ನ್ಯೂಸ್

5 ಹುದ್ದೆಗೆ 1000 ಅರ್ಜಿದಾರರು! ಉದ್ಯೋಗ ಸಂದರ್ಶನದಲ್ಲಿ ಕಾಲ್ತುಳಿತ, ವಿಡಿಯೋ ವೈರಲ್​

ಗುಜರಾತ್​: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ನೆಟ್ಟಿಗರನ್ನು ಆತಂಕಕ್ಕೆ ದೂಡಿದ್ದು, ಖಾಸಗಿ ಸಂಸ್ಥೆಯ ಐದು ಹುದ್ದೆಗೆ 1000ಕ್ಕೂ ಹೆಚ್ಚು ಅರ್ಜಿದಾರರು ಸ್ಥಳದಲ್ಲಿ ಜಮಾಯಿಸಿರುವುದು ಕಂಡುಬಂದಿದೆ. ಹೋಟೆಲ್​ಗೆ ಅಳವಡಿಸಲಾಗಿದ್ದ ರೇಲಿಂಗ್​​​​ ಮುರಿದುಬೀಳುವ ಮಟ್ಟಿಗೆ ಯುವಕರು ತಳ್ಳಾಡಿರುವುದು ದೃಶ್ಯದಲ್ಲಿ ಸೆರೆಯಾಗಿದೆ.

ಅಂಕಲೇಶ್ವರದ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ಸಂದರ್ಶನಕ್ಕಾಗಿ 1000ಕ್ಕೂ ಹೆಚ್ಚು ಅಭ್ಯರ್ಥಿಗಳು ಸಂಸ್ಥೆಯ ಮುಂದೆ ಜಮಾಯಿಸಿದ್ದರು. ರಾಸಾಯನಿಕ ವಿಭಾಗದಲ್ಲಿ ಖಾಲಿ ಉದ್ಯೋಗಗಳನ್ನು ಭರ್ತಿ ಮಾಡುವ ಗುರಿಯೊಂದಿಗೆ ವಾಕ್-ಇನ್ ಸಂದರ್ಶನವನ್ನು ಆಯೋಜಿಸಲಾಗಿತ್ತು. ಬಿ.ಇ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು. ಕೆಮಿಕಲ್ ಇಂಜಿನಿಯರಿಂಗ್ ಮತ್ತು ಐಟಿಐ ಪ್ರಮಾಣೀಕರಣಗಳಲ್ಲಿ, ಶಿಫ್ಟ್ ಇನ್‌ಚಾರ್ಜ್, ಪ್ಲಾಂಟ್ ಆಪರೇಟರ್, ಸೂಪರ್‌ವೈಸರ್, ಮೆಕ್ಯಾನಿಕಲ್ ಫಿಲ್ಟರ್ ಮತ್ತು ಎಕ್ಸಿಕ್ಯುಟಿವ್ ಹುದ್ದೆಗಳಿಗೆ ನೇರ ಸಂದರ್ಶನ ಕರೆಯಲಾಗಿತ್ತು.

ತಮ್ಮ ಸರದಿ ಬರುವವರೆಗೂ ಕಾಯದ ಅರ್ಜಿದಾರರು, ಹೋಟೆಲ್​ ಮುಂದೆ ನೂಕುನುಗ್ಗಲಿಗೆ ಕಾರಣರಾಗಿದ್ದಾರೆ. ನಾ ಮುಂದು ತಾ ಮುಂದು ಎಂದು ಒಬ್ಬರನೊಬ್ಬರು ತಳ್ಳುತ್ತಿದ್ದ ಯುವಕರು, ರೇಲಿಂಗ್​ನಿಂದ ದಿಢೀರ್​ ಕುಸಿದಿದ್ದಾರೆ. ಪಾರ್ಕಿಂಗ್​ನಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ಯುವಕರು ಬಿದ್ದಿದ್ದು, ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದಾರೆ,(ಏಜೆನ್ಸೀಸ್).