಯುದ್ಧದ ಸಮಯದಲ್ಲಿ ಹವಾಮಾನಶಾಸ್ತ್ರಜ್ಞರಾಗಿ US ಸೈನ್ಯಕ್ಕೆ ಸೇವೆ ಸಲ್ಲಿಸಿದರು.
ಇದನ್ನೂ ಓದಿ: ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ಜಾಗೃತಿ ಜಾಥಾ
ನಂತರ ಅವರು ಚಿಕಾಗೋ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಿದರು ಮತ್ತು 1952 ರಲ್ಲಿ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದರು. ನಂತರ ಅವರು ಯುಕೆಯ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡಿದರು. ನಂತರ ಆಸ್ಟಿನ್‌ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. 2008ರಲ್ಲಿ ಜಾನ್, ವಿಟ್ನೆಸ್ ಟು ಗ್ರೇಸ್ ಎಂಬ ಆತ್ಮಚರಿತ್ರೆ ಬರೆದು, ಅದನ್ನು ತನ್ನ ವೈಯಕ್ತಿಕ ಇತಿಹಾಸ ಎಂದು ಕರೆದಿದ್ದರು.(ಏಜೆನ್ಸೀಸ್)