ನ್ಯೂಸ್

ನಿಮ್ಹಾನ್ಸ್​​ನಲ್ಲಿ ವಿವಿಧ ಯೋಜನೆಗಳಿಗೆ ಕಾರ್ಯನಿರ್ವಹಿಸುವ ಅವಕಾಶ

ಬೆಂಗಳೂರು: ನಿಮ್ಹಾನ್ಸ್​​ನಲ್ಲಿ ರಿಸರ್ಚ್ ಫೆಲೋ ಹಾಗೂ ರಿಸರ್ಚ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.

ಪಿಎಚ್​ಡಿ, ಎಂ.ಫಿಲ್ ವಿದ್ಯಾರ್ಹತೆಯುಳ್ಳವರು ಅರ್ಜಿ ಸಲ್ಲಿಸಬಹುದು. ರಿಸರ್ಚ್ ಫೆಲೋ ಹುದ್ದೆಗೆ 50 ಸಾವಿರ ರೂ. ಹಾಗೂ ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ 35 ಸಾವಿರ ರೂ. ವೇತನ ಇರುತ್ತದೆ.

ಗರಿಷ್ಠ ವಯೋಮಿತಿ 35 ವರ್ಷ ನಿಗದಿಪಡಿಸಲಾಗಿದೆ. ಆಗಸ್ಟ್ 27 ರೊಳಗಾಗಿ ಅರ್ಜಿ ಸಲ್ಲಿಸಬಹುದು ಹಾಗೂ ವಿದ್ಯಾರ್ಹತೆ, ವಯೋಮಿತಿ, ಹುದ್ದೆಯ ಅವಧಿ ಇತ್ಯಾದಿ ವಿವರಗಳಿಗೆ ನಿಮ್ಹಾನ್ಸ್​​ನ ಅಧಿಕೃತ ವೆಬ್​ಸೈಟ್ https://nimhans.ac.in ನೋಡಬಹುದು.