ನ್ಯೂಸ್

ಸಲ್ಮಾನ್​ ಖಾನ್​ಗೆ ಯಾರು...Baba Siddique ಹತ್ಯೆ ಹಿಂದಿನ ಕಾರಣ ತಿಳಿಸಿದ ಲಾರೆನ್ಸ್​ ಗ್ಯಾಂಗ್​

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಾಜಿ ಸಚಿವ, ರಾಷ್ಟ್ರೀಯ ಕಾಂಗ್ರೆಸ್​ ಪಕ್ಷದ ನಾಯಕ ಬಾಬಾ ಸಿದ್ದಿಕ್​ರನ್ನು (Baba Siddique) ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದು, ಇದರ ಹೊಣೆಯನ್ನು ಕುಖ್ಯಾತ ಗ್ಯಾಂಗ್​ಸ್ಟಾರ್​ ಲಾರೆನ್ಸ್​ ಬಿಷ್ನೋಯಿ (lawrence Bishnoi)ಅವರ ಗ್ಯಾಂಗ್​ ಹೊತ್ತಿಕೊಂಡಿದೆ. ಇದೀಗ ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಒಂದು ವೈರಲ್​ ಆಗಿದ್ದು, ಬಾಬಾ ಸಿದ್ದಿಕ್ಕಿ (Baba Siddique) ಅವರ ಹತ್ಯೆಗೆ ಸಲ್ಮಾನ್​ ಖಾನ್​ ಪರೋಕ್ಷ ಕಾರಣರಾದ್ರ ಎಂಬ ಅನುಮಾನ ಮೂಡಲು ಶುರುವಾಗಿದೆ.

ಅಕ್ಟೋಬರ್​ 12ರ ರಾತ್ರಿ ಬಾಂದ್ರಾದಲ್ಲಿರುವ ಬಾಬಾ ಸಿದ್ದಿಕ್ (Baba Siddique)​ ಅವರ ಪುತ್ರ, ಕಾಂಗ್ರೆಸ್ ಶಾಸಕ ಜೀಶಾನ್​ (Zeeshan Siddique) ಅವರ ಕಚೇರಿ ಹೊರಗಡೆ ಸಿದ್ದಿಕ್​ರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಅಕ್ಟೋಬರ್​ 13ರಂದು ಕುಖ್ಯಾತ ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯಿ (Lawrence Bishnoi) ಹತ್ಯೆಯ ಹೊಣೆಯನ್ನು ಹೊತ್ತಿದ್ದರು. ಇದೀಗ ಬಾಬಾ ಸಿದ್ದಿಕ್ಕಿರನ್ನು (Baba Siddique) ಹತ್ಯೆ ಮಾಡಿದರ ಕುರಿತು ಬಿಷ್ನೋಯಿ ಗ್ಯಾಂಗ್​ನ ಸದಸ್ಯರೊಬ್ಬರು ರಿವೀಲ್​ ಮಾಡಿದ್ದು, ಹತ್ಯೆಗೆ ಸಲ್ಮಾನ್​ ಖಾನ್​ (Salman Khan) ಕಾರಣ ಎಂದು ಆರೋಪಿಸಿದ್ದಾರೆ.

ಪೋಸ್ಟ್​ನಲ್ಲಿ ಏನಿದೆ?

ಓಂ, ಜೈ ಶ್ರೀ ರಾಮ್, ಜೈ ಭಾರತ್, ನನಗೆ ಜೀವನದ ಸಾರ ತಿಳಿದಿದೆ ಮತ್ತು ಸಂಪತ್ತು ಅಥವಾ ನನ್ನ ಸ್ವಂತ ದೇಹವು ನನಗೆ ಮುಖ್ಯವಲ್ಲ. ನಾನು ಸರಿಯಾದದ್ದನ್ನು ಮಾಡಿದ್ದೇನೆ ಮತ್ತು ಸ್ನೇಹದ ಕರ್ತವ್ಯವನ್ನು ಗೌರವಿಸುತ್ತೇನೆ. ಸಲ್ಮಾನ್ ಖಾನ್ (Salman Khan), ನಮಗೆ ಈ ಯುದ್ಧ ಬೇಕಾಗಿಲ್ಲ, ಆದರೆ ನೀವು ನಮ್ಮ ಸಹೋದರನನ್ನು (Brother) ಕಳೆದುಕೊಳ್ಳುವಂತೆ ಮಾಡಿದ್ದೀರಿ.

ನಮಗೆ ಯಾರೊಂದಿಗೂ ದ್ವೇಷವಿಲ್ಲ, ಆದರೆ ಸಲ್ಮಾನ್ ಖಾನ್ (Salman Khan) ಮತ್ತು ದಾವೂದ್ ಗ್ಯಾಂಗ್‌ಗೆ ಸಹಾಯ ಮಾಡುವವರು, ಅವರ ಖಾತೆಗಳ ಮೇಲೆ ನಿಗಾ ಇರಿಸಿ ಏನು ಮಾಡಬೇಕೋ ಅದನ್ನೇ ಮಾಡುತ್ತೇವೆ. ಯಾರಾದರೂ ನಮ್ಮ ಸಹೋದರರನ್ನು ಕೊಂದರೆ, ನಾವು ಎಂದಿಗೂ ಪ್ರತಿಕ್ರಿಯಿಸುವುದಿಲ್ಲ ಎಂದು ಲಾರೆನ್ಸ್ ಬಿಷ್ನೋಯಿ ಗ್ಯಾಂಗ್​ನ (lawrence Bishnoi Gang) ಸದಸ್ಯರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.